Belagavi News In Kannada | News Belgaum

ಅವಾನ್ಸ್‌ ಫೈನಾನ್ಷಿಯಲ್ ಸರ್ವೀಸಸ್ ಲಿಮಿಟೆಡ್ʼ, ಆರಂಭಿಕ ಷೇರು ಬಿಡುಗಡೆಗಾಗಿ(ಐಪಿಒ) ʻಸೆಬಿʼಗೆ ಕರಡು ದಾಖಲೆ ಪತ್ರ

ಹುಬ್ಬಳ್ಳಿ : ಶಿಕ್ಷಣ ಕೇಂದ್ರಿತ ಬ್ಯಾಂಕೇತರ ಹಣಕಾಸು ಕಂಪನಿಯಾದ (ಎನ್‌ಬಿಎಫ್‌ಸಿ) ʻಅವಾನ್ಸ್‌ ಫೈನಾನ್ಷಿಯಲ್ ಸರ್ವೀಸಸ್ ಲಿಮಿಟೆಡ್ʼ, ಆರಂಭಿಕ ಷೇರು ಬಿಡುಗಡೆಗಾಗಿ(ಐಪಿಒ) ʻಸೆಬಿʼಗೆ ಕರಡು ದಾಖಲೆ ಪತ್ರ (ರೆಡ್‌ ಹೆರಿಂಗ್ ಪ್ರಾಸ್ಪೆಕ್ಟಸ್ -ಡಿಆರ್‌ಎಚ್‌ಪಿ) ಸಲ್ಲಿಸಿದೆ.

ʻಅವಾನ್ಸ್‌ ಫೈನಾನ್ಷಿಯಲ್ ಸರ್ವೀಸಸ್ʼ ಮಾರ್ಚ್ 31, 2024ರ ಹೊತ್ತಿಗೆ ನಿರ್ವಹಣೆಯಲ್ಲಿರುವ ಸ್ವತ್ತುಗಳ ಪ್ರಕಾರ ಭಾರತದಲ್ಲಿ ಎರಡನೇ ಅತಿದೊಡ್ಡ ಶಿಕ್ಷಣ ಕೇಂದ್ರಿತ ಬ್ಯಾಂಕೇತರ ಹಣಕಾಸು ಕಂಪನಿಯಾಗಿದೆ. ಇದು 2023ರ ಹಣಕಾಸು ವರ್ಷದಲ್ಲಿ ಅತಿ ಹೆಚ್ಚು ಸಾಲ ವಿತರಣೆ ಮಾಡಿದ ಎರಡನೇ ಅತಿದೊಡ್ಡ ಕಂಪನಿ ಎನಿಸಿದೆ. ಭಾರತದ ಶಿಕ್ಷಣ ಕೇಂದ್ರಿತ ಬ್ಯಾಂಕೇತರ ಹಣಕಾಸು ಸಂಸ್ಥೆಗಳ ಪೈಕಿ 2024ರ ಹಣಕಾಸು ವರ್ಷದಲ್ಲಿ ಅತಿ ಹೆಚ್ಚು ತೆರಿಗೆಯ ನಂತರದ ಲಾಭ ದಾಖಲಿಸಿದ ಎರಡನೇ ಕಂಪನಿಯಾಗಿ ಹೊರಹೊಮ್ಮಿದೆ. ಕಂಪನಿಯು ವಿದ್ಯಾರ್ಥಿಗಳಿಗೆ ಶಿಕ್ಷಣ ಸಾಲಗಳಿಂದ ಹಿಡಿದು, ಶಿಕ್ಷಣ ಮೂಲಸೌಕರ್ಯ ಸಾಲಗಳ ಮೂಲಕ ಶಿಕ್ಷಣ ಸಂಸ್ಥೆಗಳಿಗೆ ವಿಸ್ತರಣಾ ಬಂಡವಾಳದವರೆಗಿನ ವಿವಿಧ ಉತ್ಪನ್ನಗಳ ಸಂಪೂರ್ಣ ಶ್ರೇಣಿ ಹೊಂದಿದ್ದು, ಶಿಕ್ಷಣ ಕ್ಷೇತ್ರಕ್ಕೆ ಕೊಡುಗೆ ನೀಡುತ್ತಿದೆ . ವಿದ್ಯಾರ್ಥಿ-ಸಾಲಗಳು – ಅಂತರರಾಷ್ಟ್ರೀಯ ಮತ್ತು ಶಿಕ್ಷಣ ಸಾಲಗಳು – ದೇಶೀಯ ವ್ಯವಹಾರಗಳ ಮೂಲಕ ಕಂಪನಿ ವಿದೇಶದಲ್ಲಿ ಅಥವಾ ದೇಶೀಯ ಸಂಸ್ಥೆಗಳಲ್ಲಿ ಅಧ್ಯಯನ ಮಾಡಲು ಪ್ರವೇಶ ಪಡೆದ ಭಾರತೀಯ ವಿದ್ಯಾರ್ಥಿಗಳು ಹಾಗೂ ವೃತ್ತಿಪರರಿಗೆ ಸಾಲಗಳು ಮತ್ತು ಇತರ ಮೌಲ್ಯವರ್ಧಿತ ಸೇವೆಗಳನ್ನು ಒದಗಿಸುತ್ತದೆ. ಇದು ಭಾರತದ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಅಡಮಾನ ಆಧರಿತ ಹಣಕಾಸು ಒದಗಿಸುತ್ತದೆ.

ಕಂಪನಿಯ ಒಟ್ಟು 3500 ಕೋಟಿ ರೂ.ಗಳವರೆಗಿನ ಆರಂಭಿಕ ಷೇರು ಮಾರಾಟವು 1000 ಕೋಟಿ ರೂ.ಗಳವರೆಗಿನ ಈಕ್ವಿಟಿ ಷೇರುಗಳ ಹೊಸ ವಿತರಣೆ ಹಾಗೂ ಪ್ರತಿ ಷೇರಿಗೆ 5 ರೂ.ಗಳ ಮುಖಬೆಲೆಯಂತೆ, 2500 ಕೋಟಿ ರೂ.ಗಳವರೆಗಿನ “ಮಾರಾಟಗಾರ ಷೇರುದಾರ”ರಿಂದ ಮಾರಾಟದ ಪ್ರಸ್ತಾಪ ಒಳಗೊಂಡಿದೆ.

ಮಾರಾಟದ ಪ್ರಸ್ತಾಪವು ʻಆಲಿವ್ ವೈನ್ ಇನ್ವೆಸ್ಟ್‌ಮೆಂಟ್‌ ಲಿಮಿಟೆಡ್ʼನಿಂದ 1758 ಕೋಟಿ ರೂ.ಗಳವರೆಗಿನ ಈಕ್ವಿಟಿ ಷೇರುಗಳು; ʻಇಂಟರ್ನ್ಯಾಷನಲ್ ಫೈನಾನ್ಸ್ ಕಾರ್ಪೊರೇಷನ್‌ನಿಂದ 342 ಕೋಟಿ ರೂ.ಗಳವರೆಗಿನ ಈಕ್ವಿಟಿ ಷೇರುಗಳು ಮತ್ತು ʻಕೇದಾರ ಕ್ಯಾಪಿಟಲ್ ಗ್ರೋತ್ ಫಂಡ್ III ಎಲ್ಎಲ್‌ಪಿʼಯಿಂದ 400 ಕೋಟಿ ರೂ.ಗಳವರೆಗಿನ ಈಕ್ವಿಟಿ ಷೇರುಗಳನ್ನು ಒಳಗೊಂಡಿದೆ. (“ಕೆದಾರ ಕ್ಯಾಪಿಟಲ್” ʻಐಎಫ್‌ಸಿʼಯೊಂದಿಗೆ ಮಾರಾಟಗಾರ ಹೂಡಿಕೆದಾರ ಪಾಲುಗಾರರು) (ಮಾರಾಟಗಾರ ಪ್ರವರ್ತಕ ಪಾಲುದಾರರನ್ನು ಮಾರಾಟ ಮಾಡುವ ಹೂಡಿಕೆದಾರರೊಂದಿಗೆ, ಒಟ್ಟಾಗಿ “ಮಾರಾಟದ ಪಾಲುದಾರರು” ಎಂದು ಉಲ್ಲೇಖಿಸಲಾಗುತ್ತದೆ) (“ಮಾರಾಟಕ್ಕಿರುವ ಕೊಡುಗೆ” ಮತ್ತು ಹೊಸ ವಿತರಣೆಯನ್ನು ಒಟ್ಟಾಗಿ “ಕೊಡುಗೆ” ಎಂದು ಕರೆಯಲಾಗುತ್ತದೆ).

ಕಂಪನಿಯ ಪ್ರವರ್ತಕರು ʻಆಲಿವ್ ವೈನ್ ಇನ್‌ವೆಸ್ಟ್‌ಮೆಂಟ್‌ ಲಿಮಿಟೆಡ್ʼ.

ವ್ಯವಹಾರ ಮತ್ತು ಸ್ವತ್ತುಗಳ ಬೆಳವಣಿಗೆಯಿಂದ ಉಂಟಾಗುವ ಕಂಪನಿಯ ಭವಿಷ್ಯದ ಬಂಡವಾಳ ಅಗತ್ಯಗಳನ್ನು ಪೂರೈಸುವ ನಿಟ್ಟಿನಲ್ಲಿ ಬಂಡವಾಳದ ನೆಲೆಯನ್ನು ಹೆಚ್ಚಿಸಲು ನಿವ್ವಳ ಆದಾಯವನ್ನು ಬಳಸಿಕೊಳ್ಳಲು ʻಅವಾನ್ಸ್‌ ಫೈನಾನ್ಷಿಯಲ್ ಸರ್ವೀಸಸ್ ಲಿಮಿಟೆಡ್ʼ ಪ್ರಸ್ತಾಪಿಸಿದೆ.

ಕರಡು ದಾಖಲೆ ಪತ್ರ (ರೆಡ್ ಹೆರಿಂಗ್ ಪ್ರಾಸ್ಪೆಕ್ಟಸ್) ಮೂಲಕ ನೀಡಲಾಗುವ ಈಕ್ವಿಟಿ ಷೇರುಗಳನ್ನು ಬಿಎಸ್ಇ ಲಿಮಿಟೆಡ್ (“ಬಿಎಸ್ಇ”) ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್‌ ಆಫ್ ಇಂಡಿಯಾ ಲಿಮಿಟೆಡ್ (“ಎನ್ಎಸ್ಇ” ಜೊತೆಗೆ ಬಿಎಸ್ಇ, “ಸ್ಟಾಕ್ ಎಕ್ಸ್ಚೇಂಜ್”) ಷೇರು ವಿನಿಮಯ ಕೇಂದ್ರದಲ್ಲಿ ನೋಂದಾಯಿಸಲು ಪ್ರಸ್ತಾಪಿಸಲಾಗಿದೆ.

ಕೊಟಕ್ ಮಹೀಂದ್ರಾ ಕ್ಯಾಪಿಟಲ್ ಕಂಪನಿ ಲಿಮಿಟೆಡ್, ಅವೆಂಡಸ್ ಕ್ಯಾಪಿಟಲ್ ಪ್ರೈವೇಟ್ ಲಿಮಿಟೆಡ್, ಜೆಪಿ ಮೋರ್ಗನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ನೊಮುರಾ ಫೈನಾನ್ಷಿಯಲ್ ಅಡ್ವೈಸರಿ ಅಂಡ್ ಸೆಕ್ಯುರಿಟೀಸ್ (ಇಂಡಿಯಾ) ಪ್ರೈವೇಟ್ ಲಿಮಿಟೆಡ್, ನುವಾಮಾ ವೆಲ್ತ್ ಮ್ಯಾನೇಜ್ಮೆಂಟ್ ಲಿಮಿಟೆಡ್ (ಈ ಹಿಂದೆ ಎಡೆಲ್ವೀಸ್ ಸೆಕ್ಯುರಿಟೀಸ್ ಲಿಮಿಟೆಡ್ ಎಂದು ಕರೆಯಲಾಗುತ್ತಿತ್ತು) ಮತ್ತು ಎಸ್‌ಬಿಐ ಕ್ಯಾಪಿಟಲ್ ಮಾರ್ಕೆಟ್ಸ್ ಲಿಮಿಟೆಡ್ ಈ ವಿತರಣೆಯ ಬುಕ್ ರನ್ನಿಂಗ್ ಲೀಡ್ ಮ್ಯಾನೇಜರ್‌ಗಳಾಗಿವೆ.