Belagavi News In Kannada | News Belgaum

ದತ್ತಾಂಶ ಮತ್ತು ತಂತ್ರಾಂಶಗಳ ಜ್ಞಾನ ಸಂಶೋಧಕರಿಗೆ ಅತ್ಯವಶ್ಯ ಅಭಿಮತ : ಪ್ರೋ ಸಿ.ಎಂ.ತ್ಯಾಗರಾಜ

 

ದಿನಾಂಕ ೨೪.೦೬.೨೦೨೪ ರಂದು ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಶಿಕ್ಷಣ ವಿಭಾಗದ ಸಭಾಂಗಣದಲ್ಲಿ ಎರಡು ದಿವಸಗಳ ಕಾಲ ಆಯೋಜಿಸಿರುವ ಸಂಶೋಧನಾ ವಿಧಾನದ ಅಡಿಯಲ್ಲಿ ದತ್ತಾಂಶ ವಿಣೆಯಲ್ಲಿ ಬಳಸುವ ಸಮಾಜ ವಿಜ್ಞಾನದ ಸಾಂಖ್ಯೀಕ ಹೊದಿಕೆ (ಎಸ್‌.ಪಿ. ಎಸ್. ಎಸ್.) ಎಂಬ ವಿಷಯದ ಎರಡು ದಿನಗಳ ಕರ‍್ಯಗಾರದ ಉದ್ಘಾಟನಾ ಸಮಾರಂಭದಲ್ಲಿ ಉದ್ಘಾಟಕರಾಗಿ ಮಾತನಾಡಿದ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಾದ ಪ್ರೋಸಿ.ಎಂ. ತ್ಯಾಗರಾಜರವರು ಉನ್ನತ ಶಿಕ್ಷಣದಲ್ಲಿ ಸಂಶೋಧನಾ ವಿದ್ಯರ‍್ಥಿಗಳ ಭಾಗವಹಿಸುವಿಕೆ ಬಹಳ ಪ್ರಾಮುಖ್ಯವಾದುದು. ಪ್ರತಿಯೊಬ್ಬ ಸಂಶೋಧನಾ ವಿದ್ಯರ‍್ಥಿಗಳು ತಮ್ಮ ಸಂಶೋಧನೆಯ ಸಂಖ್ಯಾಶಾಸ್ತ್ರ ವಿಶ್ಲೇ಼ಣೆಯಲ್ಲಿ ಆಯಾ ಕಾಲಮಾನಗಳಿಗೆ ಸರಿಯಾದ ನವೀಕರಣದ ಜ್ಞಾನವನ್ನು ಪಡೆಯಬೇಕು.

ಎಸ್‌ ಪಿ. ಎಸ್. ಎಸ್. ಸಾಂಖ್ಯೀಕ ವಿಶ್ಲೇಷಣೆಗೆ ದತ್ತಾಂಶಗಳನ್ನು ಆಧರಿಸಿದಂತೆ ಸಂಶೋಧನೆ ಪರಿಣಾಮಕಾರಿ ಹಾಗೂ ಸಮಾಜಕ್ಕೆ, ಸರಕಾರಕ್ಕೆ ಶೈಕ್ಷಣಿಕ ಸಂಸ್ಥೆಗಳಿಗೆ ಫಲಪ್ರದವಾಗಲು ಶ್ರಮಿಸಬೇಕು. ವಿದ್ಯರ‍್ಥಿಯು ತಮ್ಮ ಸಂಶೋಧನೆಗಳ ಶೈಕ್ಷಣಿಕ ಪಯಣದಲ್ಲಿ ತನ್ನ ಸಂಶೋದನೆಯಲ್ಲಿ ಸತ್ಯ, ಪ್ರಾಮಾಣಿಕತೆ ಮತ್ತು ವಾಸ್ತವಿಕೆಗಳನ್ನು ಆಧರಿಸಿದಂತೆ ಶೈಕ್ಷಣಿಕ ಸಂಶೋಧನೆ ನಡೆಯಬೇಕು. ಸಂಶೋಧನಾ ಪರಿಕಲ್ಪನೆಗಳು ಸಂಶೋಧನಾ ಉದ್ಧೇಶಗಳು ಸಂಶೋಧನೆಯ ಅಂತಿಮ ಹಂತದಲ್ಲಿ ವೈಜ್ಞಾನಿಕ ತಳಹದಿಯ ಮೇಲೆ ಸಂಶೋಧನೆಗಳು ಸಾಗಬೇಕು. ಪ್ರಾಥಮಿಕ ಅಥವಾ ದ್ವಿತೀಯ ಸಂಶೋಧಕ ಆಧಾರಗಳನ್ನು ಪ್ರಾಮಾಣಿಕವಾಗಿ ಹುಡುಕಿದರೆ ಎಸ್‌ ಪಿ. ಎಸ್. ಎಸ್. ಪ್ಯಾಕೇಜ್‌ ನಲ್ಲಿ ಉತ್ತರ ದೊರೆಯಲಿದೆ.

 

ಸಂಶೋಧನಾ ವಿದ್ಯರ‍್ಥಿಗಳು ಕನಿಷ್ಠ ಐದು ಸಂಶೋಧನಾ ಪ್ರಬಂಧಗಳನ್ನು ಅಧ್ಯಯನ ಮಾಡಬೇಕು. ಐವತ್ತು ಸಂಶೋಧನಾ ಪುಸ್ತಕಗಳನ್ನು ಓದಬೇಕು ಹಾಗೂ ಸುಮಾರು ೫೦೦ ಕ್ಕಿಂತ ಹೆಚ್ಚು ಸಂಶೋಧನಾ ಲೇಖನಗಳನ್ನು ಅಧ್ಯಯನ ಮಾಡಬೇಕು. ಅವುಗಳ ಅವಲೋಕನ ತಮ್ಮ ಸಂಶೋಧನೆಗಳಿಗೆ ಸ್ವ-ಮೌಲ್ಯಮಾಪನ ಮಾಡಿಕೊಳ್ಳಲು ಜ್ಞಾನ ಇಮ್ಮಡಿಗೊಳ್ಳುತ್ತದೆ. ವಿಶ್ವವಿದ್ಯಾಲಯಗಳು ಕಲಿಕಾ ಕೇಂದ್ರಗಳಾಗಬೇಕು. ವಿದ್ಯರ‍್ಥಿಗಳಿಗೆ ಸ್ನೇಹಮಯವಾಗಿರಬೇಕು ಹಾಗೂ ಜ್ಞಾನದ ತಾಣವಾಗಿರಬೇಕು ಎಂದು ತಮ್ಮ ಉದ್ಘಾಟನಾ ನುಡಿಗಳಾನ್ನಾಡಿದರು.

ಸಮಾರಂಭ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಿಕ್ಷಣಶಾಸ್ತ್ರ ವಿಭಾಗದ ಡೀನ್‌ ಹಾಗೂ ಅಧ್ಯಕ್ಷರಾದ ಪ್ರೊ.ಎಂ.ಸಿ. ರ‍್ರಿಸ್ವಾಮಿ ಇವರು ಸಂಶೋಧನೆಗಳು ಗುಣಾತ್ಮಕತೆಯಿಂದ ಕೂಡಿರಬೇಕು. ಸತ್ಯಶೋಧನೆಯ ಸಂಶೋಧನೆ ವಾಸ್ತವ ಅಂಶಗಳು ಶೋಧನೆಯಲ್ಲಿ ಪ್ರತಿಬಿಂಬಿಸಬೇಕಾಗಿದೆ. ಯಾವುದೇ ಸಂಶೋಧನೆ ಪ್ರಾಥಮಿಕ ಅಥವಾ ದ್ವೀತಿಯ ಮೂಲದಲ್ಲಿ ದೊರೆಯುವ ಮೂಲಾಧಾರಗಳು ಸಂಶೋಧನೆಗಳು ಸಮಸ್ಯೆಗೆ ಪರಿಹಾರ ಹುಡುಕುತ್ತವೆ, ಆ ಮೂಲಾಧಾರಗಳ ಕಡೆ ಸಂಶೋಧಕನ ದೃಷ್ಠಿ-ಬೌದ್ಧಿಕತೆ- ಪ್ರಾಮಾಣೀಕತೆ –ಪಕ್ಷಿನೋಟ ಇರಬೇಕು.

ಸಾಕ್ಷರತೆಯನ್ನು ನೀಡುವ, ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸುವ, ಸಮಾಜವನ್ನು ಸಾಮಾಜಿಕ ಸಮಾನತೆಗೆ ಬೇಕಾಗುವ ಕ್ರಮಗಳು ಹಾಗೂ ಮನುಷ್ಯನ ಜ್ಞಾನ ಜಾಗತಿಕ ಲೋಕಕ್ಕೆ –ಪ್ರಗತಿಗೆ ಹಾಗೂ ಬದುಕಿನ ಸರ‍್ಥಕತೆಯತ್ತ ಗಮನ ಹರಿಸುತ್ತ ಸಂಶೋಧನೆಗಳು ಸಾಗಬೇಕು. ಸಮಾಜ ವಿಜ್ಞಾನಗಳ ವಿಷಯಗಳಲ್ಲಿ ಬಳಸಬೇಕಾದ ಸಾಂಖ್ಯಿಕ ವಿಶ್ಲೇಷಣೆ ಸಂಶೋಧನೆಗಳ ಮಹತ್ವತೆಯನ್ನು ಹಾಗೂ ಸಮಾಜಕ್ಕೆ ಆಗುವ ಸಮಸ್ಯೆಗಳಿಗೆ ಪ್ರಾಮಾಣಿಕವಾದ ಉತ್ತರ ನೀಡುವ ಪ್ರಯತ್ನ ಮತ್ತು ಕೈಗೊಳ್ಳಬಹುದಾದ ತರ‍್ಮಾನಗಳಿಗೆ ದಾರಿ ತೋರಿಸುವ ಪ್ರಯತ್ನವಾಗಿದೆ.

 

ಎರಡು ದಿನಗಳ ಕರ‍್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಡಾ.ಸ್ಯಾಮಸನ್ ಆರ್. ವಿಕ್ಟರ್‌ ಅವರು ಆರು ತಾಂತ್ರಿಕ ಸಮಾವೇಶಗಳನ್ನು ಎಸ್‌ಪಿ.ಎಸ್.ಎಸ್.ಗೆ ಸಂಬಂಧಿಸಿದಂತೆ ಸಂಖ್ಯಾಶಾಸ್ತ್ರ, ದತ್ತಾಂಶ, ಚರಾಂಶಗಳ ರ‍್ಥೈಸುವಿಕೆ, ಪರಿಕಲ್ಪನೆಗಳ ಪರೀಕ್ಷೀಸುವಿಕೆ ಹಾಗೂ ಸಹಸಂಬಂಧಗಳ ಬಗ್ಗೆ ಉಪನ್ಯಾಸ ನೀಡಲಿದ್ದಾರೆ.

ಕರ‍್ಯಕ್ರಮದಲ್ಲಿ ಎರಡು ದಿನಗಳ ಕರ‍್ಯಗಾರಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಮಧ್ಯಪ್ರದೇಶದ ಅಮರ ಕಂಟಕದ ಇಂದಿರಾಗಾಂಧಿ ರಾಷ್ತ್ರೀಯ ಬುಡಕಟ್ಟು ವಿಶ್ವವಿದ್ಯಾಲಯದ ಅಧ್ಯಾಪಕರಾದ ಡಾ.ಸ್ಯಾಮಸನ್ಆರ್. ವಿಕ್ಟರ್‌ ಹಾಗೂ ಶಿಕ್ಷಣ ವಿಭಾಗದ ಬೋಧಕ ರ‍್ಗದ ಡಾ.ಸುಷ್ಮಾ. ಆರ್. ಮತ್ತು ಡಾ.ಕನಕಪ್ಪ ಪೂಜಾರ ಉಪಸ್ಥಿತರಿದ್ದರು ಮತ್ತು ಬೋಧಕೇತರ ಸಿಬ್ಬಂದಿ, ಸ್ನಾತಕೋತ್ತರ ವಿದ್ಯರ‍್ಥಿಗಳು ಭಾಗವಹಿಸಿದ್ದರು.

ಕರ‍್ಯಗಾರದಲ್ಲಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಶಿಕ್ಷಣ ವಿಭಾಗ ಹಾಗೂ ವಿವಿಧ ಸ್ನಾತಕೊತ್ತರ ವಿಭಾಗಗಳ ಅಧ್ಯಯನ ಮಾಡುತ್ತಿರುವ ಸಂಶೋಧನಾ ವಿದ್ಯರ‍್ಥಿಗಳು ಪ್ರತಿನಿಧಿಗಳಾಗಿ ಒಟ್ಟು ೬೬ ಭಾಗವಹಿಸಿದ್ದರು. ಶಿಕ್ಷಣ ವಿಭಾಗದ ವಿದ್ಯರ‍್ಥಿಗಳಾದ ಮುರುಗೇಶ ಸ್ವಾಗತಿಸಿದರು. ಶ್ರೀಮತಿ ಪ್ರಿಯಾ ಬೀಳಗಿ ವಂದಿಸಿದರು, ರ‍್ಚನಾ ಪೂಜಾರ ನಿರೂಪಿಸಿದರು.