Belagavi News In Kannada | News Belgaum

ಬಂಡೆಗೆ ಟಕ್ಕರ್ ಕೊಡಲು ಸಿದ್ಧತೆ ನಡೆಸಿದ ಶಾಸಕ ರಮೇಶ ಜಾರಕಿಹೊಳಿ

ಬೆಳಗಾವಿ: ಎದುರಾಳಿ ಡಿಕೆಶಿ ಮಣಿಸಲು ಬಹಿರಂಗ ಸಮರಕ್ಕೆ  ಶಾಸಕ ರಮೇಶ ಜಾರಕಿಹೊಳಿ ಮುಂದಾಗಿದ್ದಾರೆ ಎನ್ನಲಾಗಿದೆ.

ಹೌದು.. ಸದ್ಯ ಶಾಸಕ ರಮೇಶ್ ಜಾರಕಿಹೊಳಿ ಹಾಗೂ ಕುಮಾರಸ್ವಾಮಿ ಮುನಿಸು ಮರೆತು ಒಂದಾಗಿದ್ದು, ಎದುರಾಳಿ ಡಿಕೆಶಿ ಮಣಿಸಲು ಇಬ್ಬರು ನಾಯಕರು ಒಂದಾಗಿದ್ದಾರೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಜೋರಾಗಿ ಕೇಳಿ ಬರುತ್ತಿದೆ.,

ಡಿಕೆಶಿ ತಾವು ಪ್ರತಿನಿಧಿಸುವ ಕನಕಪುರ ‌ಕ್ಷೇತ್ರವನ್ನು ಸಹೋದರ ಸುರೇಶ್ ಗೆ ಬಿಟ್ಟುಕೊಟ್ಟು ಚನ್ನಪಟ್ಟಣ ಉಪ‌ ಚುನಾವಣೆ ಎದುರಿಸಲು ಡಿಕೆಶಿ ಸಿದ್ಧತೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಡಿಕೆಶಿ ಉಪ ಚುನಾವಣೆ ಕಣಕ್ಕೆ ಇಳಿಯುವ ಸುದ್ದಿ ಹೊರಬರುತ್ತಿದ್ದಂತೆ ಇತ್ತ ರಮೇಶ್ ಜಾರಕಿಹೊಳಿ ಆ್ಯಕ್ಟಿವ್ ಆಗಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸೋಲಿನ ನಂತರ ಫಿನಿಕ್ಸ್‌ ಪಕ್ಷಿಯಂತೆ  ಎದ್ದಿರುವ  ಶಾಸಕ ರಮೇಶ ಜಾರಕಿಹೊಳಿ  ಅವರು, ಇನ್ನೊಮ್ಮೆ ಕನಕಪುರ ಬಂಡೆಗೆ ಟಕ್ಕರ್ ಕೊಡಲು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ.