Belagavi News In Kannada | News Belgaum

ತಾಲೂಕ್ ಪಂಚಾಯತ್ ಮೇಲೆ ಲೋಕಾಯುಕ್ತ ದಿಡಿರ್ ದಾಳಿ

ಬೆಳಗಾವಿ: ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಕೈಗಾರಿಕಾ ಉದ್ದೇಶ ಬಡಾವಣೆಯ ನಕ್ಷೆಯನ್ನು ಅನುಮೋದನೆ ಪಡೆಯಲು 40 ಸಾವಿರ ರೂಪಾಯಿ ಲಂಚ ಹಣ ಬೇಡಿಕೆ ಇಟ್ಟು ಪಡೆದುಕೊಳ್ಳುತ್ತಿರುವಾಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ ಬಲೆಗೆ ಸಿಕ್ಕಿಬಿದ್ದಿದ್ದಾರೆ.
ಬೆಳಗಾವಿ ತಾಲೂಕಿನ ನಾವಗೆ ಗ್ರಾಮದ ಸರ್ವೆ ನಂಬರ್ 32/4 ರಲ್ಲಿ 22 ಗುಂಟೆ 08 ಆನೆ ವಿಸ್ತರಣಾ ಕೃಷಿ ಜಮೀನಿನಲ್ಲಿ ಕ್ರಷರ್ ಸ್ಟೋನ್ ಕೈಗಾರಿಕಾ ಮಾಡಲು ಕಾರ್ಯನಿರ್ವಾಹಕ ಅಧಿಕಾರಿ ತಾಲೂಕು ಪಂಚಾಯತ್ ಬೆಳಗಾವಿ ಅವರಿಂದ ವಿನ್ಯಾಸ ನಕ್ಷೆಯನ್ನು ಅನುಮೋದನೆ ಮಾಡುವ ಸಲುವಾಗಿ, ಪಿರಿಯಾದ್ ಚಹಾ ನವಾಜ ಖಾನ್ ಅಬ್ದುಲ್ ರೆಹಮಾನ್ ಪಠಾನ್ ಸಖಿಲ್ ಕಾಕತಿವೇಸ್ ಬೆಳಗಾವಿ ಇವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು.

ದೂರಿನ ಅನ್ವಯ ಕಾರ್ಯಚರಣೆ ನಡೆಸಿದ ಲೋಕಾಯುಕ್ತರು ಸದರಿ ವಿನಾಶ ನಕ್ಷೆಯನ್ನು ಅನುಮೋದನೆ ಸಲುವಾಗಿ ರಾಮ್ ರೆಡ್ಡಿ ಪಾಟೀಲ್ ಕಾರ್ಯ ನಿರ್ವಾಹಕ ಅಧಿಕಾರಿ ತಾಲೂಕು ಪಂಚಾಯತ್ ಬೆಳಗಾವಿ ಹಾಗೂ ಕೇಸ್ ವರ್ಕರ್ ಸನದಿ ಕಾರ್ಯನಿರ್ವಾಹಕ ಅಧಿಕಾರಿ ಕಚೇರಿ ತಾಲೂಕ ಪಂಚಾಯತ್ ಬೆಳಗಾವಿ ಇವರು ದೂರದಾರರಿಗೆ 40 ಸಾವಿರ ರೂಪಾಯಿ ಬೇಡಿಕೆ ಇಟ್ಟಿದ್ದರು.

ಸಹನವಾಜ್ ಖಾನ್ ಅಬ್ದುಲ್ ರೆಹಮಾನ್ ಪಠಾಣ್ ಬೆಳಗಾವಿ ಲೋಕಾಯುಕ್ತ ಕಚೇರಿಗೆ ದೂರನ್ನು ನೀಡಿದ್ದರು. ತಾಲೂಕ್ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಮ್ ರೆಡ್ಡಿ ಪಾಟೀಲ್ ಹಾಗೂ ತಾಲೂಕು ಪಂಚಾಯತ್ ಕಚೇರಿ ಸಿಬ್ಬಂದಿ ವೈಜನಾಥ್ ಸನದಿ ಇವರ ಮೇಲೆ ಬೆಳಗಾವಿ ಲೋಕಾಯುಕ್ತ ಕಚೇರಿ ಪ್ರಕರಣ ದಾಖಲಿಸಿಕೊಂಡಿದೆ. ಬೆಳಗಾವಿ ಲೋಕಾಯುಕ್ತ ಎಸ್. ಪಿ ಹನುಮಂತ ರಾಯ್ ಐಪಿಎಸ್ ಯವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು.