Belagavi News In Kannada | News Belgaum

ಹಾಥರಸ್​​ನಲ್ಲಿ ಸತ್ಸಂಗ ವೇಳೆ ಕಾಲ್ತುಳಿತ:: 27 ಮಂದಿ ಸಾವು

ಉತ್ತರ ಪ್ರದೇಶ: ಮಂಗಳವಾರ ಉತ್ತರ ಪ್ರದೇಶದ ಹಾಥರಸ್ ಜಿಲ್ಲೆಯಲ್ಲಿ ಧಾರ್ಮಿಕ ಕಾರ್ಯಕ್ರಮದ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ 23 ಮಹಿಳೆಯರು, ಮೂವರು ಮಕ್ಕಳು ಮತ್ತು ಒಬ್ಬ ಪುರುಷ ಸೇರಿದಂತೆ ಕನಿಷ್ಠ 27 ಜನರು ಸಾವಿಗೀಡಾಗಿದ್ದಾರೆ..

ಹಾಥರಸ್ ಜಿಲ್ಲೆಯ ಸಿಕಂದ್ರ ರಾವು ಪ್ರದೇಶದ ರಾತಿ ಭನ್‌ಪುರ್ ಗ್ರಾಮದಲ್ಲಿ ವಿಶೇಷವಾಗಿ ಹಾಕಲಾದ ಟೆಂಟ್‌ನಲ್ಲಿ ಧಾರ್ಮಿಕ ಬೋಧಕರೊಬ್ಬರು ತಮ್ಮ ಅನುಯಾಯಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದಾಗ ಈ ಘಟನೆ ನಡೆದಿದೆ..

ಹೆಚ್ಚಿನ ಜನರು ‘ಸತ್ಸಂಗ’ದಲ್ಲಿ ಭಾಗವಹಿಸಿದ್ದರಿಂದ ಅಲ್ಲಿ ಉಸಿರುಗಟ್ಟಿ ಜನರಲ್ಲಿ ಅಸ್ವಸ್ಥತೆಗೆ ಕಾರಣವಾಯಿತು ಎಂದು ತೋರುತ್ತದೆ. ಆಗ ಜನರು ಹೊರಗೆ ಓಡಲು ಆರಂಭಿಸಿದ್ದರಿಂದ ಕಾಲ್ತುಳಿತ ಉಂಟಾಯಿತು. ಕಾರ್ಯಕ್ರಮದ ಸಮಯದಲ್ಲಿ ಭಾರೀ ಸೆಖೆ ಇತ್ತು ಎಂದು ಪೊಲೀಸರು ಹೇಳಿದ್ದಾರೆ..

ಅದು ಧಾರ್ಮಿಕ ಬೋಧಕ ಭೋಲೆ ಬಾಬಾರ ಸತ್ಸಂಗ ಸಭೆ. ಮಂಗಳವಾರ ಮಧ್ಯಾಹ್ನ ಇಟಾಹ್ ಮತ್ತು ಹಾಥರಸ್  ಜಿಲ್ಲೆಯ ಗಡಿಯಲ್ಲಿರುವ ಸ್ಥಳದಲ್ಲಿ ಒಟ್ಟುಗೂಡಲು ತಾತ್ಕಾಲಿಕ ಅನುಮತಿಯನ್ನು ನೀಡಲಾಗಿದೆ ಎಂದು ಇನ್ಸ್‌ಪೆಕ್ಟರ್ ಜನರಲ್ ಶಲಭ್ ಮಾಥುರ್ ಹೇಳಿದ್ದಾರೆ..

ಹಾಥರಸ್‌ನ ಗಂಗಾ ದೇವಿ (70), ಕಾಸ್‌ಗಂಜ್‌ನ ಪ್ರಿಯಾಂಕಾ (20), ಮಥುರಾದ ಜಸೋದಾ (70) ಮತ್ತು ಇಟಾಹ್‌ನ ಸರೋಜ್ ಲತಾ (60) ಮೃತರೆಂದು ಗುರುತಿಸಲಾಗಿದೆ. ಮೃತ ಇಬ್ಬರು ಮಕ್ಕಳನ್ನು ಕಾವ್ಯ (4) ಮತ್ತು ಆಯುಷ್ (8) ಎಂದು ಗುರುತಿಸಲಾಗಿದ್ದು ಇಬ್ಬರೂ ಶಹಜಾನ್‌ಪುರದವರು. ಧಾರ್ಮಿಕ ಕಾರ್ಯಕ್ರಮ ಮುಗಿದಾಗ ಎಲ್ಲರೂ ಹೊರಗೆ ಹೋಗುವ ಅವಸರದಲ್ಲಿ ಕಾಲ್ತುಳಿತ  ಸಂಭವಿಸಿದೆ ಎಂದು ಸಂತ್ರಸ್ತರೊಬ್ಬರು ಹೇಳಿದ್ದಾರೆ..