Belagavi News In Kannada | News Belgaum

ಸಿದ್ದರಾಮಯ್ಯ ಬದಲಿಗೆ ನನ್ನನ್ನೇ ಸಿಎಂ ಮಾಡಿ’ ಎಂದ ಭೂಪ!

ವಿಜಯಪುರ: ಸಿಎಂ ಬದಲಾವಣೆ ಕುರಿತು ಒಕ್ಕಲಿಗ ಸ್ವಾಮೀಜಿ ಹೇಳಿಕೆ ತಾರಕಕ್ಕೇರಿರುವ ಬೆನ್ನಲ್ಲೇ ಯುವಕನೊಬ್ಬ ಸಿದ್ದರಾಮಯ್ಯ ಬದಲಿಗೆ ನನ್ನನ್ನೇ ಸಿಎಂ ಮಾಡಿ ಎಂದು ಹೇಳಿಕೆ ನೀಡಿರುವುದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ..

ಬಸವನ ಬಾಗೇವಾಡಿತಾಲೂಕಿನ ಉಪ್ಪಲದಿನ್ನಿಯ ಸತೀಶ್ ಲಮಾಣಿ ಎಂಬ ಯುವಕನಿಂದ ವಿಡಿಯೋ ಮಾಡಿ ಹೇಳಿಕೆ. ನನ್ನ ಸಿಎಂ ಮಾಡಿದರೆ ದೇಶ ಅಭಿವೃದ್ಧಿ ಆಗೋದಿಲ್ವ? ಎಂದು ಪ್ರಶ್ನಿಸಿರುವ ಯುವಕ. ನಾನು ಕೂರಬೇಕಾದ ಸಿಎಂ ಚೇರ್‌ನಲ್ಲಿ ಬೇರೊಬ್ಬರು ಕುಳಿತಿದ್ದಾರೆ. ನಾನು ಕೂಡಬೇಕಾದ ಚೇರ್‌ ಮೇಲೆ ಬೇರೊಬ್ಬರು ಕೂತಿದರೆ ರಾಜ್ಯಕ್ಕೆ ತೊಂದರೆಯಾಗುತ್ತೆ. ಮೊದಲು ನನ್ನ ಚೇರ್ ನನಗೆ ಬಿಡಿ ಎಂದಿರುವ ಭೂಪ..

ಬಾಗೇವಾಡಿ ಬಸವೇಶ್ವರ ದೇಗುಲದ ಶಿವಲಿಂಗದ ಎದುರು ನಿಂತು ಆಣೆ ಮಾಡಿ ವಿಡಿಯೋ ಮಾಡಿರುವ ಯುವಕ. ‘ಶಿವಲಿಂಗದ ಆಣೆಗೂ ನಾನು ಹೇಳೋದು ಸತ್ಯ, ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ನನ್ನನ್ನ ಸಿಎಂ ಮಾಡದೇ ಇದರೆ ದೇಶದ ಅಭಿವೃದ್ಧಿ ಹದಗೆಡುತ್ತೆ. ಹಿಂದೆ ಬೊಮ್ಮಾಯಿ ಸಿಎಂ ಆಗಿದ್ದಾಗಲೂ ನಾನು ನನ್ನ ಸೀಟು ಬಿಡುವಂತೆ ಹೇಳಿದ್ದೆ. ಆದರೆ ಅವರು ಕೇಳಲಿಲ್ಲ. ರಾಜ್ಯದಲ್ಲಿ ಏನಾಯ್ತು ಅಂತಾ ಗೊತ್ತಾ ಇದೆ. ನನ್ನನ್ನ ಸಿಎಂ ಮಾಡದ್ದಕ್ಕೆ ಅವರು ಅಧಿಕಾರ ಕಳೆದುಕೊಂಡರು..

ಇದೀಗ ಸಿದ್ದರಾಮಯ್ಯ ಕೂಡ ನನ್ನ ಸೀಟು ಮೇಲೆ ಕುಳಿತಿದ್ದಾರೆ. ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ನನ್ನನ್ನು ಸಿಎಂ ಆಗಿ ಮಾಡಲಿ ಎಂದು ವಿಡಿಯೋ ಹರಿಬಿಟ್ಟಿರುವ ಭೂಪ. ಯುವಕನ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ತರಹೇವಾರಿ ಪ್ರತಿಕ್ರಿಯೆಗಳು  ಬಂದಿವೆ.