Belagavi News In Kannada | News Belgaum

ಕೇಂದ್ರ ತಂಡ ಭೇಟಿ: ನರೇಗಾ ಕಾಮಗಾರಿಗೆ ಮೆಚ್ಚುಗೆ

ಹುಕ್ಕೇರಿ: ತಾಲೂಕಿನ ವಿವಿಧ ಗ್ರಾಮಗಳಿಗೆ ಮಂಗಳವಾರ ಭೇಟಿ ನೀಡಿದ ಕೇಂದ್ರ ಜಲಶಕ್ತಿ ಅಭಿಯಾನ ತಂಡವು ನರೇಗಾ ಹಾಗೂ ಸ್ವಾಭಾವಿಕ ಸಂಪನ್ಮೂಲಗಳ ನಿರ್ವಹಣೆ ಕಾಮಗಾರಿಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿತು.

ತಾಲೂಕಿನ ಬಡಕುಂದ್ರಿ, ಹೊಸೂರ ಮತ್ತು ಹೊಸಪೇಟ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಕೈಗೊಂಡ ಈ ಎರಡು ಯೋಜನೆಗಳ ಕಾಮಗಾರಿಗಳ ಗುಣಮಟ್ಟವನ್ನು ಪರಿಶೀಲಿಸಲಾಯಿತು.

ಕೇಂದ್ರ ಜಲಶಕ್ತಿ ಅಭಿಯಾನದ ಅಧ್ಯಕ್ಷ ಡಿ.ಬಿ. ಸ್ವಾಮಿ, ಕೇಂದ್ರೀಯ ಅಂತರ್ಜಲ ಸಮಿತಿಯ ವಿಜ್ಞಾನಿ ಡಾ. ಸುಚೇತನಾ ಬಿಶ್ವಾಸ್ ಅವರ ನೇತೃತ್ವದ ತಂಡವು ಬಡಕುಂದ್ರಿ, ಯರಗಟ್ಟಿ ಅಮೃತ ಸರೋವರ ಮತ್ತು ಬೋರವೆಲ್ ರಿಚಾರ್ಜ ಪಿಟ್ ಕಾಮಗಾರಿಗಳನ್ನು ವೀಕ್ಷಿಸಿತು..

 

ಹೊಸೂರ ಗ್ರಾಮ ಪಂಚಾಯತಿ ವ್ಯಾಪ್ತಿಯ ಜೋಳದ ಗುಡ್ಡದಲ್ಲಿ ನರೇಗಾದಡಿ ಕೈಗೆತ್ತಿಕೊಂಡ ಇಂಗು ಗುಂಡಿ ನಿರ್ಮಾಣ ಕಾಮಗಾರಿ ವೀಕ್ಷಿಸಲಾಯಿತು. ಇದೇ ವೇಳೆ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದ ಸಂಜೀವಿನ ಮಹಿಳಾ ಸಂಘದ ಸದಸ್ಯರ ಜೊತೆ ಚರ್ಚಿಸಿದರು. .

 

ಬಳಿಕ ಹೊಸಪೇಟ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಸವನಗುಡ್ಡದಲ್ಲಿ ಹೊಸ ಕೆರೆ ನಿರ್ಮಾಣ ಕಾಮಗಾರಿ ವೀಕ್ಷಿಸಿ, ಕೂಲಿ ಕಾರ್ಮಿಕರ ಜೊತೆ ಚರ್ಚಿಸಿದರು. ನಂತರ ನರೇಗಾದಡಿ ಹಿಡಕಲ್ ಜಲಾಶಯ ಮುಂಭಾಗದಲ್ಲಿ ಬಿದಿರು ನಾಟಿ, ದಟ್ಟಾರಣ್ಯ ಕಾಮಗಾರಿ ವೀಕ್ಷಣೆ ಮಾಡಿದರು. ಅಲ್ಲಿಂದ ಚೆಕ್ ಡ್ಯಾಂ ವೀಕ್ಷಣೆ ಮಾಡಿದರು. ನಂತರ ಹೊಸೂರ ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಕುಡಿಯುವ ನೀರಿನ ಗುಣಮಟ್ಟವನ್ನು ಪರೀಕ್ಷಿಸಲಾಯಿತು..

 

ಜಿಪಂ ಯೋಜನಾ ನಿರ್ದೇಶಕ ರವಿ ಬಂಗಾರೆಪ್ಪನವರ್, ತಾಪಂ ಪ್ರವೀಣ್ ಕಟ್ಟಿ, ನರೇಗಾ ಸಹಾಯಕ ನಿರ್ದೇಶಕ ಪಿ.ಲಕ್ಷ್ಮೀನಾರಾಯಣ್, ಜಿಪಂ ಸಹಾಯಕ ಜಿಲ್ಲಾ ಕಾರ್ಯಕ್ರಮ ಸಂಯೋಜಕ ಬಸವರಾಜ್, ಹಿಡಕಲ್ ಡ್ಯಾಮ್ ಬೃಂದಾವನ ಪ್ರಾಜೆಕ್ಟ್ ವಿಶೇಷ ಅಧಿಕಾರಿ ರಾಜಶೇಖರ್ ಪಾಟೀಲ್, ಜಿಲ್ಲಾ ಮಾಹಿತಿ ಸಂವಹನ ಸಂಯೋಜಕ ಪ್ರಮೋದ್, ಪಿಡಿಒ ಮಲ್ಲಿಕಾರ್ಜುನ್ ಗುಡಸಿ, ತಾಂತ್ರಿಕ ಸಂಯೋಜಕ ಅರ್ಷದ್ ನೇರ್ಲಿ, ಸಿಬ್ಬಂದಿಗಳಾದ ದೇವೇಗೌಡ ಪಾಟೀಲ, ಶಂಕರ ಶಿರಗುಪ್ಪಿ, ಮಹಾಂತೇಶ ಬಾದವಾನಮಠ, ಎನ್ಆರಎಲ್ಎಮ್ ತಾಲೂಕು ಕಾರ್ಯಕ್ರಮ ಸಂಯೋಜಕ ರಘು ಕಾಂಬಳೆ, ಭೀಮಶಿ ಗೋರಕನಾಥ ಮತ್ತಿತರರು ಉಪಸ್ಥಿತರಿದ್ದರು..