Belagavi News In Kannada | News Belgaum

ಆಸ್ತಿಗಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ ಉದ್ಯಮಿ ವಿಜಯ ಸಂಕೇಶ್ವರ್ ಪುತ್ರಿ.!

ಬೆಳಗಾವಿ: ಆಸ್ತಿಗಾಗಿ ಮಾಟ ಮಂತ್ರ ಮಾಡಿದ್ದಾರೆ ಎಂದು ಆರೋಪಿಸಿ ಖ್ಯಾತ ಉದ್ಯಮಿ ಡಾ.ವಿಜಯ ಸಂಕೇಶ್ವರ ಪುತ್ರಿ, ಮಾಜಿ ಸಂಸದ ಎಸ್‌.ಬಿ ಸಿದ್ನಾಳರ ಕಿರಿಯ ಸೊಸೆ ದೀಪಾ ಸಿದ್ನಾಳ ಅವರು ಕಾನೂನು ಸಮರ ಸಾರಿದ್ದಾರೆ. ಬೆಳಗಾವಿ ನಗರದ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ದೀಪಾ ಸಿದ್ನಾಳ ಅವರು BNS 1860, ಸೆಕ್ಷನ್ 120ಬಿ, 506, 307, ಮಾಟ ಮಂತ್ರ ಕಾಯ್ದೆ 2007 ಅಡಿಯಲ್ಲಿ ದೂರು ಕೂಡ ದಾಖಲಿಸಿದ್ದಾರೆ.
ಬೆಳಗಾವಿ ಮಾಜಿ ಸಂಸದರ ಕೌಟುಂಬಿಕ ಕಲಹ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಉದ್ಯಮಿ ಡಾ.ವಿಜಯ ಸಂಕೇಶ್ವರ ಪುತ್ರಿ ದೀಪಾ ಸಿದ್ನಾಳ ಅವರು ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ವಿಜಯಕಾಂತ ಹಾಲಿನ ಡೇರಿ ಕಬಳಿಸಲು ಹುನ್ನಾರ ಮಾಡಿದ್ದಾರೆ ಎನ್ನುವ ಗಂಭೀರ ಆರೋಪ ಮಾಡಿದ್ದಾರೆ.
ಆಸ್ತಿಗಾಗಿ ಮಾಟ, ಮಂತ್ರ? ವಿಜಯ ಸಂಕೇಶ್ವರ್ ಪುತ್ರಿ ದೀಪಾ ಸಿದ್ನಾಳ ಅವರು ಮಾಜಿ ಸಂಸದ ಎಸ್‌.ಬಿ ಸಿದ್ನಾಳರ ಕಿರಿಯ ಮಗ ಶಿವಕಾಂತ ಸಿದ್ನಾಳ ಅವರನ್ನು ಮದುವೆ ಆಗಿದ್ದರು. ಇತ್ತೀಚಿಗೆ ಶಿವಕಾಂತ್ ಸಿದ್ನಾಳ್‌ ಸಾವನ್ನಪ್ಪಿದ್ದಾರೆ. ನನ್ನ ಪತಿ ಸಾವಿಗೂ ಮಾಟ, ಮಂತ್ರ ಕಾರಣವಿರಬಹುದೆಂಬ ಶಂಕೆ ವ್ಯಕ್ತಪಡಿಸಿದ್ದು, ಅವರ ಸಮಾಧಿ ಸುತ್ತಮುತ್ತ ಮಾಟಮಂತ್ರ ಮಾಡಿದ್ದಾರೆಂದು ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ.


ಏನಿದು ಆರೋಪ? ಮೃತ ಶಿವಕಾಂತ್ ಸಿದ್ನಾಳ್ ಅವರು ಮಾಜಿ ಸಂಸದ ಎಸ್.ಬಿ. ಸಿದ್ನಾಳ್​ರ ಕಿರಿಯ ಪುತ್ರ. 2002ರಲ್ಲಿ ವಿಜಯ ಸಂಕೇಶ್ವರ್ ದ್ವಿತೀಯ ಪುತ್ರಿ ದೀಪಾ ಜೊತೆ ವಿವಾಹ ಆಗಿದ್ದರು. 2006ರಲ್ಲಿ ವಿಜಯಕಾಂತ ಡೇರಿ ಸ್ಥಾಪಿಸಿ ಹಾಲು ಉತ್ಪಾದಕರಿಗೆ ಅನುಕೂಲ ಮಾಡಿಕೊಟ್ಟಿದ್ದರು. ನಿತ್ಯ 1.20 ಲಕ್ಷ ಲೀಟರ್ ಹಾಲು ಸಂಗ್ರಹಿಸಿ ಆದಿತ್ಯ ಬ್ರಾಂಡ್ ಅಡಿ ಮಾರಾಟ ಮಾಡಲಾಗುತ್ತಿದೆ. ಉದ್ಯಮಿ ಡಾ. ವಿಜಯ ಸಂಕೇಶ್ವರ್ ಅವರು ಈ ವಿಜಯಕಾಂತ ಡೇರಿಯ ಚೇರ್ಮನ್ ಆಗಿದ್ದಾರೆ. ಶಿವಕಾಂತ್ ಸಿದ್ನಾಳ್ ಅವರು ಪ್ರತಿಷ್ಠಿತ ಆದಿತ್ಯ ಮಿಲ್ಕ್ ಕಂಪನಿ ಸಂಸ್ಥಾಪಕ ಆಗಿದ್ದರು. ಬೈಲಹೊಂಗಲ ತಾಲೂಕಿನ ನೇಗಿನಹಾಳ ಗ್ರಾಮದಲ್ಲಿರುವ ವಿಜಯಕಾಂತ ಡೇರಿ ಇದೆ. ವಿಜಯ ಸಂಕೇಶ್ವರ್, ಶಿವಕಾಂತ ಸಿದ್ನಾಳ ಪಾಲುದಾರಿಕೆಯ ಡೇರಿ ಇದಾಗಿದೆ. ಇದೀಗ ದೀಪಾ ಸಿದ್ನಾಳ ಅವರು ಆಸ್ತಿಗಾಗಿ ನಮ್ಮ ವಿರುದ್ಧ ಮಾಟ, ಮಂತ್ರ ಪ್ರಯೋಗ ಮಾಡಿದ್ದಾರೆ. ಕೋಟ್ಯಾಂತರ ರೂಪಾಯಿ ಹಾಲಿನ ಡೇರಿ ಕಬಳಿಸೋ ಹುನ್ನಾರ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ವಿಜಯಕಾಂತ ಡೇರಿ ಹಾಗೂ ಅದರ ಸ್ವತ್ತುಗಳನ್ನು ಕಬಳಿಸಲು ಮೃತ ಶಿವಕಾಂತ್​ರ ಸೋದರ ಶಶಿಕಾಂತ್ ಅವರು ಹುನ್ನಾರ ಮಾಡಿದ್ದಾರೆ ಎಂದು ಆರೋಪಿಸಿ ಶಶಿಕಾಂತ್ ಸಿದ್ನಾಳ್, ಪತ್ನಿ ವಾಣಿ, ಪುತ್ರ ದಿಗ್ವಿಜಯ್ ವಿರುದ್ಧ ದೀಪಾ ಸಿದ್ನಾಳ್ ಅವರು FIR ದಾಖಲು ಮಾಡಿದ್ದಾರೆ.