Belagavi News In Kannada | News Belgaum

ಡಿಆರ್‌ಎಚ್‌ಪಿ ಸಲ್ಲಿಸಿದ ಮಮತಾ ಮೆಷಿನರಿ

ಹುಬ್ಬಳ್ಳಿ : ಗುಜರಾತ್ ರಾಜ್ಯದ ಸನಂದ್ ನಲ್ಲಿ ಪ್ರಧಾನ ಕಚೇರಿ ಹೊಂದಿರುವ ಮಮತಾ ಮೆಷಿನರಿ ಲಿಮಿಟೆಡ್ ಕಂಪನಿಯು ತನ್ನ ಡ್ರಾಫ್ಟ್ ರೆಡ್ ಹೆರಿಂಗ್ ಪ್ರಾಸ್ಪೆಕ್ಟಸ್ (ಡಿಆರ್‌ಎಚ್‌ಪಿ) ಅನ್ನು ಷೇರು ಮಾರುಕಟ್ಟೆ ನಿಯಂತ್ರಕರಾದ ಸೆಕ್ಯುರಿಟೀಸ್ ಆಂಡ್ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಗೆ ಸಲ್ಲಿಸಿದೆ. ಬೀಲೈನ್ ಕ್ಯಾಪಿಟಲ್ ಅಡ್ವೈಸರ್ಸ್ ಪ್ರೈವೇಟ್ ಲಿಮಿಟೆಡ್ (ಬಿಆರ್‌ಎಲ್‌ಎಂ) ಈ ಸಂಚಿಕೆಯ ಏಕೈಕ ಬುಕ್ ರನ್ನಿಂಗ್ ಲೀಡ್ ಮ್ಯಾನೇಜರ್ ಆಗಿರುತ್ತಾರೆ.

ಈ ಆಫರ್‌ನ ಉದ್ದೇಶಗಳೆಂದರೆ (i) ಮಾರಾಟ ಮಾಡುವ ಷೇರುದಾರರಿಂದ 7,382,340 ಈಕ್ವಿಟಿ ಷೇರುಗಳ ಮಾರಾಟದ ಪ್ರಸ್ತಾಪವನ್ನು ಸಲ್ಲಿಸುವುದು, (ii) ಸ್ಟಾಕ್ ಎಕ್ಸ್ ಚೇಂಜ್ ಗಳಲ್ಲಿ ಈಕ್ವಿಟಿ ಷೇರುಗಳನ್ನು ಪಟ್ಟಿ ಮಾಡುವ ಪ್ರಯೋಜನಗಳನ್ನು ಗಳಿಸುವುದು. ಕಂಪನಿಯು ಈ ಆಫರ್‌ನಿಂದ ಬರುವ ಎಲ್ಲಾ ಆದಾಯವೂ ಷೇರುದಾರರಿಗೆ ಹೋಗುತ್ತದೆ ಎಂದು ತಿಳಿಸಲಾಗಿದೆ.

ಕಂಪನಿಯು ಪ್ಲಾಸ್ಟಿಕ್ ಚೀಲಗಳು, ಚೀಲಗಳನ್ನು ತಯಾರಿಸುವ ಯಂತ್ರಗಳು, ಪ್ಯಾಕೇಜಿಂಗ್ ಯಂತ್ರಗಳು ಮತ್ತು ಎಕ್ಸಟರ್ಷನ್ ಉಪಕರಣಗಳನ್ನು ತಯಾರಿಸುತ್ತದೆ ಮತ್ತು ರಫ್ತು ಮಾಡುತ್ತದೆ. ಪ್ಯಾಕೇಜಿಂಗ್ ಉದ್ಯಮಕ್ಕೆ ಬೇಕಾದ ಸಂಪೂರ್ಣ ಉತ್ಪನ್ನಗಳನ್ನು ಒದಗಿಸುವ ಮಮತಾ ಮೆಷಿನರಿ ಕಂಪನಿಯು ತನ್ನ ಯಂತ್ರಗಳನ್ನು “ವೇಗಾ” ಮತ್ತು “ವಿನ್” ಎಂಬ ಎರಡು ಬ್ರಾಂಡ್ ಹೆಸರಿನಲ್ಲಿ ಮಾರಾಟ ಮಾಡುತ್ತದೆ. ಮೇ 31, 2024ರ ಪ್ರಕಾರ ಈ ಕಂಪನಿಯು ಜಗತ್ತಿನಾದ್ಯಂತ ಸುಮಾರು 75 ದೇಶಗಳಲ್ಲಿ 4,500 ಯಂತ್ರಗಳನ್ನು ಸ್ಥಾಪಿಸಿರುವ ಹೆಗ್ಗಳಿಕೆ ಪಡೆದಿದೆ.

ಕಂಪನಿಯು ಪ್ಯಾಕೇಜಿಂಗ್ ಮಾರುಕಟ್ಟೆ ಮೌಲ್ಯ ಸರಪಳಿಗೆ ಸಂಪೂರ್ಣ ಹೊಂದಿಕೊಳ್ಳುವ ಉತ್ಪನ್ನಗಳ ಸಮಗ್ರ ಶ್ರೇಣಿಯನ್ನು ಒದಗಿಸುತ್ತದೆ:

(ಎ) ಬ್ಯಾಗ್ ಮತ್ತು ಚೀಲ ತಯಾರಿಸುವ ಯಂತ್ರಗಳು – ಈ ಯಂತ್ರಗಳು ಪ್ಲಾಸ್ಟಿಕ್ ಫಿಲ್ಮ್‌ ಗಳ ರೋಲ್ ಅನ್ನು ಬ್ಯಾಗ್‌ಗಳು ಮತ್ತು ಚೀಲಗಳಾಗಿ ಪರಿವರ್ತಿಸುತ್ತದೆ.

(ಬಿ) ಪ್ಯಾಕೇಜಿಂಗ್ ಯಂತ್ರಗಳು – ಅಂತಿಮವಾಗಿ ಸಿದ್ಧಗೊಂಡ ಉತ್ಪನ್ನಗಳನ್ನು ಚೀಲಗಳಲ್ಲಿ ತುಂಬಲು ಬಳಸಲಾಗುವು ಯಂತ್ರಗಳಿವು. ಇದರಲ್ಲಿ ಮೂರು ವಿಧದ ಯಂತ್ರಗಳಿದ್ದು, ಹಾರಿಜಾಂಟಲ್ ಫಾರ್ಮ್ ಫಿಲ್ ಆಂಡ್ ಸೀಲ್ ಯಂತ್ರಗಳು ವರ್ಟಿಕಲ್ ಫಾರ್ಮ್ ಫಿಲ್ ಆಂಡ್ ಸೀಲ್ ಯಂತ್ರಗಳು ಮತ್ತು ಸಣ್ಣ ಪರಿಮಾಣ ಇರುವವರ ಅವಶ್ಯಕತೆಗಳಿಗಾಗಿ ಇರುವ ಪಿಕ್ ಫಿಲ್ ಸೀಲ್ ಯಂತ್ರಗಳು ಎಂದು ಕರೆಯಲಾಗುತ್ತದೆ.

(ಸಿ) ಕೋ- ಎಕ್ಸ್ ಟರ್ಷನ್ ಫಿಲ್ಮ್ ಯಂತ್ರಗಳು – ವಿವಿಧ ಪಾಲಿಮರ್ ಗ್ರ್ಯಾನ್ಯೂಲ್‌ಗಳನ್ನು ಕೋ- ಎಕ್ಸ್ ಟ್ರೂಡೆಡ್ ಮಲ್ಟಿಲೇಯರ್ ಫಿಲ್ಮ್‌ ಗಳಾಗಿ ಸಂಸ್ಕರಿಸಲು ಬಳಸಲಾಗುವ ಯಂತ್ರಗಳಿವು. ಈ ಫಿಲ್ಮ್ ಗಳು ಮೊನೋ ಲೇಯರ್, ಮೂರು ಲೇಯರ್, ಐದು ಲೇಯರ್ ಮತ್ತು ಏಳು ಲೇಯರ್ ಗಳನ್ನು ಹೊಂದಿರಬಹುದು.

ಬಾಲಾಜಿ ವೇಫರ್ಸ್ ಪ್ರೈವೇಟ್ ಲಿಮಿಟೆಡ್, ದಾಸ್ ಪಾಲಿಮರ್ಸ್ ಪ್ರೈವೇಟ್ ಲಿಮಿಟೆಡ್, ಜೆಫ್ಲೆಕ್ಸಿ ಪ್ಯಾಕೇಜಿಂಗ್ ಪ್ರೈವೇಟ್ ಲಿಮಿಟೆಡ್, ಯುಫೋರಿಯಾ ಪ್ಯಾಕೇಜಿಂಗ್ ಪ್ರೈವೇಟ್ ಲಿಮಿಟೆಡ್, ಸನ್‌ರೈಸ್ ಪ್ಯಾಕೇಜಿಂಗ್, ಓಮ್ ಫ್ಲೆಕ್ಸ್ ಇಂಡಿಯಾ, ಚಿತಾಲೆ ಫುಡ್ಸ್, ವಿ3 ಪಾಲಿಪ್ಲಾಸ್ಟ್ ಪ್ರೈವೇಟ್ ಲಿಮಿಟೆಡ್, ಧಾಲುಮಲ್ ಸ್ಟ್ರೀಟ್ ಪ್ರೈವೇಟ್ ಲಿಮಿಟೆಡ್, ಜುಮಾಲ್ ಪ್ಯಾಕೇಜಿಂಗ್ ಪ್ರೈವೇಟ್ ಲಿಮಿಟೆಡ್ ಪ್ರೈವೇಟ್ ಲಿಮಿಟೆಡ್, ವೆಸ್ಟರ್ನ್ ಇಂಡಿಯಾ ಕ್ಯಾಶ್ಯೂ ಕಂಪನಿ ಪ್ರೈವೇಟ್ ಲಿಮಿಟೆಡ್ ಮತ್ತು ಎನ್.ಎನ್. ಪ್ರಿಂಟ್ & ಪ್ಯಾಕ್ ಪ್ರೈವೇಟ್ ಲಿಮಿಟೆಡ್ ಮತ್ತು ಗಿಟ್ಸ್ ಫುಡ್ ಪ್ರಾಡಕ್ಟ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಪ್ಲಾಸ್ಟಿಕ್ ಇಂಡ್ ಎಲ್ ಎಲ್ ಸಿಗಾಗಿ ಎಮಿರೇಟ್ಸ್ ನ್ಯಾಷನಲ್ ಫ್ಯಾಕ್ಟರಿ ಮುಂತಾದವರು ಮಮತಾ ಮಷಿನರಿ ಕಂಪನಿಯ ಪ್ರತಿಷ್ಠಿತ ಗ್ರಾಹಕರಾಗಿದ್ದಾರೆ.