Belagavi News In Kannada | News Belgaum

ಉ.ಕ ಭಾಗದವರು ಸಿಎಂ ಆಗಬೇಕೆಂದರೆ ತಾಳ್ಮೆಯಿಂದ ಕಾಯಬೇಕು: ಸಚಿವ ಸತೀಶ್‌ ಜಾರಕಿಹೊಳಿ

ಹಾವೇರಿ: ಉತ್ತರ ಕರ್ನಾಟಕ ಭಾಗದ ನಾಯಕರಿಗೆ ಮುಖ್ಯಮಂತ್ರಿ ಆಗುವ ಅವಕಾಶ ನಮ್ಮ ಪಕ್ಷದಲ್ಲಿಯೂ ಸಿಗುತ್ತೆ. ಆದರೆ ತಾಳ್ಮೆಯಿಂದ ಕಾಯಬೇಕು. ಕಾದು ನೋಡೋಣ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್‌ ಜಾರಕಿಹೊಳಿ ಅವರು ಹೇಳಿದರು..

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಉ.ಕ ಭಾಗದ ನಾಯಕರಿಗೆ ಮುಖ್ಯಮಂತ್ರಿ ಆಗುವ ಅವಕಾಶ ಬಿಜೆಪಿಯಲ್ಲಿ ಜಗದೀಶ್‌ ಶೆಟ್ಟರ್, ಬಸವರಾಜ ಬೊಮ್ಮಾಯಿ ಅವರಿಗೆ ಸಿಕ್ಕಿದೆ. ನಮ್ಮ ಪಕ್ಷದಲ್ಲಿಯೂ ಮುಂದಿನ ದಿನಗಳಲ್ಲಿ ಸಿಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು..

ಲೋಕಸಭೆ ಚುನಾವಣೆಕ್ಕಿಂತ ಮುಂಚೆ ಡಿಸಿಎಂ ಮಾಡಬೇಕೆಂಬ ಕೂಗು ಇತ್ತು. ಆದರೆ ಈಗ ಡಿಸಿಎಂ ಹುದ್ದೆ ನಿಡುವುದು ಮುಗಿದ ಅಧ್ಯಾಯ. ಸಿಎಂ ಹುದ್ದೆ ಯಾರಿಗೆ ನೀಡಬೇಕು ಅಥವಾ ಬಿಡಬೇಕೆಂಬುವುದು ಹೈಕಮಾಂಡ್‌ ಗೆ ಬಿಟ್ಟ ವಿಚಾರ. ಈ ಬಗ್ಗೆ ಪಕ್ಷದ ನಿರ್ಧಾರವೇ ಅಂತಿಮ ನಿರ್ಧಾರ ಎಂದು ಸಚಿವರು ತಿಳಿಸಿದರು..

ವಾಲ್ಮೀಕಿ ಅಭಿವೃದ್ದಿ ನಿಗಮದಲ್ಲಿ ನಡೆದ ಭ್ರಷ್ಟಾಚಾರ ಬಗ್ಗೆ ಎಸ್‌ಐಟಿ ತನಿಖೆ ನಡೆಸುತ್ತಿದೆ. ಈಗಾಗಲೇ ಸಂಬಂಧ ಪಟ್ಟ ಸಚಿವರು ರಾಜೀನಾಮೆ ನೀಡಿದ್ದಾರೆ. ಎಸ್ಐಟಿ ತನಿಖೆ ಪೂರ್ತಿಯಾದ ಬಳಿಕ ಸತ್ಯಾಂಶ ತಿಳಿಯುತ್ತದೆ ಎಂದರು..

ಶಿಗ್ಗಾವಿ ಉಪಚುನಾವಣೆ ನಾವೇ ಗೆಲ್ಲುತ್ತೇವೆ ಎಂಬ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ಪ್ರತಿಕ್ರಿಯಿಸಿದ ಸಚಿವ ಸತೀಶ್‌ ಜಾರಕಿಹೊಳಿ. ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಎನು ಬೇಕಾದರೂ ಹೇಳಲಿ, ಅದು ನಮಗೆ ಸಂಬಂಧವಿಲ್ಲ. ಶಿಗ್ಗಾವಿ ಉಪಚುನಾವಣೆ ಕಾಂಗ್ರೆಸ್‌ ಅಭ್ಯರ್ಥಿಯನ್ನ ಗೆಲ್ಲಿಸಬೇಕೆಂದು ಈಗಾಗಲೇ ತಯಾರಿ ನಡೆಸಿದ್ದೇವೆ. ಈ ಕ್ಷೇತ್ರದಲ್ಲಿ ನಾಯಕರ ಭಿನ್ನಾಭಿಪ್ರಾಯ ಇರುವುದು ನಿಜ. ಆದರೆ ಆಕಾಂಕ್ಷಿ ಎಲ್ಲಿಂದ ಬಂದ? ಯಾವ ಕಡೆಯಿಂದ ಬಂದ ಎಂಬುವುದನ್ನು ನೋಡಲ್ಲ. ಗೆಲ್ಲುವುದು ಅಷ್ಟೇ ನಮಗೆ ಮಾನದಂಡವಾಗಿದೆ ಎಂದು ತಿಳಿಸಿದರು..