Belagavi News In Kannada | News Belgaum

ನಾಳೆ ಇಬ್ಬರು ಸ್ಯಾಂಡಲ್ ವುಡ್ ನಟರ ಭವಿಷ್ಯ ನಿರ್ಧಾರ..!

ಬೆಂಗಳೂರು: ನಾಳೆ ಇಬ್ಬರು ಸ್ಯಾಂಡಲ್ ವುಡ್ ಹೀರೋಗಳ ಭವಿಷ್ಯ ನಿರ್ಧಾರವಾಗಲಿದ್ದು, ಬಹಳ ಕುತೂಹಲ ಕೆರಳಿಸಿದೆ. ಇಬ್ಬರು ಹೀರೋಗಳ ಬಗ್ಗೆ ಕೋರ್ಟ್ ತೀರ್ಪು ನೀಡಲಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಹಾಗೂ ಡೈವೋರ್ಸ್ ಪ್ರಕರಣದಲ್ಲಿ ಯುವ ರಾಜ್ ಕುಮಾರ್ ಬಗ್ಗೆ ತೀರ್ಪು ಪ್ರಕಟಿಸಲಿದ್ದು, ಇಬ್ಬರು ಸ್ಯಾಂಡಲ್ ವುಡ್ ಹೀರೋಗಳ ಭವಿಷ್ಯ ನಾಳೆ ನಿರ್ಧಾರವಾಗಲಿದೆ. ದರ್ಶನ್ & ಗ್ಯಾಂಗ್ ನಿಂದ ಕೊಲೆಯಾದ ರೇಣುಕಾಸ್ವಾಮಿ ಪ್ರಕರಣ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಕೊಲೆ ಪ್ರಕರಣದಲ್ಲಿ ನಟ ದರ್ಶನ್ & ಗ್ಯಾಂಗ್ ಪರಪ್ಪನ ಅಗ್ರಹಾರದಲ್ಲಿ ಬಂಧಿಯಾಗಿದೆ..
ರಾಘವೇಂದ್ರ ರಾಜ್ ಕುಮಾರ್ ಅವರ ಕಿರಿಯ ಪುತ್ರ ಯುವ ರಾಜ್ ಕುಮಾರ್ ಅವರು ಪತ್ನಿ ಶ್ರೀದೇವಿ ಭೈರಪ್ಪ ಅವರಿಗೆ ವಿಚ್ಛೇದನ ಕೊಡಲು ಮುಂದಾಗಿದ್ದಾರೆ. ಯುವ ರಾಜ್ಕುಮಾರ್ ಅವರು ಈಗಾಗಲೇ ಫ್ಯಾಮಿಲಿ ಕೋರ್ಟ್ನಲ್ಲಿ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಯುವ ರಾಜ್ಕುಮಾರ್ ಅವರು ಪತ್ನಿಯ ವಿರುದ್ಧ ಕ್ರೌರ್ಯ, ಅಗೌರವದಿಂದ ನೋಡಿಕೊಂಡ ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೇ ಪತ್ನಿಯಿಂದ ನಾನು ಮಾನಸಿಕವಾಗಿ ಟಾರ್ಚರ್ ಅನುಭವಿಸಿದ್ದೇನೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ಈ ಬಗ್ಗೆ ನಾಳೆ ಕೋರ್ಟ್ ತೀರ್ಪು ಪ್ರಕಟಿಸಲಿದೆ.