Belagavi News In Kannada | News Belgaum

ಝಿಕಾ ವೈರಸ್ ಮಹಾರಾಷ್ಟ್ರದಲ್ಲಿ​ ಹೆಚ್ಚಳ: ಎಲ್ಲಾ ರಾಜ್ಯಗಳಿಗೆ ಕೇಂದ್ರದ ಸಲಹೆ

ಮುಂಬೈ: ಮಹಾರಾಷ್ಟ್ರದಲ್ಲಿ ಝಿಕಾ ವೈರಸ್ ಪ್ರಕರಣಗಳು ಪತ್ತೆಯಾದ ಹಿನ್ನೆಲೆಯಲ್ಲಿ, ಕೇಂದ್ರ ಆರೋಗ್ಯ ಸಚಿವಾಲಯ ಬುಧವಾರ ಎಲ್ಲಾ ರಾಜ್ಯಗಳಿಗೆ ಸಲಹೆಯನ್ನು ನೀಡಿದೆ.

ಹೌದು…ಗರ್ಭಿಣಿಯರಿಗೆ ಸೋಂಕಿನ ತಪಾಸಣೆ ಮತ್ತು ಝಿಕಾ ಸೋಂಕಿಗೆ ಒಳಗಾದ ತಾಯಂದಿರ ಭ್ರೂಣದ ಬೆಳವಣಿಗೆಯನ್ನು ಮೇಲ್ವಿಚಾರಣೆ ಮಾಡುವ ಮೂಲಕ ನಿರಂತರ ಜಾಗರೂಕತೆಯ ಸ್ಥಿತಿಯನ್ನು ಕಾಪಾಡಿಕೊಳ್ಳಲು ಆರೋಗ್ಯ ಸಚಿವಾಲಯವು ರಾಜ್ಯಗಳನ್ನು ಕೇಳಿದೆ. ಈಡಿಸ್ ಸೊಳ್ಳೆಗಳಿಂದ ಆವರಣವನ್ನು ಮುಕ್ತವಾಗಿಡಲು ನಿಗಾ ವಹಿಸಲು ಮತ್ತು ಕಾರ್ಯನಿರ್ವಹಿಸಲು ನೋಡಲ್ ಅಧಿಕಾರಿಯನ್ನು ಗುರುತಿಸಲು ಆರೋಗ್ಯ ಸೌಲಭ್ಯಗಳು ಮತ್ತು ಆಸ್ಪತ್ರೆಗಳಿಗೆ ಸೂಚನೆ ನೀಡಲಾಗಿದೆ.
ವಸತಿ ಪ್ರದೇಶಗಳು, ಕೆಲಸದ ಸ್ಥಳಗಳು, ಶಾಲೆಗಳು, ನಿರ್ಮಾಣ ಸ್ಥಳಗಳು, ಸಂಸ್ಥೆಗಳು ಮತ್ತು ಆರೋಗ್ಯ ಸೌಲಭ್ಯಗಳಲ್ಲಿ ವೆಕ್ಟರ್ ನಿಯಂತ್ರಣ ಚಟುವಟಿಕೆಗಳನ್ನು ತೀವ್ರಗೊಳಿಸಲು ರಾಜ್ಯಗಳಿಗೆ ಸೂಚಿಸಲಾಗಿದೆ. ಜುಲೈ 1 ರಂದು ಪುಣೆಯಲ್ಲಿ ಇಬ್ಬರು ಗರ್ಭಿಣಿಯರು ಸೇರಿದಂತೆ ಆರು ಮಂದಿಗೆ ಝಿಕಾ ವೈರಸ್ ಸೋಂಕು ತಗುಲಿತ್ತು . ನಗರದ ಎರಂಡ್ವಾನೆ ಪ್ರದೇಶದಲ್ಲಿ ನಾಲ್ಕು ಮತ್ತು ಮುಂಡ್ವಾ ಪ್ರದೇಶದಲ್ಲಿ ಎರಡು ಪ್ರಕರಣಗಳು ವರದಿಯಾಗಿವೆ.
ಸೋಂಕಿತ ಈಡಿಸ್ ಸೊಳ್ಳೆಯ ಕಚ್ಚುವಿಕೆಯ ಮೂಲಕ ವೈರಸ್ ಹರಡುತ್ತದೆ, ಇದು ಡೆಂಗ್ಯೂ ಮತ್ತು ಚಿಕೂನ್‌ಗುನ್ಯಾದಂತಹ ಸೋಂಕುಗಳನ್ನು ಹರಡುತ್ತದೆ. ಈ ವೈರಸ್ ಅನ್ನು ಮೊದಲು 1947 ರಲ್ಲಿ ಉಗಾಂಡಾದಲ್ಲಿ ಗುರುತಿಸಲಾಯಿತು. ಗರ್ಭಿಣಿಯರಲ್ಲಿ ಝಿಕಾ ವೈರಸ್ ಮೈಕ್ರೊಸೆಫಾಲಿಯನ್ನು ಉಂಟುಮಾಡಬಹುದು, ಇದರಿಂದ ಮೆದುಳಿನ ಬೆಳವಣಿಗೆಯಲ್ಲಿ ಕುಂಠಿತ ಉಂಟಾಗಲಿದೆ. ಹವಾಮಾನ ವೈಪರೀತ್ಯದಿಂದ ಡೆಂಗ್ಯೂ, ಮಲೇರಿಯಾ, ಚಿಕೂನ್ ಗುನ್ಯಾ ಸೇರಿದಂತೆ ಇತರೆ ರೋಗಗಳೂ ಹೆಚ್ಚಾಗತೊಡಗಿವೆ. ಝಿಕಾ ವೈರಸ್ ಈಡಿಸ್ ಈಜಿಪ್ಟಿ ಸೊಳ್ಳೆಯಿಂದ ಉಂಟಾಗುವ ಕಾಯಿಲೆಯಾಗಿದ್ದು, ಈ ರೋಗದ ಶೇಕಡಾ 80 ರಷ್ಟು ರೋಗಿಗಳು ಯಾವುದೇ ರೋಗಲಕ್ಷಣಗಳನ್ನು ತೋರಿಸುವುದಿಲ್ಲ. ಕೆಲವು ರೋಗಿಗಳು ಜ್ವರ, ಕೀಲು ನೋವು, ದೇಹದ ನೋವು, ತಲೆನೋವು, ಕೆಂಪು ಕಣ್ಣುಗಳು, ವಾಂತಿ, ಅಸ್ವಸ್ಥತೆ, ಜ್ವರ ಮತ್ತು ದೇಹದ ದದ್ದುಗಳನ್ನು ಅನುಭವಿಸುತ್ತಾರೆ. ಝಿಕಾ ರೋಗಿ ಪತ್ತೆಯಾದ ಹಿನ್ನೆಲೆಯಲ್ಲಿ ಆಡಳಿತ ಮಂಡಳಿಯೂ ಎಚ್ಚೆತ್ತುಕೊಂಡಿದೆ.
ಇದನ್ನು ತಡೆಯುವುದು ಹೇಗೆ? ಮನೆಗಳಲ್ಲಿ ಸೊಳ್ಳೆಗಳನ್ನು ತಪ್ಪಿಸಿ, ಸ್ವಚ್ಛವಾಗಿಡಿ, ಸೊಳ್ಳೆ ಪರದೆಗಳನ್ನು ಬಳಸಿ ಹೆಚ್ಚು ಕಾಲ ನೀರು ನಿಲ್ಲದಂತೆ ನೋಡಿಕೊಳ್ಳಿ ಎರಡು ದಿನಗಳ ಕಾಲ ಜ್ವರ ಮುಂದುವರೆದರೆ, ತಕ್ಷಣ ವೈದ್ಯರನ್ನು ಸಂಪರ್ಕಿಸಿ.ಮನೆಯ ಒಳಾಂಗಣ ಹಾಗೂ ಹೊರಾಂಗಣವನ್ನು ಸ್ವಚ್ಚವಾಗಿಡಬೇಕು, ನೀರು ಸಂಗ್ರಹಣಾ ಪರಿಕರಗಳನ್ನು ವಾರಕ್ಕೊಮ್ಮೆ ಸ್ವಚ್ಚಗೊಳಿಸುವುದು ಹಾಗೂ ಮುಚ್ಚಳದಿಂದ ಮುಚ್ಚಬೇಕು.