Belagavi News In Kannada | News Belgaum

ವಿಶ್ವ ಬ್ಯಾಡ್ಮಿಂಟನ್ ದಿನಾಚರಣೆ

ಬ್ಯಾಡ್ಮಿಂಟನ್ ಕ್ಲಬ್, ಸಂಜೀವಿನಿ ಸ್ಪೋರ್ಟ್ಸ್ ಕ್ಲಬ್ ಹಾಗೂ ಉದಯಶ್ರೀ ಸ್ಪೋರ್ಟ್ಸ್ ಕ್ಲಬ್ ನ ಆಟಗಾರರು ಪಾಲ್ಗೊಂಡಿದ್ದು,

 

ಬೆಳಗಾವಿ :ವಿಶ್ವ ಬ್ಯಾಡ್ಮಿಂಟನ್ ದಿನಾಚರಣೆ ಅಂಗವಾಗಿ ಏರ್ಪಡಿಸಿದ ಇಂಟರ್ ಕ್ಲಬ್ ಟೂರ್ನಮೆಂಟ್ ದಲ್ಲಿ ವಿಜಯಪುರ ಬ್ಯಾಡ್ಮಿಂಟನ್ ಕ್ಲಬ್, ಸಂಜೀವಿನಿ ಸ್ಪೋರ್ಟ್ಸ್ ಕ್ಲಬ್ ಹಾಗೂ ಉದಯಶ್ರೀ ಸ್ಪೋರ್ಟ್ಸ್ ಕ್ಲಬ್ ನ ಆಟಗಾರರು ಪಾಲ್ಗೊಂಡಿದ್ದು, ಇದರಲ್ಲಿ ಸಂಜೀವಿನಿ ಸ್ಪೋರ್ಟ್ಸ್ ಕ್ಲಬ್ ನ ಪ್ರವೀಣ್ ಸಿಂಗ್ ಮತ್ತು ಯುವರಾಜ್ ಅವರು ಪ್ರಥಮ ಸ್ಥಾನ ಗಳಿಸಿದರು. ಸಂಜೀವಿನಿ ಸ್ಪೋರ್ಟ್ಸ್ ಕ್ಲಬ್ ನ ಡಾಕ್ಟರ ಸಿದ್ದು ಸೊನ್ನದ ಮತ್ತು ಚಿದಂಬರ ಜೋಶಿ ಅವರು ದ್ವಿತೀಯ ಸ್ಥಾನ ಗಳಿಸಿದರು.

ವಿಶ್ವ ಬ್ಯಾಡ್ಮಿಂಟನ್ ದಿನಾಚರಣೆಯನ್ನು ಶಿವಕುಮಾರ ಗಡಶೆಟ್ಟಿ ಅವರ ನೇತೃತ್ವದಲ್ಲಿ ಶುಕ್ರವಾರ (ಜುಲೈ. 5) ವಿಜಯಪುರ ಬ್ಯಾಡ್ಮಿಂಟನ್ ಕ್ಲಬ್ ಹಾಗು ಸಂಜೀವಿನಿ ಸ್ಪೋರ್ಟ್ಸ್ ಕ್ಲಬ್ ಇವರ ಸಹಯೋಗದೊಂದಿಗೆ ಸಂಜೀವಿನಿ ಸ್ಪೋರ್ಟ್ಸ್ ಕ್ಲಬ್ ನಲ್ಲಿ ಆಚರಿಸಲಾಯಿತು.

ಶಿವಕುಮಾರ ಗಡಶೆಟ್ಟಿ ಅವರು ಟೂರ್ನಿ ಯಲ್ಲಿ ಪಾಲ್ಗೊಂಡ ಎಲ್ಲ ಆಟಗಾರರಿಗೆ ಧನ್ಯವಾದಗಳನ್ನು ತಿಳಿಸಿ, ಸಮಾಜ ಸೇವಕರಾದ ಸಂತೋಷ್ ತಳಕೇರಿ ಅವರು ವಿಜೇತರಿಗೆ ಪ್ರಶಸ್ತಿ ಪತ್ರಗಳನ್ನು ಪ್ರದಾನ ಮಾಡಿದರು.

ಈ ಸಂದರ್ಭದಲ್ಲಿ ಡಾಕ್ಟರ ಮೀನಾಕ್ಷಿ ಸೊನ್ನದ ಅವರಿಗೆ ಬೆಸ್ಟ್ ಡಾಕ್ಟರ ರಾಜ್ಯ ಪ್ರಶಸ್ತಿ ಬಂದಿದ್ದಕ್ಕೆ ಮತ್ತು ಡಾಕ್ಟರ ಸಿದ್ದು ಸೊನ್ನದ ಅವರ ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಅವರ ಬ್ಯಾಡ್ಮಿಂಟನ್ ಟೂರ್ನಿ ಯಲ್ಲಿ ಸಾಧಿಸಿದ ಸಾಧನೆಗಾಗಿ ಅವರನ್ನು ಅಭಿನಂದಿಸಿ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಉದಯಶ್ರೀ ಸ್ಪೋರ್ಟ್ಸ್ ಕ್ಲಬ್ ನ ವಿಕ್ರಂ ವಸ್ತ್ರದ್, ವಿಜಯಕುಮಾರ ಹತ್ತಿ, ಸಂತೋಷ್ ನಾಯಕ್ ಅವರು ಹಾಗೂ ಸಂಜೀವಿನಿ ಸ್ಪೋರ್ಟ್ಸ್ ಕ್ಲಬ್ ನ ಬಸವರಾಜ ಮನಗೂಳಿ, ಪ್ರಕಾಶ ಕಳಸಗೊಂಡ, ಆಕ್ಟ್ ಶಾರದಾ ಪಬ್ಲಿಕ್ ಸ್ಕೂಲ್ ನ ಪ್ರಾಂಶುಪಾಲರಾದ ಜಿಮೇಶ್ ಅವರು ಉಪಸ್ಥಿತರಿದ್ದರು.