Belagavi News In Kannada | News Belgaum

ಚಿಕ್ಕೋಡಿ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನ

ಚಿಕ್ಕೋಡಿ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನ

ಬೆಳಗಾವಿ ಜುಲೈ.08 : ಚಿಕ್ಕೋಡಿ ತಾಲೂಕಿನಲ್ಲಿ ಖಾಲಿ ಇರುವ ಅಂಗನವಾಡಿ-4 ಹಾಗೂ ಸಹಾಯಕಿಯರ-14 ಹುದ್ದೆಗಳಿಗಾಗಿ ಅರ್ಹ ಅಭ್ಯರ್ಥಿಗಳಿಂದ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರನ್ನು ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಲಾಗಿದ್ದು, 19 ರಿಂದ 35 ವರ್ಷ ವಯೋಮಿತಿಯೋಳಗಿರಬೇಕು. ಅರ್ಹ ವಿಕಲಚೇತನ ಅಭ್ಯರ್ಥಿಗಳಿಗೆ ಮಾತ್ರ 10ವರ್ಷ ವಯೋಮಿತಿ ಸಡಿಲಿಕೆ ಇರುತ್ತದೆ. ಸದರಿ ಆಸಕ್ತ ಅಭ್ಯರ್ಥಿಗಳು ಆಗಷ್ಟ್ 04 ರೊಳಗಾಗಿ ವೆಬ್‍ಸೈಟ್ hಣಣಠಿs://ಞಚಿಡಿಟಿemಚಿಞಚಿoಟಿe.ಞಚಿಡಿ.ಟಿiಛಿ.iಟಿ/ಚಿbಛಿಜ/ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಚಿಕ್ಕೋಡಿಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯ ದೂರವಾಣಿ:08338273371 ಸಂಖ್ಯೆಗೆ ಕಚೇರಿಯ ಸಮಯದಲ್ಲಿ ಸಂಪರ್ಕಿಸಬಹುದಾಗಿದೆ.
ಅಂಗನವಾಡಿ ಕೇಂದ್ರ ಹಾಗೂ ಮೀಸಲಾತಿ (ಕಾರ್ಯಕರ್ತೆ) ವಿವರ: ಕಾಡಾಪೂರ (ಇತರೆ), ಕೆರೂರ ಅರಬ್ಯಾನವಾಡಿ (ಇತರೆ), ಮಾಂಜರಿ (ಇತರೆ), ಚಂದೂರ(ಇತರೆ),

ಅಂಗನವಾಡಿ ಕೇಂದ್ರ ಹಾಗೂ ಮೀಸಲಾತಿ (ಸಹಾಯಕಿಯರು) ವಿವರ: ಕಾಡಾಪೂರ (ಇತರೆ), ಕೆರೂರ(ಪ,ಜಾ), ಕಮತ್ಯಾನಟ್ಟಿ (ಇತರೆ), ಕಬ್ಬೂರ ಭಗವತಿ ತೋಟ (ಇತರೆ), ಅಂಕಲಿ(ಇತರೆ), ಜೈನಾಪೂರ (ಇತರೆ), ಕೆರೂರು ರೂಪಿನಾಳ/ರೂಪಿನಾಳವಾಡಿ(ಇತರೆ), ಜಾಗನೂರ ಪಾಂಡ್ರೆ ತೋಟ(ಇತರೆ), ಕರೋಶಿ(ಇತರೆ), ಕರಗಾಂವ(ಇತರೆ), ಕಬ್ಬೂರ(ಇತರೆ), ವಡ್ರಾಳ ಕೇರಿ ಜೈನಾಪೂರ (ಇತರೆ), ಕರೋಶಿ(ಇತರೆ).///

ಹೈನುಗಾರಿಕೆ ಪ್ರೋತ್ಸಾಹಕ್ಕೆ ಸಹಾಯಧನ ಸೌಲಭ್ಯ

ಬೆಳಗಾವಿ ಜುಲೈ.08 : ಪ್ರಸಕ್ತ ಸಾಲಿನಲ್ಲಿ ಹೈನುಗಾರಿಕೆ ಪ್ರೋತ್ಸಾಹಿಸಲು ಹಸು, ಎಮ್ಮೆ ಖರೀದಿಗೆ ಪಡೆಯುವ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡುವ ರೈತ ಮಹಿಳೆಯರಿಗೆ ರಾಜ್ಯ ಸರ್ಕಾರದಿಂದ ಶೇ.6 ರ ಬಡ್ಡಿಯಲ್ಲಿ ಸಹಾಯಧನ ನೀಡಲಾಗುವುದು.
ಆಸಕ್ತ ಫಲಾನುಭವಿಗಳು ಗರಿಷ್ಟ 65 ಸಾವಿರ ರೂ ಸಾಲದ ಮೊತ್ತಕ್ಕೆ ಶೇ.6 ಬಡ್ಡಿ ಸಹಾಯಧನ ನೀಡುವ ಯೋಜನೆಯಾಗಿದೆ. ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಹೈನುಗಾರಿಕೆಗೆ ರಾಷ್ಟ್ರೀಕೃತ, ಗ್ರಾಮೀಣ ಹಾಗೂ ಸಹಕಾರ ಬ್ಯಾಂಕ್‍ಗಳಲ್ಲಿ ಸಾಲ ಪಡೆದಿರುವ ರೈತ ಮಹಿಳೆಯರು ಇದರ ಸದುಪಯೋಗ ಪಡೆಯಬಹುದಾಗಿದೆ.
ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಪಶು ವೈದ್ಯಕೀಯ ಸಂಸ್ಥೆಯನ್ನು ಅಥವಾ ಸಂಬಂಧಪಟ್ಟ ತಾಲೂಕಾ ಪಶು ಆಸ್ಪತ್ರೆಯನ್ನು ಸಂಪರ್ಕಿಸಬಹುದು ಎಂದು ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.///