Belagavi News In Kannada | News Belgaum

ರಾಯಗಡ ಕೋಟೆಗೆ ಪ್ರವಾಸಕ್ಕೆ ತೆರಳಿ ಅಪಾಯಕ್ಕೆ ಸಿಲುಕಿದ ಪ್ರವಾಸಿಗರು

ಮಹಾರಾಷ್ಟ್: ಮಹಾರಾಷ್ಟ್ರದ ರಾಯಗಢದಲ್ಲಿ ಮೇಘಸ್ಫೋಟವಾಗಿದ್ದು, ರಾಯಗಡ್ ಕೋಟೆಗೆ ಭೇಟಿ ನೀಡುವ ಪ್ರವಾಸಿಗರು ಮಧ್ಯಾಹ್ನ ಬಲವಾದ ಪ್ರವಾಹದಲ್ಲಿ ಸಿಲುಕಿದ್ದಾರೆ.
ಪ್ರವಾಸಿಗರು ರಾಯಗಢ ಕೋಟೆ ಏರುತ್ತಿದ್ದಂತೆ ಇದ್ದಕ್ಕಿದಂತೆ ನೀರು ರಭಸವಾಗಿ ನುಗ್ಗಿದೆ. ಭಾನುವಾರವಾದ್ದರಿಂದ, ಪ್ರವಾಸಿ ತಾಣದಲ್ಲಿ ಪ್ರವಾಸಿಗರ ಭಾರಿ ನೂಕುನುಗ್ಗಲು ಇತ್ತು.

ವೈರಲ್ ಆಗುತ್ತಿರುವ ವೀಡಿಯೊದಲ್ಲಿ, ಪ್ರವಾಸಿಗರು ಒಬ್ಬರನ್ನೊಬ್ಬರು ಹಿಡಿದುಕೊಂಡು ಕೋಟೆಯ ಕಟ್ಟೆಯನ್ನು ಏರಿ ತಮ್ಮ ಪ್ರಾಣ ರಕ್ಷಿಸಿದ್ದಾರೆ. ಅವರಲ್ಲಿ ಕೆಲವರು ಸುರಕ್ಷಿತವಾಗಿ ತೆರಳಿದರೆ, ಇನ್ನೂ ಅನೇಕರು ಬ್ಯಾರಿಕೇಡ್ ಹಿಡಿದು ನಿಂತಿದ್ದರು. ಯಾವುದೇ ಸಾವು ನೋವುಗಳಾದ ಬಗ್ಗೆ ವರದಿಯಾಗಿಲ್ಲ.