Belagavi News In Kannada | News Belgaum

ಡೆಂಗ್ಯೂ, ಮಲೇರಿಯಾ ಮತ್ತುಚಿಕೂನಗುನ್ಯಾ ರೋಗಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅನಿಲ ಬೆನಕೆ ಅವರಿಂದಉಚಿತ ಲಸಿಕೆ ಅಭಿಯಾನ


ಬೆಳಗಾವಿ,   ರಂದುಬಿಜೆಪಿ ರಾಜ್ಯಉಪಾಧ್ಯಕ್ಷ ಹಾಗೂ ಮಾಜಿ ಶಾಸಕ ಅನಿಲ ಬೆನಕೆ ಅವರಿಂದನಗರದಲ್ಲಿಹಲವೆಡೆಡೆಂಗ್ಯೂ, ಮಲೇರಿಯಾ ಮತ್ತುಚಿಕೂನಗುನ್ಯಾರೋಗ ಪ್ರತಿಬಂಧಕ ಲಸಿಕೆ ಅಭಿಯಾನ ನಡೆಸಲಾಯಿತು.
ಈ ಸಂದರ್ಭದಲ್ಲಿಬಿಜೆಪಿ ರಾಜ್ಯಉಪಾಧ್ಯಕ್ಷ ಹಾಗೂ ಮಾಜಿ ಶಾಸಕ ಅನಿಲ ಬೆನಕೆ ಮಾತನಾಡಿ, ನಗರದಲ್ಲಿಡೆಂಗ್ಯೂ, ಮಲೇರಿಯಾ ಮತ್ತುಚಿಕೂನಗುನ್ಯಾದಂತಹ ರೋಗಗಳು ಹರಡುತ್ತಿದ್ದು, ನಾಗರಿಕರುಎಚ್ಚರಿಕೆ ವಹಿಸಬೇಕು. ವಿವಿಧೆಡೆಆರೋಗ್ಯಜಾಗೃತಿಕಾರ್ಯಕ್ರಮಹಾಗೂ ಡೆಂಗ್ಯೂ, ಮಲೇರಿಯಾ ಮತ್ತುಚಿಕೂನಗುನ್ಯಾರೋಗ ಪ್ರತಿಬಂಧಕ ಲಸಿಕೆ ಹಾಕುತ್ತಿದ್ದೇವೆ. ಇದುವರೆಗೆಹಲವು ಪ್ರದೇಶಗಳಲ್ಲಿ ಉಚಿತ ಲಸಿಕೆ ವಿತರಿಸಿದ್ದು ಇನ್ನು 2-3 ದಿನಗಳಲ್ಲಿ ಸಂಪೂರ್ಣ ಬೆಳಗಾವಿ ನಗರಾಧ್ಯಂತ ಲಸಿಕೆ ನೀಡಲಾಗುವುದು.

ರವಿವಾರಮಹಾಂತೇಶ ನಗರ ಹಳಕಟ್ಟಿ ಭವನದಲ್ಲಿ ಲಿಂಗಾಯತ ಸಂಘಟನೆಯಸಹಯೋಗದೊಂದಿಗೆಡೆಂಗ್ಯೂ ಮತ್ತುಚಿಕೂನಗುನ್ಯಾ ವಿರುದ್ಧಔಷಧ ನೀಡಲಾಯಿತು. ಈ ಸಂದರ್ಭದಲ್ಲಿ ನಗರಸೇವಕರಾಜಶೇಖರಡೋಣಿ, ಹನಮಂತ ಕೊಂಗಾಲಿ, ಲಿಂಗಾಯತ ಸಂಘಟನೆಯಅಧ್ಯಕ್ಷಈರಣ್ಣದಯಣ್ಣವರ, ಪ್ರಮುಖರಾದರಮೇಶ ಕಳಸಣ್ಣವರ, ಶಂಕರಗುಡಸ, ಲಿಂಗಾಯತ ಸಂಘಟನೆಯಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

ನಂತರಭಾರತಿ ಮಹಿಳಾ ಅಭಿವೃದ್ಧಿ ಸಂಘದಸಹಯೋಗದಿಂದಭಾರತ ಕಾಲೋನಿ, ಚಂದ್ರಮೌಳಿ ಕಾಲೋನಿ, ಪಾರ್ವತಿ ನಗರ ಹಾಗೂ ಸುತ್ತಮುತ್ತಲಿನ ನಾಗರೀಕರಿಗೆಡೆಂಗ್ಯೂ, ಮಲೇರಿಯಾ ಮತ್ತುಚಿಕೂನಗುನ್ಯಾರೋಗನಿರೋಧಕ ಔಷಧಗಳನ್ನು ವಿತರಿಸಲಾಯಿತು.ಅದೇರಿತಿಬಸವನ ಕುಡಚಿಯಲ್ಲಿಗ್ರಾಮಸ್ಥರು ಹಾಗೂ ನಗರಸೇವಕ ಬಸವರಾಜಅವರ ಸಹಕಾರದೊಂದಿಗೆಗ್ರಾಮದಲ್ಲಿಔಷಧಿನೀಡಲಾಯಿತು. ಯುವಕ ಮಂಡಳದ ಕಾರ್ಯಕರ್ತರು, ಪದಾಧಿಕಾರಿಗಳು ಹಾಗೂ ನಾಗರೀಕರು ಉಪಸ್ಥಿತರಿದ್ದರು.