Belagavi News In Kannada | News Belgaum

ಕೇಂದ್ರ ಕಾರಾಗೃಹ ಬೆಳಗಾವಿಯಲ್ಲಿ ವಾಸಿಗಳಿಗಾಗಿ “ನೇತ್ರ ತಪಾಸಣಾ ಶಿಬಿರ” ಆಯೋಜನೆ

ಕೇಂದ್ರ ಕಾರಾಗೃಹ ಬೆಳಗಾವಿಯಲ್ಲಿ ವಾಸಿಗಳಿಗಾಗಿ “ನೇತ್ರ ತಪಾಸಣಾ ಶಿಬಿರ” ಆಯೋಜನೆ
ರಂದು ಕೇಂದ್ರ ಕಾರಾಗೃಹ ಬೆಳಗಾವಿಯಲ್ಲಿ ಬಂಧಿಗಳಿಗಾಗಿ ಉಚಿತ ನೇತ್ರ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು ಸದರಿ ಶಿಬಿರವು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಅಂಧತ್ವ ನಿಯಂತ್ರಣಾಧಿಕಾರಿಗಳ ಕಾರ್ಯಾಲಯ ಬೆಳಗಾವಿ ಹಾಗೂ ಕೇಂದ್ರ ಕಾರಾಗೃಹ ಬೆಳಗಾವಿ ಇವರುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿತ್ತು. ಮುಖ್ಯ ಅಥಿತಿಗಳಾಗಿ ಜಿಲ್ಲಾ ಅಂಧತ್ವ ನಿಯಂತ್ರಣಾಧಿಕಾರಿಗಳಾದ ಡಾ|| ಗೀತಾ ಕಾಂಬಳೆ ಆಗಮಿಸಿದ್ದರು. ಅಧ್ಯಕ್ಷತೆಯನ್ನು ಕಾರಾಗೃಹದ ಅಧೀಕ್ಷಕರಾದ ಶ್ರೀ ಬಿ.ಎಮ್ ಕೊಟ್ರೇಶ ವಹಿಸಿದ್ದರು.
ದೀಪ ಬೆಳಗಿಸುವುದರೊಂದಿಗೆ ಶಿಬಿರ ಉದ್ಘಾಟಿಸಿ ಶ್ರೀ. ಬಿ.ಎಮ್.ಕೊಟ್ರೇಶ ಮಾತನಾಡಿ ಪಂಚೇಂದ್ರಿಗಳಲ್ಲಿ ಒಂದಾದ ಕಣ್ಣು ತುಂಬಾ ಮುಖ್ಯವಾದ ಹಾಗೂ ಸೂಕ್ಷ್ಮವಾದ ಅಂಗ ಕಾರಣ ಇದರ ಕಾಳಜಿ ತುಂಬಾ ಪ್ರಮುಖವಾದದ್ದು. ನಮ್ಮ ದಿನನಿತ್ಯದ ಚಟುವಟಿಕೆಗಳಿಗೆ ಕಣ್ಣು ಬೇಕೆಬೇಕು ಕಣ ್ಣನ ಬಗ್ಗೆ ಏನದರೂ ತೊಂದರೆ ಆದರೆ ನಿರ್ಲಕ್ಷಿಸದೇ ನೇತ್ರ ತಜ್ಞರನ್ನು ಸಂಪರ್ಕಿಸಿ ಸೂಕ್ತ ಚಿಕೆತ್ಸೆ ಪಡೆಯಬೇಕು. ಬಂಧಿಗಳ ಆರೋಗ್ಯ ದೃಷ್ಟಿಯಿಂದ ಈ ಶಿಬಿರವನ್ನು ಆಯೋಜಿಸಲಾಗಿದ್ದು, ತಾವೆಲ್ಲ ಇದರ ಸದುಪಯೋಗ ಪಡೆದುಕೊಳ್ಳಬೇಕು. ಹಾಗೂ ಬಿಡುಗಡೆ ನಂತರ ಸಮಾಜದಲ್ಲಿ ಇತರರಿಗೆ ಕಣ ್ಣನ ಆರೋಗ್ಯದ ಕುರಿತು ತಿಳುವಳಿಕೆ ನೀಡಬೇಕೆಂದು ಹೇಳಿದರು.
ಮುಖ್ಯ ಅಥಿತಿಗಳಾದ ಡಾ|| ಗೀತಾ ಕಾಂಬಳೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ ಇಂದಿನ ಆಧುನಿಕ ಯುಗದಲ್ಲಿ ಬದಲಾಗುತ್ತಿರುವ ಜೀವನ ಶೈಲಿಯಲ್ಲಿ ಚಿಕ್ಕಮಕ್ಕಳಿಂದ ವೃದ್ಧವರಿಗೂ ಎಲ್ಲರೂ ಕಣ ್ಣನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದಕ್ಕೆ ಮೂಲ ಕಾರಣ ಅತಿಯಾದ ಮೊಬೈಲ್ ಟಿ.ವಿ. ಹಾಗೂ ಲ್ಯಾಪ್‍ಟಾಪ್‍ಗಳ ಬಳಕೆ. ಕೆಲವು ಜನ ರಾತ್ರಿ ನಿದ್ದೆಗೆಟ್ಟು ತುಂಬಾ ಸಮಯದವರೆಗೆ ಮೊಬೈಲ್ ಬಳಸುವುದು ಹವ್ಯಾಸವಾಗಿದ್ದು, ಅತಿಯಾದ ಅಂತರ್ಜಾಲ ಬಳಕೆಯಿಂದ ಕಣ ್ಣನ ನರಮಂಡಲದ ಮೇಲೆ ದುಷ್ಪರಿಣಾಮ ಬಿರುತ್ತದೆ. ಕಾರಣ ಸಾಧ್ಯವಾದಷ್ಟು ಎಲ್ಲ ಸಾಧನಗಳ ವೀಕ್ಷಣೆ ಕಡಿಮೆ ಮಾಡಬೇಕು. ರಾಷ್ಟ್ರಿಯ ಅಂಧತ್ವ ನಿಯಂತ್ರಣ ಕಾರ್ಯಕ್ರಮದಡಿ 2024-2025 ನೇ ಸಾಲಿನಲ್ಲಿ ಕಾರಾಗೃಹಗಳಲ್ಲಿರುವ ಎಲ್ಲ ಬಂಧಿಗಳಿಗೆ ತಪಾಸನೆ ಮಾಡಿ ಉಚಿತ ಕನ್ನಡಕ ನೀಡಲು ಆರೋಗ್ಯ ಇಲಾಖೆಯ ಜಂಟಿ ನಿರ್ದೇಶಕರ(ಅಂಧತ್ವ ನಿಯಂತ್ರಣ) ಆದೇಶದ ಮೇರೆಗೆ ಈ ಶಿಬಿರ ಆಯೋಜಿಸಿದ್ದು, ದೃಷ್ಟಿದೋಷವಿರುವ ಎಲ್ಲ ನಿವಾಸಿಗಳಿಗೆ ಕನ್ನಡಕ ವಿತರಿಸಲಾಗುವುದು ಎಂದು ಹೇಳಿದರು. ಶಿಬಿರದಲ್ಲಿ 150 ನಿವಾಸಿಗಳಿಗೆ ನೇತ್ರತಪಾಸಣೆ ನಡೆಸಲಾಯಿತು.
ವೇದಿಕೆಯಲ್ಲಿ ಮನೋವೈದ್ಯರಾದ ಡಾ|| ಅಬ್ರಾರ್ ಪುಣೆಕರ, ಡಾ|| ಪರಶುರಾಮ ಯನಗನ್ನವರ, ಡಾ|| ಪಾಂಡುರಂಗ ಪೂಜಾರಿ ಹಾಗೂ ಜೈಲರಗಳಾದ ಶ್ರೀ ರಾಜೇಶ, ಶ್ರೀ ಆರ್.ಬಿ ಕಾಂಬಳೆ, ಶ್ರೀ ದಂಡಯ್ಯನವರ ಹಾಗೂ ಉಪಾಧ್ಯಾಯರಾದ ಎಸ್.ಎಸ್.ಯಾದಗೂಡೆ ಉಪಸ್ಥಿತರಿದ್ದರು. ಶ್ರೀ ಶಶಿಕಾಂತ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು.