Belagavi News In Kannada | News Belgaum

ಜಿಲ್ಲಾ ಮಟ್ಟದ ವಿಶ್ವ ಜನಸಂಖ್ಯಾ ದಿನಾಚರಣೆ-2024

ದೇಶ ಸಾಮಾಜಿಕ, ಆರ್ಥಿಕವಾಗಿ ಸಧೃಡವಾಗಲು ಜನಸಂಖ್ಯಾ ನಿಯಂತ್ರಣ ಅಗತ್ಯ

ಬೆಳಗಾವಿ ಜುಲೈ.11 : ಭಾರತದಂತಹ ಬಲಿಷ್ಠ ರಾಷ್ಟ್ರವು ಸಾಮಾಜಿ, ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ದೇಶದಲ್ಲಿ ಹೆಚ್ಚುತ್ತಿವರು ಜನಸಂಖ್ಯೆಯನ್ನು ನಿಯಂತ್ರಿಸವುದು ಅಗತ್ಯವಾಗಿದೆ. ಜನಸಂಖ್ಯ ನಿಯಂತ್ರಣದಿಂದ ರಾಷ್ಟ್ರವನ್ನು ಸಾಮಾಜಿಕ ಹಾಗೂ ಆರ್ಥಿಕವಾಗಿ ಸಧೃಢವನ್ನಾಗಿಸಬಹುದು ಎಂದು ಬೆಳಗಾವಿ ಉತ್ತರ ಶಾಸಕರಾದ ಆಶೀಪ್ (ರಾಜು) ಸೇಠ್ ಅವರು ನುಡಿದರು.
ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಮಹಾವಿದ್ಯಾಲಯದ ಸಭಾಂಗಣದಲ್ಲಿ ಗುರುವಾರ (ಜು.11) ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ, ಬೆಳಗಾವಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಮಹಾವಿದ್ಯಾಲಯ, ಜಿಲ್ಲಾ ಆಯುಷ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಾರ್ತಾ ಇಲಾಖೆ, ಮಹಾನಗರ ಪಾಲಿಕೆ, ನೆಹರು ಯುವ ಕೇಂದ್ರ ಹಾಗೂ ವಿವಿಧ ಇಲಾಖೆಗಳು ಮತ್ತು ಸೇವಾ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಜರುಗಿದ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಭಿವೃದ್ಧಿ ಹೊಂದಿದ ಭಾರತ ಹೊಸ ಗುರುತಿಗಾಗಿ, ಕುಟುಂಬ ಯೋಜನೆಯ ಅಳವಡಿಕೆಯು ಪ್ರತಿ ದಂಪತಿಗಳಿಗೆ ಹೆಮ್ಮೆ ತರುತ್ತದೆ ಎಂಬ ಘೋಷವಾಕ್ಯದಡಿ ಪ್ರಸ್ತುತ ವರ್ಷದ ವಿಶ್ವ ಜನಸಂಖ್ಯಾ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಜನಸಂಖ್ಯೆ ಹೆಚ್ಚಾದಂತೆ ಭೂಮಿಯ ಗಾತ್ರ ಹೆಚ್ಚಾಗುವುದಿಲ್ಲ ಆದರೆ ಜನಸಂಖ್ಯೆ ಹೆಚ್ಚಳದಿಂದ ಮಾನವನ ಜೀವನದಲ್ಲಿ ಅನೇಕ ರೀತಿಯ ಪರಿಣಾಮಗಳು ಬೀರುತ್ತವೆ ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ. ಮಹೇಶ ಕೋಣಿ ಮಾತನಾಡಿ ಜನನ ಪ್ರಮಾಣದಲ್ಲಿ ಹೆಚ್ಚಳ, ಮರಣದ ಪ್ರಮಾಣದಲ್ಲಿ ಇಳಿಕೆ, ಪ್ರದೇಶಗಳಿಗೆ ವಲಸೆ ಪ್ರಮಾಣದಲ್ಲಿಯೂ ಹೆಚ್ಚಳ, ಅನಕ್ಷರತೆ, ನೀರುದೋಗ, ಮೂಡನಂಬಿಕೆಗಳಿಂದ ಜನಸಂಖ್ಯೆ ಹೆಚ್ಚಾಗುತ್ತಿದ್ದು, ಇದಕ್ಕೆ ತಡೆಗಟ್ಟುವ ಮಾರ್ಗೋಪಾಯಗಳನ್ನು ಇನ್ನು ಹೆಚ್ಚಿಗೆ ಜನಸಮುದಾಯಕ್ಕೆ ತಿಳಿಯ ಪಡಿಸಬೇಕಾಗಿದೆ. ಮದುವೆ ವಯಸ್ಸನ್ನು ಗಂಡಿಗೆ 21, ಹೆಣ್ಣಿಗೆ 18 ಕಡ್ಡಾಯವಾಗಿದೆ. ಕುಟುಂಬ ಕಲ್ಯಾಣ ಕಾರ್ಯಕ್ರಮದಲ್ಲಿ ತಾತ್ಕಾಲಿಕ ಮತ್ತು ಶಾಶ್ವತ ವಿಧಾನಗಳನ್ನು ಅನುಸರಿಸುವುದು ಮತ್ತು ಪುರುಷರ ಸಹಭಾಗಿತ್ವ ಜನಸಂಖ್ಯೆ ನಿಯಂತ್ರಣದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದರು.
ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ವಿಶ್ವನಾಥ ಭೋವಿ ಪ್ರಾಸ್ತಾವಿಕವಾಗಿ ಮಾತನಾಡಿ ಜನಸಂಖ್ಯೆ ಹೆಚ್ಚಳದಿಂದ ದೇಶದ ಆರ್ಥಿಕಾಭಿವೃದ್ಧಿ ಸಹ ಕುಂಠಿತಗೊಳ್ಳತ್ತದೆ. ಆಹಾರ, ನಿರು, ಬಟ್ಟೆ, ನೆಲ, ವಸತಿ, ಖನಿಜಗಳ ಕೊರತೆ, ಸಸ್ಯ ಸಂಪತ್ತಿನ ನಾಶ, ಬಡತನ, ನೀರುದ್ಯೋಗ, ಸಾಮಾಜಿಕ ಸಮಾನತೆ, ರೋಗರುಜನಗಳು ಹೆಚ್ಚಾಗುತ್ತದೆ ಸರಾಸರಿ ಪ್ರತಿ ನಿಮಿಷಕ್ಕೆ 40 ಜನನಗಳು ಆಗುತ್ತಿದ್ದು ಈ ಒಂದು ಜನಸಂಖ್ಯೆ ನಿಯಂತ್ರಣದಲ್ಲಿ ಆರ್ಥಿಕವಾಗಿ ಸದೃಡವಾಗಲು ಕೈಗಾರಿಕಾ ಅಭಿವ್ರದ್ಧಿ, ಉದ್ಯೋಗದಲ್ಲಿ ಹೆಚ್ಚಳ ಆದಾಯ ಹಂಚಿಕೆ, ಕೃಷಿ, ಸಾರಿಗೆ ಮತ್ತು ಶಿಕ್ಷಣಕ್ಕೆ ಆದ್ಯತೆ ನೀಡುವುದು. ಸಾಮಾಜಿಕವಾಗಿ ಮಹಿಳಾ ಸ್ಥಿಗತಿ ಸುಧಾರಣೆ, ಮೂಡನಂಬಿಕೆಗಳ ನಿವಾರಣೆ, ಯುವ ಜನತೆ ಸಬಲೀಕರಣ, ಸಮುದಾಯದ ಸಹಬಾಗಿತ್ವ ಅವಶ್ಯವಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಕುಟುಂಬ ಕಲ್ಯಾಣ ಕಾರ್ಯಕ್ರಮದಲ್ಲಿ ಉತ್ತಮ ಸೇವೆ ಸಲ್ಲಿಸಿದ ಜಿಲ್ಲೆಯ ವೈದ್ಯಾಧಿಕಾರಿಗಳು, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳು, ಶುಶ್ರೂಷಣಾಧಿಕಾರಿಗಳು, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು, ಆಶಾ ಕಾರ್ಯಕರ್ತೆಯರನ್ನು ಹಾಗೂ ಇಲಾಖೆಯಿಂದ ವಿಶ್ವ ಜನಸಂಖ್ಯೆ ದಿನಾಚರಣೆಯ ಅಂಗವಾಗಿ ಏರ್ಪಡಿಸಿದ ಪ್ರಬಂಧ ಸ್ಪರ್ದೇ, ರಿಲ್ಸ್, ಮತ್ತು ಕಿರುಚಿತ್ರಗಳಲ್ಲಿ ಭಾಗವಹಿಸಿ ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರಗಳನ್ನು ನೀಡಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಮಹಾವಿದ್ಯಾಲಯದ ನಿರ್ದೇಶಕರಾದ (ಡಿನ್) ಡಾ.ಅಶೋಕ ಶೆಟ್ಟಿ ನಿರ್ಧೇಶಕರು, ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ.ವ್ಹಿ.ವ್ಹಿ ಶಿಂಧೆ, ವೈದ್ಯಕೀಯ ಅಧಿಕ್ಷಕರಾದ ಡಾ.ಈರಣ್ಣಾ ಪಲ್ಲೇಧ, ಸ್ಥಳೀಯ ವೈದ್ಯಾಧಿಕಾರಿಗಳಾದ ಸರೋಜ ತಿಗಡಿ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿಗಳಾದ ಡಾ.ಚಾಂದನಿ ದೇವಡಿ ಉಪಸ್ಥಿರಿದ್ದರು. ಶ್ರೀ ಶಿವಾಜಿ ಮಾಳಗೆÀನ್ನವರು ಉಪ ಜಿಲ್ಲಾ ಆರೋಗ್ಯ ಶಿಕ್ಷಣಾದಿಕಾರಿಗಳು ನಿರೂಪಿಸಿದರು. ಡಾ.ರಮೇಶ ದಂಡಗಿ ವೈದ್ಯಾಧಿಕಾರಿಗಳು ವಂದಿಸಿದರು.

ಜಾಥಾ: ವಿಶ್ವ ಜನಸಂಖ್ಯಾ ದಿನಚಾರಣೆ ಪ್ರಯುಕ್ತ ಜಿಲಾಧಿಕಾರಿಗಳ ಕಚೇರಿಯ ಆವರಣದಿಂದ ಜನಸಂಖ್ಯಾ ದಿನಾಚರಣೆಯ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಜಾಥಾ ಕಾರ್ಯಕ್ರಮಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಡಾ ಮಹೇಶ ಕೋಣಿ ಚಾಲನೆ ನೀಡಿದರು. ಸ್ಕೌಟ್ಸ್ & ಗೈಡ್ಸ ಹಾಗೂ ವಿವಿಧ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಆಶಾ ಕಾರ್ಯಕರ್ತೆಯರು ಹಾಜರಿದ್ದರು.