Belagavi News In Kannada | News Belgaum

ಕೋಲಾರದಲ್ಲಿ ಅನುಮಾನಾಸ್ಪದವಾಗಿ ದಂಪತಿ ಸಾವು..!

ಕೋಲಾರ: ದಂಪತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ದಾರುಣ ಘಟನೆ ಕೋಲಾರ ತಾಲೂಕಿನ ಕಲ್ವಮಂಜಲಿ ಗ್ರಾಮದ ಬಳಿ ನಡೆದಿದೆ.

ಗಂಡ ಲಕ್ಷ್ಮಣ್, ಹೆಂಡತಿ ಮಾಲಾಶ್ರೀ ಆತ್ಮಹತ್ಯೆ ಮಾಡಿಕೊಂಡಿರುವ ದುರ್ದೈವಿಗಳು. ಒಂದೇ ಹಗ್ಗದಲ್ಲಿ ದಂಪತಿಗಳಿಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೃತ ಲಕ್ಷ್ಮಣ್‌ ಆಟೋ ಚಾಲಕನಾಗಿದ್ದ. ಹೆಂಡತಿ ಅಕ್ಷರ ದಾಸೋಹದ ಸಹಾಯಕಿಯಾಗಿದ್ದರು‌. ವೇಮಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿದೆ. ಪೊಲೀಸರು ತನಿಖೆ ನಡೆಸುತ್ತಾ ಇದ್ದು, ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.