ಸಂಕೇಶ್ವರ ಪೊಲೀಸರಿಂದ ವಂಚಕನ ಬಂಧನ 2 ಲಕ್ಷ ರೂಪಾಯಿ 30000. ಮೌಲ್ಯದ ಮೊಬೈಲ್ ವಶ

news belagavi

ಬೆಳಗಾವಿ: ಸಂಕೇಶ್ವರ ಪೊಲೀಸರಿಂದ ವಂಚಕನ ಬಂಧನ 2 ಲಕ್ಷ  ರೂಪಾಯಿ  30000. ಮೌಲ್ಯದ ಮೊಬೈಲ್ ವಶ

ತಾನು ಬೆಳಗಾವಿ ಜಿಲ್ಲಾ ಅಧಿಕಾರಿಗಳ ಕಚೇರಿಯಲ್ಲಿ ಸರ್ಕಾರಿ ನೌಕರರಾಗಿದ್ದು ಅಕ್ರಮ ಮರಳು ಸಾಗಾಣಿಕೆಗೆ ಸಂಬಂಧಿಸಿದಂತೆ ತನಿಖೆ ಮಾಡುವ ಅಧಿಕಾರ ನನಗೆ ಇದೆ  ಮತ್ತು ಜಿಲ್ಲಾಡಳಿತದ ಪರವಾನಗಿ ಕಾನೂನು ಪ್ರಕಾರ ಎಂ ಸ್ಯಾಂಡ್ ಸರಬರಾಜು ಮಾಡುತ್ತೇನೆ ಎಂದು ಜನರಲ್ಲಿ ನಂಬಿಸಿ ಮೂರು ಲಕ್ಷದ ರೂಪಾಯಿ ಪಡೆದು ಮೋಸ ಮಾಡಿದ ಬಗ್ಗೆ ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ದಿನಾಂಕ 6 -7 -2019 ರಂದು ವಂಚನೆಯ ಪ್ರಕರಣ ದಾಖಲಾಗಿತ್ತು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಮಾನ್ಯ ಎಸ್ಪಿ ಬೆಳಗಾವಿ ರವರು ಶೀಘ್ರವಾಗಿ ಆರೋಪಿಯನ್ನು ಬಂಧಿಸುವಂತೆ ಆದೇಶಿಸಿದ್ದರು ಪ್ರಕರಣವನ್ನು ಬೆನ್ನತ್ತಿದ ಪೊಲೀಸರು ಇವತ್ತು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ಆರೋಪಿ ಶಿವಪ್ರಸಾದ್. ಉರ್ಪ. ಶಿವು ಅಡಿಯಪ್ಪ . ಮಠದ ವಯಸ್ಸು 22 ಜಾತಿ  ಈತನು ವಿದ್ಯಾರ್ಥಿಯಾಗಿದ್ದು .
ಸಾ/ ಮಹಾಲಿಂಗೇಶ್ವರ ಗುಡಿಯ ಹತ್ತಿರ ಮಹಾಲಿಂಗಪುರ್ ತಾಲೂಕ ಮುಧೋಳ ಜಿಲ್ಲಾ ಬಾಗಲಕೋಟೆ ಯಮನಾಗಿದ್ದು ಬಿಲ್ಡಿಂಗ್ ರೂಮ್ ನಂಬರ್ 4 ರಾಮದೇವ್ ಹೋಟೆಲ್ ಹತ್ತಿರ ಬೆಳಗಾವಿಯಲ್ಲಿ ಬಂಧಿಸಿರುತ್ತಾರೆ.

ಬಂಧಿತನಿಂದ ವಂಚನೆ ಮಾಡಲು ಬಳಸಿದ ಜಿಲ್ಲಾಧಿಕಾರಿಗಳ ಕಚೇರಿಯ ನಕಲಿ ಮೂರು ಸಿಲಗಳು ಹಾಗೂ ನಕಲಿ ಸರ್ಕಾರಿ ರಿಜಿಸ್ಟರ್ ಗಳನ್ನು ನಕಲಿ ಐಡಿ ಕಾರ್ಡ್ ಗಳನ್ನು ವಶಪಡಿಸಿಕೊಂಡುರುತ್ತಾರೆ

ಅದರಂತೆ ಮೋಸದಿಂದ ಪಡೆದ ಮೂರು ಲಕ್ಷ ರೂಪಾಯಿಗಳಲ್ಲಿ 2 ಲಕ್ಷ ರೂಪಾಯಿ ನಗದು ಮತ್ತು 30 ಸಾವಿರ ರೂಪಾಯಿ ಮೌಲ್ಯದ ಒಂದು ಮೊಬೈಲನ್ನು ವಶಪಡಿಸಿಕೊಂಡು
ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಬೆಳಗಾವಿ ಶ್ರೀ. ರಾಮ್ .ಅರಸಿದ್ದಿ ಡಿವೈಎಸ್ಪಿ ಗೋಕಾಕ್ ಅವರ ಮಾರ್ಗದರ್ಶನದಲ್ಲಿ ಸಿಪಿಐ. ಹುಕ್ಕೇರಿ ಶ್ರೀ. ಸುಂದರೇಶ್ ಹೊನ್ನವರ್ ನೇತೃತ್ವದಲ್ಲಿ ಪಿಎಸ್ಐ ಎಂ.ಎಂ .ತಹಸಿಲ್ದಾರ್ ಹಾಗೂ ಠಾಣಾ ಸಿಬ್ಬಂದಿಗಳಾದ ವಾಯ್. ಡಿ. ಗುಂಜಿಗಿ ಎ.ಎಸ್. ಸನದಿ .ಮಂಜುನಾಥ್ .ಕಬ್ಬೂರ್ ರಮೇಶ್. ರಾಜಪುರ ಎಸ್. ಎಲ್ .ಗಳತಗಿ ಎಂ.ಎಸ್. ಹಾರೂಗೇರಿ ಇವರ ತಂಡ ಪ್ರಕರಣ ಪತ್ತೆ ಹಚ್ಚುವುದರಲ್ಲಿ ಯಶಸ್ವಿಯಾಗಿದ್ದಾರೆ ಸಿಬ್ಬಂದಿಗಳ ಕಾರ್ಯವನ್ನು ಕಂಡು ಜಿಲ್ಲಾ ಎಸ್ಪಿ ಮೆಚ್ಚುಗೆ ವೆಕ್ತಪಡಿಸಿದರು

Read Belgaum News & Updates for What’s Happening in Around You @ in News Belgaum Kannada News Portal.