ಸಹಾಯಧನಕ್ಕಾಗಿ ಅರ್ಜಿ ಆಹ್ವಾನ

news belagavi

ಬೆಳಗಾವಿ: 2019-20ನೇ ಸಾಲಿಗೆ ಹೊಸ ಪ್ರದೇಶ ವಿಸ್ತರಣೆ-ಬಾಳೆ, ಗೇರು ಮತ್ತು ಸಂಕೀರ್ಣ ತಳಿ ತರಕಾರಿ ಬೆಳೆ ಬೆಳೆಯಲು ಸಹಾಯಧನದ ಸೌಲಭ್ಯವಿದ್ದು, ಸದರಿ ಬೆಳೆಯನ್ನು ಬೆಳೆಯಲು ನೀರಿನ ಅವಶ್ಯಕತೆಯಿದ್ದು, ರೈತರು ತಮ್ಮ ಸ್ವಂತ ತೋಟದಲ್ಲಿ ವೈಯಕ್ತಿಕ ಕೃಷಿಹೊಂಡ ಮತ್ತು ಸಮುದಾಯ ಕೃಷಿಹೊಂಡಗಳನ್ನು ನಿರ್ಮಾಣ ಮಾಡಿಕೊಂಡಲ್ಲಿ ಸಹಾಯಧನ ನೀಡಲಾಗುವುದು.

ಸಂರಕ್ಷಿತ ಬೇಸಾಯ ಕಾರ್ಯಕ್ರಮದಡಿ ಹಸಿರುಮನೆಗಳ ನಿರ್ಮಾಣ, ಹಸಿರುಮನೆಯಲ್ಲಿ ಬೆಳೆಯುವ ಬೆಳೆಗೆ ಸಹಾಯಧನ, ಪ್ಲಾಸ್ಟಿಕ್ ಹೊದಿಕೆ, ರೋಗ ಮತ್ತು ಕೀಟ ನಿಯಂತ್ರಣ, ತೋಟಗಾರಿಕೆಯಲ್ಲಿ ಯಾಂತ್ರೀಕರಣ ಕಾರ್ಯಕ್ರಮದಡಿ ಸಣ್ಣ ಟ್ರ್ಯಾಕ್ಟರ್, ಮಲ್ಚಿಂಗ್ ಮಷಿನ್, ಬಂಡ್/ಬೆಡ್‍ಮೆಕರ್, ಕಲ್ಟಿವೆಟರ್ ಖರೀದಿಸಿದಲ್ಲಿ ಸಹಾಯಧನ ನೀಡಲು ಅವಕಾಶವಿರುತ್ತದೆ.

ಕೊಯ್ಲೋತ್ತರ ನಿರ್ವಹಣಾ ಘಟಕದಡಿ ಪ್ಯಾಕ್‍ಹೌಸ್, ಇಂಟಿಗ್ರೇಟೆಡ್ ಪ್ಯಾಕ್‍ಹೌಸ್, ಪ್ರಾಥಮಿಕ ಸಂಸ್ಕರಣಾ ಘಟಕದಡಿ ಗೇರು ಸಂಸ್ಕರಣಾ ಘಟಕ, ಅರಿಷಿಣ ಸಂಸ್ಕರಣಾ ಘಟಕ, ಈರುಳ್ಳಿ ಶೇಖರಣಾ ಘಟಕ, ಬಾಳೆ ಬಾಗಿಸುವ ಘಟಕ, ಸೋಲಾರ್ ಶೈತ್ಯಾಗಾರ ಘಟಕಗಳಿಗೆ ಸಹಾಯಧನ ನೀಡಲು ಅವಕಾಶವಿದ್ದು, ಸಣ್ಣ-ಅತೀಸಣ್ಣ, ಪರಿಶಿಷ್ಟ ಜಾತಿ/ಪಂಗಡ, ಮಹಿಳೆ ರೈತರಿಗೆ ವಿಶೇಷ ಆದ್ಯತೆ ನೀಡಲಾಗವುದು.

ಸದರಿ ಯೋಜನೆಯ ಸೌಲಭ್ಯವನ್ನು ಪಡೆಯಲು ತಾಲ್ಲೂಕಾ ತೋಟಗಾರಿಕೆ ಕಚೇರಿ ಹಾಗೂ ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರಗಳಲ್ಲಿ ಸಹಾಯಕ ತೋಟಗಾರಿಕೆ ಅಧಿಕಾರಿಗಳಿಗೆ ಸಂಪರ್ಕಿಸಿ ಅರ್ಜಿಗಳನ್ನು ನೀಡಲು ಬೆಳಗಾವಿ ತೋಟಗಾರಿಕೆ ಉಪನಿರ್ದೇಶಕರು (ಜಿ.ಪಂ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read Latest Kannada News Alerts on Belgaum News (Belagavi News) Follow us on Twitter - Facebook - Instagram - Pinterest & YouTube