ಪಿ.ಯು.ಸಿ,ಪ್ರಥಮ ಪ್ರಯತ್ನದಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುವ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ಆನಲೈನ್ ಮೂಲಕ ಅರ್ಜಿಗಳನ್ನು ಅಹ್ವಾನಿಸಲಾಗಿದೆ.

news belagavi

ಬೆಳಗಾವಿ, 2018-19 ಸಾಲಿನಲ್ಲಿ ಹುಕ್ಕೇರಿ ತಾಲೂಕಿನಲ್ಲಿ ಪಿ.ಯು.ಸಿ, ಪದವಿ, ಸ್ನಾತಕೋತ್ತರ ಮತ್ತು ವೃತ್ತಿಪರ ಕೋರ್ಸಗಳಲ್ಲಿ ಪ್ರಥಮ ಪ್ರಯತ್ನದಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುವ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ಆನಲೈನ್ ಮೂಲಕ ಅರ್ಜಿಗಳನ್ನು ಅಹ್ವಾನಿಸಲಾಗಿದೆ.

ಪ.ಜಾತಿ ವಿದ್ಯಾರ್ಥಿಗಳು ಸಮಾಜ ಕಲ್ಯಾಣ ಇಲಾಖೆಯ ವೆಬ್‍ಸೈಟ್ ತಿತಿತಿ.sತಿ.ಞಚಿಡಿ.ಟಿiಛಿ.iಟಿ ದಲ್ಲಿ ಭರ್ತಿ ಮಾಡಿ ಪ್ರಾಚಾರ್ಯರ ಸಹಿಯೊಂದಿಗೆ ಅಗತ್ಯ ದಾಖಲಾತಿಗಳೊಂದಿಗೆ ಸಹಾಯಕ ನಿರ್ದೇಶಕರು(ಗ್ರೇಡ-20) ಸಮಾಜ ಕಲ್ಯಾಣ ಇಲಾಖೆ, ಹುಕ್ಕೇರಿ ಇವರಿಗೆ ಸಲ್ಲಿಸಬೇಕು.

ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಪಾಸಾದ ಅಂಕ ಪಟ್ಟಿಯ ದೃಢೀಕರಣ ನಕಲು ಪ್ರತಿ, ವಿದ್ಯಾರ್ಥಿಯ ತಂದೆ/ತಾಯಿ/ಪಾಲಕರ ವಾರ್ಷಿಕ ಆದಾಯ ಪ್ರಮಾಣ ಪತ್ರ, ರಾಷ್ಟ್ರಿಕೃತ ಬ್ಯಾಂಕನಲ್ಲಿ ಖಾತೆ ಹೊಂದಿರುವ ಪಾಸ ಬುಕ್ಕಿನ ನಕಲು ಪ್ರತಿ, ಆಧಾರ ಕಾರ್ಡಿನ ಝೆರಾಕ್ಸ ಪ್ರತಿ, ಅಥವಾ ಆಧಾರ ನೊಂದಣಿ ಪತ್ರದ ಝೆರಾಕ್ಸ ಪ್ರತಿ ಲಗತ್ತಿಸಬೇಕಾದ ದಾಖಲಾತಿಗಳು.

ಹೆಚ್ಚಿನ ಮಾಹಿತಿಗಾಗಿ ಕಛೇರಿ ದೂರವಾಣಿ ಸಂಖ್ಯೆ 08333-265419ನ್ನು ಹುಕ್ಕೇರಿಯ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು(ಗ್ರೇಡ-2) ಅವರನ್ನು ಸಂಪರ್ಕಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read Latest Kannada News Alerts on Belgaum News (Belagavi News) Follow us on Twitter - Facebook - Instagram - Pinterest & YouTube