ಅಸಹಾಯಕ ಮಹಿಳೆ ಅತ್ಯಾಚಾ ರಕೊಲೆ:ಆರೋಪಿಗೆ ಗಲ್ಲು ಶಿಕ್ಷೆ

news belagavi

ಬೆಳಗಾವಿ: ಅಸಹಾಯಕ ಮಹಿಳೆ ಮೇಲೆ ಅತ್ಯಾಚಾರ ಎಸಗಿ ಕೊಲೆಗೈದ ಆರೋಪ ಪ್ರಕರಣದ ವಿಚಾರಣೆ ನಡೆಸಿದ ನಗರದ 8ನೇ ಹೆಚ್ಚುವರಿ ಜಿಲ್ಲಾ ಸೆಷನ್ ಕೋರ್ಟ್ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಿದೆ.

ಚಿಕ್ಕೋಡಿ ತಾಲೂಕು ಖಡಕಲಾಟದ ರಮೇಶ (ರಾಮಾ) ತಂದೆ ಲಕ್ಷ್ಮಣ ಜಾಧವ (30) ಎಂಬಾತ ಗಲ್ಲು ಶಿಕ್ಷೆಗೆ ಗುರಿಯಾದ ಆರೋಪಿ. ಅತ್ಯಾಚಾರ ಕೃತ್ಯಕ್ಕೆ ಸಹಕರಿಸದ ಮಹಿಳೆಯನ್ನು ಕಲ್ಲಿನಿಂದ ಜಜ್ಜಿ ಹತ್ಯೆ ಮಾಡಿದ್ದ ಆರೋಪದ ಮೇರೆಗೆ ವಿಚಾರಣೆ ನಡೆಸಲಾಯಿತು.

ನ್ಯಾಯಾಧೀಶ ವಿ.ಬಿ.ಸೂರ‌್ಯವಂಶಿ ಅಪರಾಧಿಗೆ ಗಲ್ಲು ಶಿಕ್ಷೆ ವಿಧಿಸಿದ್ದು, ಸರಕಾರಿ ಅಭಿಯೋಜಕ ಕಿರಣ ಪಾಟೀಲ ವಾದ ಮಂಡಿಸಿದ್ದರು.///

Read Belgaum News & Updates for What’s Happening in Around You @ in News Belgaum Kannada News Portal.