ಮತ್ತೆ ಹುಕ್ಕೇರಿ-ಕವಟಗಿಮಠ ನಡುವೆ ಡಿಶುಂ ಡಿಶುಂ

Dushum dushum is again between Hukkeri-Kavatigimattam

ಬೆಳಗಾವಿ/ಚಿಕ್ಕೋಡಿ:(belgaum news) (news belgaum )ನಗರದಲ್ಲಿ ನಡೆದ 69 ಗಣರಾಜ್ಯೋತ್ಸವ ವೇದಿಕೆ ಮೇಲೆ ಸಂಸದ-ಶಾಸಕ ನಡುವೆ ಮತ್ತೆ ತುರುಸಿನ ವಾಗ್ವಾದ ನಡೆದಿದೆ. DR ಮೈದಾನದಲ್ಲಿ ಉಪವಿಭಾಗಾಧಿಕಾರಿ ಗೀತಾ ಕೌಲಗಿ ದ್ವಜಾರೋಹಣ ನೆರವೇರಿಸಿದ ಬಳಿಕ ಸಂಸದ ಪ್ರಕಾಶ ಹುಕ್ಕೇರಿ ಭಾಷಣ ಮಾಡಲಾರಂಭಿಸಿದ ನಂತರ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಮಧ್ಯೆ ಪರಸ್ಪರ ವಾಗ್ವಾದ ನಡೆದಿದೆ. ಸಂಸದ ಪ್ರಕಾಶ ಹುಕ್ಕೇರಿ ಅವರು ಉಪವಿಭಾಗ ವ್ಯಾಪ್ತಿಯ ಸೇತುವೆ ನಿರ್ಮಾಣ ವಿಚಾರ ಕುರಿತು ಭಾಷಣ ಮಾಡುತ್ತಿರುವಾಗ ಮಹಾಂತೇಶ ಕವಟಗಿಮಠ ಆಕ್ಷೇಪ ವ್ಯಕ್ತಪಡಿಸಿದರು. ಗಣರಾಜ್ಯೋತ್ಸವ ದಿನದ ಸಂಭ್ರಮದಲ್ಲಿ ರಾಜಕೀಯ ಭಾಷಣ ಮಾಡದಂತೆ ಸಂಸದ ಹುಕ್ಕೇರಿ ಮಾತಿಗೆ ಅಡ್ಡಿಪಡಿಸಿದರು.

ಇಬ್ಬರೂ ನಾಯಕರ ಮಧ್ಯೆ ವಾಗ್ವಾದ ನಡೆದು ಸಂಸದ ಪ್ರಕಾಶ ಹುಕ್ಕೇರಿ ಉಪವಿಭಾಗಾಧಿಕಾರಿ ಗೀತಾ ಕೌಲಗಿ ಅವರನ್ನು ತರಾಟೆಗೆ ತೆಗೆದುಕೊಂಡು ಹೊರ ನಡೆಡದರು. ಕಳೆದ ಆಗಸ್ಟ್ 15ರಂದೂ ಇಬ್ಬರ ನಡುವೆ ಡಿಶುಂ ಡಿಶುಂ ನಡೆದಿತ್ತು.Dushum dushum is again between Hukkeri-Kavatigimattam

| Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

Read Belgaum News & Updates for What’s Happening in Around You @ in News Belgaum Kannada News Portal.