ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೇಟ್ ಕಡ್ಡಾಯ

news belagavi

ಬೆಳಗಾವಿ ;  ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೇಟ್ ಕಡ್ಡಾಯ  ನಗರ ಪೊಲೀಸ್‍ರಿಂದ ಮುಂದುವರೆದ ಕಾರ್ಯಾಚರಣೆ; 723 ಪ್ರಕರಣಗಳು ದಾಖಲು.
ಬೆಳಗಾವಿ ನಗರದಲ್ಲಿ ಮಾನ್ಯ ಸರ್ವೋಚ್ಛ ನ್ಯಾಯಾಲಯದ ರಸ್ತೆ ಸುರಕ್ಷತಾ ಸಮೀತಿ ಪತ್ರ/ಆದೇಶ ಸಂಖ್ಯೆ. 24/2014 (ಅoಖs) ದಿನಾಂಕ.24/04/2017 ನೇದ್ದನ್ನು ಕಡ್ಡಾಯ ಹಾಗೂ ಕಟ್ಟುನಿಟ್ಟಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಸೂಕ್ತ ತಿಳುವಳಿಕೆಯನ್ನು ನೀಡಿ, ಹೆಲ್ಮೇಟ್

ನಿಯಮವನ್ನು ಕಡ್ಡಾಯಗೊಳಿಸಿ ತಪ್ಪಿತಸ್ಥ ಸವಾರರ ವಿರುದ್ಧ ಪ್ರಕರಣಗಳನ್ನು ದಾಖಲಿಸುವ ಕಾರ್ಯಾಚರಣೆಯನ್ನು ಮುಂದುವರೆಸಲಾಗಿದ್ದು, ದಿನಾಂಕ. 15/05/2019 ರಂದು ಹೆಲ್ಮೇಟ್ ಧರಿಸದೆ ವಾಹನ ಸವಾರಿ ಮಾಡುತ್ತಿದ್ದ ಒಟ್ಟು 723 ತಪ್ಪಿತಸ್ಥ ವಾಹನ ಸವಾರರ ವಿರುದ್ಧ ಪ್ರಕರಣಗಳನ್ನು ದಾಖಲಿಸಿ ಒಟ್ಟು ರೂ.72,300/- ದಂಡ ವಿಧಿಸಿ ಕಾನೂನು ಕ್ರಮ ಜರುಗಿಸಲಾಗಿದೆ. ಬೆಳಗಾವಿ ನಗರದ ಎಲ್ಲ

ಸಾರ್ವಜನಿಕರು ದ್ವಿಚಕ್ರ ವಾಹನ ಚಾಲನೆ ಮಾಡುವಾಗ ಕಡ್ಡಾಯವಾಗಿ ಹೆಲ್ಮೇಟ್ ಧರಿಸಿ ವಾಹನ ಚಾಲನೆ ಮಾಡಲು ತಿಳಿಸಲಾಗಿದೆ.

Read Latest Kannada News Alerts on Belgaum News (Belagavi News) Follow us on Twitter - Facebook - Instagram - Pinterest & YouTube