Ultimate magazine theme for WordPress.

ಬೆಳಗಾವಿ ಕೆ-ಶಿಪ್ ಕಚೇರಿ ಹಾಸನ…ಕೊಡಗಿನತ್ತ: ಮತ್ತೇ ಉತ್ತರ ಕರ್ನಾಟಕಕ್ಕೆ ಅನ್ಯಾಯ?

Injustice to North Karnataka?

0 26

ಬೆಳಗಾವಿ: (news belgaum)ಉತ್ತರ ಕರ್ನಾಟಕಕ್ಕೆ ಅನ್ಯಾಯ, ಪ್ರತ್ಯೇಕ ರಾಜ್ಯ ಕೊಡಿ ಎಂಬ ಕೂಗು ದಟ್ಟವಾಗಿ ಎದ್ದಿರುವ ಮಧ್ಯೆ ಈಗ ಬೆಳಗಾವಿಯಿಂದ ಕೆ-ಶಿಪ್ (KARNATAKA STATE HIGHWAYS IMPROVEMENT PROJECT) ಕಚೇರಿಯೂ ಹಾಸನಕ್ಕೆ ಹುದ್ದೆ ಸಹಿತ ಎತ್ತಂಗಡಿಯಾಗಿದೆ. ಬೆಳಗಾವಿಗೆ ಕಾರ್ಯದರ್ಶಿ ಮಟ್ಟದ ಕಚೇರಿಗಳನ್ನು ಸ್ಥಳಾಂತರ ಮಾಡಿ ಎಂದು ಇಲ್ಲಿಯ ಜನ ಬೊಬ್ಬೆ ಇಡುತ್ತಿರುವಾಗಲೇ ಸರಕಾರ ಇಂತಹದೊಂದು ಎಡವಟ್ಟು ಮಾಡಿಕೊಂಡಿದೆ.
ಬೆಳಗಾವಿಗೆ ಕೃಷ್ಣ ಭಾಗ್ಯ ಜಲ ನಿಗಮ ಕಚೇರಿ, ಉಪ ಲೋಕಾಯುಕ್ತರು, ಮಾಹಿತಿ ಹಕ್ಕು ಆಯೋಗದ ಆಯುಕ್ತರನ್ನು ಕಳಿಸುವ ನಿರ್ಧಾರ ಪ್ರಕಟಿಸಿದ್ದ ಕುಮಾರಸ್ವಾಮಿ ಅಭಯ ಅಂದಿನ ಕಣ್ಣೊರೆಸುವ ತಂತ್ರವೇ ಎಂದು ಜನ ಆಕ್ರೋಶಗೊಂಡಿದ್ದಾರೆ. ಬೆಳಗಾವಿ ಕೆಶಿಪ್ ವಿಭಾಗೀಯ ಕಚೇರಿಯನ್ನು ಬೆಳಗಾವಿಯಲ್ಲಿ ಹೊಂದಿದ್ದು ಅದನ್ನು ಹಾಸನಕ್ಕೆ ಶಿಫ್ಟ್ ಮಾಡುವ ಯತ್ನ ನಡೆದಿದ್ದು ಬೆಳಕಿಗೆ ಬಂದಿದೆ.
ಜತೆಗೆ ಉಪ ವಿಭಾಗ ಕಚೇರಿಯನ್ನು ಬೆಳಗಾವಿಯಿಂದ ಮಡಿಕೇರಿಗೆ ಶಿಫ್ಟ್ ಮಾಡಿ ಆದೇಶ ಹೊರಡಿಸಲಾಗಿದ್ದು ಅಧಿಕಾರಿಗಳ ಹುದ್ದೆಗಳು ಸಹ ಸ್ಥಳಾಂತರಗೊಂಡಿವೆ.
ಬಿಜೆಪಿ ಮುಖಂಡ ಹಾಗೂ ಉತ್ತರ ಕರ್ನಾಟಕ ವಿಕಾಸ ವೇದಿಕೆಯ ಅಶೋಕ ಪೂಜಾರಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು ಕೆ ಶಿಪ್ ಸ್ಥಳಾಂತರಿಸಿದರೆ ಎಚ್ಚರ ಎಂದು ಸರಕಾರಕ್ಕೆ ಆಗ್ರಹಿಸಿದ್ದಾರೆ. ರಾಜ್ಯ ಸರಕಾರ ‘ಸುಪರ್ ಸಿಎಂ’ ಮಾತು ಕೇಳಿ ಸುಮ್ಮನಿರಲಾರದೇ…ಇರುವೆ ಬಿಟ್ಟುಕೊಂಡಂತಾಗಿದೆ.

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for (http://tarunkranti.news ) latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ  (https://newsbelgaum.in)

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ .. (https://newsbelgaum.in)

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.  

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

Your email address will not be published.