ಭರತೇಶ ಸೆಂಟ್ರಲ ಸ್ಕೂಲನಲ್ಲಿ ಮಾವು ಮೇಳ

news belagavi

ಬೆಳಗಾವಿ.: ಇತ್ತಿಚಿಗೆ ಹಲಗಾ ಗ್ರಾಮದಲ್ಲಿರುವ ಭರತೇಶ ಸೆಂಟ್ರಲ ಸ್ಕೂಲನಲ್ಲಿ ಹಣ್ಣಿನ ರಾಜ ಎಂದು ಗುರುತಿಸಿಕೊಂಡಿರುವ ಮಾವು ಮೇಳವನ್ನು ಆಚರಿಸಲಾಯಿತು.

ಈ ಮಾವು ಮೇಳವನ್ನು ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷ ವಿನೋದ ದೊಡ್ಡಣ್ಣವರ ಅವರು ಉದ್ಘಾಟಿಸಿದರು. ಈ ಮೇಳದಲ್ಲಿ ವಿದ್ಯಾರ್ಥಿಗಳಿಗೆ ಮಾವಿನ ಹಣ್ಣು ಹಾಗೂ ಅದರ ಇನ್ನಿತರ ಉತ್ಪಾದನೆಗಳಾದ ಮಾವಿನ ಸ್ಲೈಸ್, ಮಾವಿನ ರಸ, ಮಾವು ಜೆಲ್ಲಿಗಳು, ಮಾವು ಮಿಠಾಯಿ, ಮಾವಿನ ಉಪ್ಪಿನಕಾಯಿ ಸೇರಿದಂತೆ ಇನ್ನಿತರ ಉತ್ಪಾದನೆಗಳ ಬಗ್ಗೆ ಪರಿಚಯ ನೀಡಲಾಯಿತು.

ಅದಲ್ಲದೇ ಮಾವಿನ ಉತ್ಪಾದನೆಗಳನ್ನು ವಿದ್ಯಾರ್ಥಿಗಳಿಗೆ ಹಂಚಿ ಮಾವು ಹಣ್ಣಿನ ಪೌಷ್ಠಿಕ ಮೌಲ್ಯವನ್ನು ವಿದ್ಯಾರ್ಥಿಗಳಿಗೆ ತಿಳಿಸಲಾಯಿತು.
ಈ ಮಾವು ಮೇಳದಲ್ಲಿ ಶೀಕ್ಷಕರು ಮತ್ತು ವಿದ್ಯಾರ್ಥಿಗಳು ಹಳದಿ ಬಣ್ಣಚ ವೇಷ ಭೂಷಣವನ್ನು ಧರಿಸಿ ಎಲ್ಲಗ ಗಮನ ಸೆಳೆದರು. ಈ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ಕೀರ್ತಿ ದೊಡ್ಡಣ್ಣವರ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು. /////

Read Belgaum News & Updates for What’s Happening in Around You @ in News Belgaum Kannada News Portal.