ಅನೈತಿಕ ಸಂಬಂಧ ಹಿನ್ನೆಲೆಯಲ್ಲಿ ಕೊಲೆ ಮಾಡಿ 9 ತಿಂಗಳು ತಲೆಮರೆಸಿಕೊಂಡಿದ್ದ ಆರೋಪಿತನ ಪತ್ತೆ.

news belagavi

ಬೆಳಗಾವಿ : ಟಿಳಕವಾಡಿ ಪೊಲೀಸರ ಕಾರ್ಯಾಚರಣೆ; ಅನೈತಿಕ ಸಂಬಂಧ ಹಿನ್ನೆಲೆಯಲ್ಲಿ ಕೊಲೆ ಮಾಡಿ 9 ತಿಂಗಳು ತಲೆಮರೆಸಿಕೊಂಡಿದ್ದ ಆರೋಪಿತನ ಪತ್ತೆ.

ಸುಮಾರು 9 ತಿಂಗಳ ಹಿಂದೆ ತನ್ನ ಹೆಂಡತಿಯೊಡನೆ ಅನೈತಿಕ ಸಂಬಂಧ ಹೊಂದಿದ್ದ ರಾಹುಲ ಶರಣಪ್ಪಾ ದಿವಟಗಿ ವಯಸ್ಸು 27 ವರ್ಷ ಸಾ :ಮನೆ ನಂ 1283 ಅನ್ನಪೂರ್ಣೆಶ್ವರಿ ನಗರ ವಡಗಾಂವ ಬೆಳಗಾವಿ ಈತನನ್ನು ಸಂಚು ರೂಪಿಸಿ 4 ಜನ ಸೇರಿ ಕೊಲೆ ಮಾಡಿ ಚೀಲದಲ್ಲಿ ಹಾಕಿ, ಕಾರನಲ್ಲಿ ತಿಲಾರಿ ಡ್ಯಾಮಿನ ಹತ್ತಿರ ಜಂಗಲದಲ್ಲಿ ಶವ ಎಸೆದ ಹೋದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಆರೋಪಿತರನ್ನು ಬಂಧಿಸಲಾಗಿತ್ತು,

ಆದರೆ ಫರಾರಿಯಾಗಿದ್ದ ಮುಖ್ಯ ಆರೋಪಿ ಮಲ್ಲಿಕಾರ್ಜುನ ಮಹಾದೇವಪ್ಪ ಗುಡಶೆಟ್ಟಿ ವಯಸ್ಸು: 35 ವರ್ಷ ಸಾ: ಮ ನಂ. 422 ಹೊಸೂರ ತಾ: ಸೌದತ್ತಿ ಈತನನ್ನು ಬಂಧಿಸಲು ಜಾಲ ಬೀಸಲಾಗಿತ್ತು, ಆತನ ಇರುವಿಕೆಯ ಖಚಿತ ಮಾಹಿತಿಯನ್ನು ಕಲೆ ಹಾಕಿ ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಶ್ರೀ. ಮಾಹಾಂತೇಶ್ವರ ಜಿದ್ದಿ, ಎಸಿಪಿ ಅಪರಾಧ ವಿಭಾಗ, ಶ್ರೀ ಎ. ಚಂದ್ರಪ್ಪ ಎಸಿಪಿ ಖಡೇಬಜಾರ ಉಪ ವಿಭಾಗ ರವರ ಉಸ್ತುವಾರಿಯಲ್ಲಿ ಟಿಳಕವಾಡಿ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ಮತ್ತು ಅವರ ಸಿಬ್ಬಂದಿಯವರು ಕಾರ್ಯಾಚರಣೆ ನಡೆಸಿ ಆರೋಪಿತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.

ಆರೋಪಿಯನ್ನು ಬಂಧಿಸುವಲ್ಲಿ ಸತತ ಶ್ರಮಿಸಿ ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾದ ಟಿಳಕವಾಡಿ ಪಿಐ ಶ್ರೀ. ಎಸ್, ಆರ್. ನಾಯ್ಕ ಮತ್ತು ತಂಡದ ಎಎಸ್‍ಐ ಶ್ರೀ ಎಮ್. ವೈ. ಕಾರಿಮನಿ ಶ್ರೀ. ವಿ. ಡಿ. ಸರನಾಯಕ, ಶ್ರೀ. ಆರ್. ಎಮ್. ಪರಮಾಜ, ಶ್ರೀ. ಲಕ್ಷ್ಮಣ ಗೂಗಾಡೆ, ಶ್ರೀ. ಆರ್. ಜೆ. ಕೋಳಿ, ಶ್ರೀ. ಎಮ್. ಜಿ. ಮರನಿಂಗಗೋಳ ಇವರಗಳನ್ನು ಮಾನ್ಯ ಪೊಲೀಸ್ ಆಯುಕ್ತರು ಬೆಳಗಾವಿ ನಗರ, ಡಿಸಿಪಿ (ಕಾ&ಸು) ಮತ್ತು ಡಿಸಿಪಿ (ಅಪರಾಧ ಮತ್ತು ಸಂಚಾರ) ಬೆಳಗಾವಿ ನಗರ ರವರು ಶ್ಲಾಘಿಸಿರುತ್ತಾರೆ.///

Read Belgaum News & Updates for What’s Happening in Around You @ in News Belgaum Kannada News Portal.