ರಾಜಕೀಯಕ್ಕೆ ಭಾರಿ ಎಂಟ್ರಿ ಕೊಟ್ಟಿರುವ ಮಾಜಿ ಶಾಸಕ ರಮೇಶ ಕುಡಚಿ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ರ್ಯಾಲಿ ನಡೆಸಿದರು

NEWS BELAGAVI

ಬೆಳಗಾವಿ: ಜಿಲ್ಲಾ ರಾಜಕೀಯಕ್ಕೆ ಭಾರಿ ಎಂಟ್ರಿ ಕೊಟ್ಟಿರುವ ಮಾಜಿ ಶಾಸಕ ರಮೇಶ ಕುಡಚಿ ಇಂದು ಸಾವಿರಾರು ಕಾರ್ಯಕರ್ತರೊಂದಿಗೆ ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ರ್ಯಾಲಿ ನಡೆಸಿದರು.

ಇಂದು ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಸೇರಿಬಂದ ರಮೇಶ ಕುಡಚಿ ಮತ್ತು ಅನಿಲ ಪೋತದಾರರಿಗೆ ಕಾಂಗ್ರೆಸ್ ಕಾರ್ಯಕರ್ತರು ಕರತಾಡಣ ಮಾಡಿದರು. ಕಳೆದ ಆರು ತಿಂಗಳಿಂದ ನಗರದಲ್ಲೇ ಇದ್ದು ವಿದ್ಯಮಾನ ಗಮನಿಸುತ್ತಿದ್ದೆ. ಅಂದು ಸ್ವಾರ್ಥ ಮತ್ತು ಮೋಸದ ರಾಜಕೀಯ ನಾಯಕರು ಹಾಲಿ ಶಾಸಕನಾಗಿದ್ದ ನನಗೆ ಟಿಕೇಟ್ ತಪ್ಪಿಸಿದರು. ಆದರೆ ಪಕ್ಷಕ್ಕಾಗಿ ಕಹಿ ಅನುಭವಗಳನ್ನು ಈಗ ಮರೆತಿದ್ದೇನೆ ಎಂದರು.


ಕಾಂಟ್ರೆಕ್ಟರ್ ಕಾಂಗ್ರೆಸಿಗರಿಗೆ ಹೆಚ್ಚಿನ ಬೆಲೆಯಿದೆ. ಮೂಲ ಕಾಂಗ್ರೆಸ್ಸಿಗರಿಗೆ ಪಕ್ಷದಲ್ಲಿ ಬೆಲೆ ಇಲ್ಲ. ಕಾಂಗ್ರೆಸ್ ಪಕ್ಷ ಒಬ್ಬರ ಸ್ವತ್ತಲ್ಲ. ಸೆಕ್ಯುಲರಿಸಂಗೆ ಹೆಚ್ಚಿನ ಬೆಲೆ ಬರಬೇಕಾಗುತ್ತದೆ ಎಂದರು. ಕಳೆದ 15ವರ್ಷದಲ್ಲಿ ಬಿಜೆಪಿ ಸಾಧನೆ ಶೂನ್ಯ. ಇದರಿಂದ ಸಹಜವಾಗಿ ಕಾಂಗ್ರೆಸಗೆ ಜಯ ಸಿಗಲಿದೆ ಎಂದರು. ನಗರದ ಉತ್ತರ ದಕ್ಷಿಣ ಭಾಗಗಳಲ್ಲಿ ಸಾವಿರಾರು ಕಾಂಗ್ರೆಸ್ ಜೆಡಿಎಸ್ ಕಾರ್ಯಕರ್ತರು ಪ್ರಚಾರ ನಡೆಸಿದರು.

ಬಾಬುಲಾಲ ಬಾಗವಾನ, ಫೈಜುಲ್ಲಾ ಮಾಡಿವಾಲೆ, ಚಂದ್ರಶೇಖರ ಸಾಧುನವರ, ಟಿ. ಕೆ. ಪಾಟೀಲ, ಶಿವಾನಂದ ಚಿಕ್ಕಮಠ, ಮಂಜುನಾಥ ಪಾಟೀಲ, ಅಖಿಲಾ ಪಠಾಣ, ಸೀಮಾ ಇನಾಮದಾರ ಇತರರು ಉಪಸ್ಥಿತರಿದ್ದರು.///

Read Latest Kannada News Alerts on Belgaum News (Belagavi News) Follow us on Twitter - Facebook - Instagram - Pinterest & YouTube