before post

ಖಾನಾಪೂರದಲ್ಲಿ 9 ಬೈಕ್ ಕಳ್ಳರ ಬಂಧನ

news belagavi

0

ಖಾನಾಪುರ: ಖಾನಾಪುರ ಮತ್ತು ಬೆಳಗಾವಿಯಲ್ಲಿ ಬೈಕ್ ಕಳ್ಳತನ ಮಾಡುತ್ತಿದ್ದ 9 ಜನ ಕಳ್ಳರ ಗ್ಯಾಂಗನ್ನು ಖಾನಾಪೂರ ಪೋಲಿಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಖಾನಾಪೂರ ಪಟ್ಟಣದ ಭಟ್ಟಗಲ್ಲಿ ನಿವಾಸಿ ಕಿಶನ್ ನಾಯಿಕ (23), ದುರ್ಗಾ ನಗರ ನಿವಾಸಿ ವಿವೇಕ ಅವಲಕ್ಕಿ (20), ಸ್ವೇಶನ ರಸ್ತೆಯ ನಿವಾಸಿ ರಾಮಲಿಂಗಾ ಸೊಳಕರ(20), ನಿಂಗಾಪೂರಗಲ್ಲಿ ನಿವಾಸಿ ಅಮಿತ್ ನಾಯಿಕ (22), ಅಶುತೋಷ್ ದೇಸಾಯಿ (21), ಓಂಕಾರ

ಕುತೂಹಲಕಾರಿ(19), ಬುರಡಗಲ್ಲಿ ನಿವಾಸಿ ಮನಸು ಕುಂಬಾರ (25), ದೇಸಾಯಿ ಗಲ್ಲಿ ನಿವಾಸಿ ಓಂಕಾರ ಪಾಟೀಲ, ಬೆಳಗಾವಿ ವಡಗಾವ ಸಂಭಾಜಿ ಗಲ್ಲಿ ನಿವಾಸಿ ಅಮಿತ್ ನಾಯಿಕ (22) ಇವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆರೋಪಿಗಳಿಂದ ಓಟು 13 ಕಳ್ಳತನ ಮಾಡಿದ ಬೈಕ್ ಗಳನ್ನು ವಶಪಡಿಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ.

ಬೈಲಹೊಂಗಲ ಡಿಎಸ್ಪಿ ಕರುಣಾಕರ ಶೆಟ್ಟಿ, ಖಾನಾಪೂರ ಸಿಪಿಐ ಮೂತಿಲಾಲ್ ಪವಾರ್, ಪಿಎಸ್ಐ ಬಾಬಾಗೌಡ ಪಾಟೀಲ, ಪೋಲಿಸ್ ರಾದ ಜಯರಾಂ ಹಮ್ಮನ್ನವರ್, ಶಿವಕುಮಾರ್ ಬಳ್ಳಾರಿ, ಅರುಣ್ ಹುಕ್ಕೇರಿ, ಸತೀಶ್ ಮಾಂಗ್, ಜಗದೀಶ್ ಕಾದ್ರೊಳ್ಳಿ,ಸಿದ್ಧ ಮೂಕಾಶಿ,ಪಾಂಡು ತುರಮುರಿ ಈ ಕಾರ್ಯಾಚರಣೆ ನಡೆಸಿದ್ದರು.////