ಸ್ವಚ್ಛಮೇವಜಯತೆ ಕಾರ್ಯಕ್ರಮ ಪ್ಲಾಸ್ಟಿಕ್ ಬಳಕೆಗೆ ಕಡಿವಾಣ : ರಾಜೇಂದ್ರ ಕೆ.ವಿ

news belagavi

ಬೆಳಗಾವಿ,: ಜಿಲ್ಲೆಯಲ್ಲಿ ವಿಶೇಷ ಗ್ರಾಮ ಸಭೆಗಳನ್ನು ಆಯೋಜಿಸಿ ವೈಯಕ್ತಿಕ ಶೌಚಾಲಯ, ಸಮುದಾಯದ ಶೌಚಾಲಯ ಬಳಕೆ, ಜಲ ಸಂರಕ್ಷಣೆ ಹಾಗೂ ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆಗೆ ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕುವ ಬಗ್ಗೆ ಗ್ರಾಮೀಣ ಸಮುದಾಯದಲ್ಲಿ ಜಾಗೃತಿ ಮೂಡಿಸಲಾಗುವುದು ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾಗಳಾದ ರಾಜೇಂದ್ರ ಕೆ.ವಿ ಅವರು ಹೇಳಿದರು.

ಜಿಲ್ಲಾ ಪಂಚಾಯತ ಸಭಾ ಭವನದಲ್ಲಿ ಮಂಗಳವಾರ (ಜೂ.11) ರಂದು ಆಯೋಜಿಸಲಾಗಿದ್ದ ಸ್ವಚ್ಛಮೇವಜಯತೆ ಹಾಗೂ ಜಲಾಮೃತ ಆಂದೋಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಎಲ್ಲ ತಾಲ್ಲೂಕು ಹಾಗೂ ಗ್ರಾಮ ಪಂಚಾಯತಿ ಹಂತದಲ್ಲಿ ಸ್ವಚ್ಛಮೇವಜಯತೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಪ್ರತಿಯೊಂದು ಗ್ರಾಮದಲ್ಲಿಯೂ ಕೂಡ ಸ್ವಚ್ಛತೆಯ ವಾತಾವರಣವನ್ನು ನಿರ್ಮಾಣ ಮಾಡಬೇಕು ಎಂದರು.

ಜಿಲ್ಲೆಯಾದ್ಯಂತ ಸಾಂಕೇತಿಕವಾಗಿ ಗ್ರಾಮೀಣ ಪ್ರದೇಶದ ಆಯಾ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಗ್ರಾಮಗಳಿಗೆ ಬಯಲು ಶೌಚಾಲಯ ಬೇಡ, ಜಲ ಸಂಪನ್ಮೂಲ ಉಳಿಸಿ, ಜಲಾಮೃತ ಮತ್ತು ಕಸ ವಿಂಗಡನೆಯ ಬಗ್ಗೆ ಗೋಡೆ ಬರಹಗಳನ್ನು ಬರೆಸಿ ಎಲ್ಲರಿಗೂ ತಿಳಿಸಬೇಕೆಂದರು.
ಬೆಳಗಾವಿಯಂತಹ ಪ್ರದೇಶದಲ್ಲಿ ಹೆಚ್ಚು ನದಿಗಳು ಹರಿಯುತ್ತಿದ್ದರು ಕೂಡ ಬರಗಾಲವೆಂಬುದು ತಾಂಡವಾಡುತ್ತಿದೆ ಅದನ್ನು ಆದಷ್ಟು ಬೇಗನೆ ಹೊಗಲಾಡಿಸುವದು ನಮ್ಮೆಲ್ಲರ ಗುರಿಯಾಗಬೇಕೆಂದರು.

ಒಂದೊಂದು ಹನಿ ನೀರು ಸಹ ಅಮೃತ ವಿದ್ಧಂತೆ ಹಾಗಾಗಿ ಪ್ರತಿಯೊಂದು ಕ್ಷಣದಲ್ಲಿಯೂ ನೀರನ್ನು ಮಿತವ್ಯಯವಾಗಿ ಬಳಕೆ ಮಾಡಬೇಕೆಂದರು.

ಜಿಲ್ಲೆಯಲ್ಲಿರುವ ಎಲ್ಲ ಗ್ರಾಮಪಂಚಾಯತಿಗಳಲ್ಲಿ ಸ್ವಚ್ಛತಾ ರಥದ ಮೂಲಕ ಸಾರ್ವಜನಿಕರಿಗೆ ಸ್ವಚ್ಛತೆ ಹಾಗೂ ತ್ಯಾಜ್ಯ ನಿರ್ವಹಣೆ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಮಾಡಬೇಕು ಹಾಗೂ ಪ್ಲಾಸ್ಟಿಕ್ ಬಳಕೆ ಮಾಡುವುದನ್ನು ಕಡ್ಡಾಯವಾಗಿ ನಿಷೇಧ ಮಾಡಬೇಕು ಎಂದರು.
ಗ್ರಾಮ ಪಂಚಾಯಿತಿ ಮತ್ತು ಗ್ರಾಮಗಳಲ್ಲಿ ಗೋಡೆ ಬರಹ, ಬೀದಿ ನಾಟಕ, ಪ್ರಬಂದ ಸ್ಪರ್ಧೆ, ಶ್ರಮದಾನ, ಜಾಥಾ ಕಾರ್ಯಕ್ರಮ, ಶೌಚಾಲಯಗಳ ಬಳಕೆ ಮಾಹಿತಿ ನೀಡಲಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯತ ಕಾರ್ಯ ನಿರ್ವಾಹಕ ಅಧಿಕಾರಿ ಶ್ರೀಮತಿ ಪದ್ಮಜಾ ಪಾಟೀಲ, ಸಾಮಾಜಿಕ ಅರಣ್ಯ ಅಧಿಕಾರಿಗಳಾದ ಡಿ.ಎಫ್.ಒ ಅಶೋಕ ಪಾಟೀಲ, ಬೆಳಗಾವಿ ನಗರವಲಯದ ಶಿಕ್ಷಣಾಧಿಕಾರಿಗಳಾದ ಕೆ.ಡಿ ಬಡಿಗೇರ, ನಗರವಲಯದ ದೈಹಿಕ ಶಿಕ್ಷಣಾಧಿಕಾರಿಗಳಾದ ಲಗಮಣ್ಣಾ ನಾಯಿಕ ಹಾಗೂ ಜಿಲ್ಲಾ ಪಂಚಾಯತನ ಎಲ್ಲ ಅಧಿಕಾರಿಗಳು ಸೇರಿದಂತೆ ಇನ್ನಿತರರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

 

ಜಾಥಾಗೆ ಚಾಲನೆ :

ಇದಕ್ಕೂ ಮುಂಚೆ ನಗರ ಚನ್ನಮ್ಮ ವೃತ್ತದಲ್ಲಿ ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆ, ಬೆಳಗಾವಿ ಜಿಲ್ಲಾ ಪಂಚಾಯತ, ತಾಲ್ಲೂಕ ಪಂಚಾಯತ ಇವರುಗಳ ಸಹಯೋಗದಲ್ಲಿ ನಡೆದ ಸ್ವಚ್ಛಮೇವ ಜಯತೆ ಹಾಗೂ ಜಲಾಮೃತ ಜನ ಜಾಗೃತ ವಾಹನಕ್ಕೆ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾಗಳಾದ ರಾಜೇಂದ್ರ ಕೆ.ವಿಅವರು ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು ಜಿಲ್ಲೆಯ 500 ಗ್ರಾಮ ಪಂಚಾಯತಿಗಳಲ್ಲಿ ಪ್ರತಿ ಗ್ರಾಮ ಪಂಚಾಯತಿಯಲ್ಲಿ 500 ಸಸಿ ನೆಡುವ ಜನಾಂದೋಲನವನ್ನು ಹಮ್ಮಿಕೊಂಡು ಒಂದು ವಾರದ ಅವಧಿಯಲ್ಲಿ ಹಮ್ಮಿಕೊಳ್ಳಲಾಗುತ್ತಿದೆ ಎಂದು ಹೇಳಿದರು.

ಪ್ಲಾಸ್ಟಿಕ್ ಬಳಕೆ ಮಾಡದೆ ಇರುವ ಹಾಗೆ ಮಕ್ಕಳಲ್ಲಿ ಪ್ರೆರೇಪಣೆ ಮಾಡಬೇಕು ಜೋತೆಗೆ ಹಸರೀಕರಣದ ಬಗ್ಗೆ ಗಿಡಗಳನ್ನು ನೆಟ್ಟು ಅವುಗಳನ್ನು ಉಳಿಸಿಕೊಂಡು ಹೊಗುವ ಬಗ್ಗೆ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿ ನೀಡಿ ಪ್ರತಿ ಮಕ್ಕಳಲ್ಲಿಯು ನೀರು ಹಾಗೂ ಪರಿಸರದ ಬಗ್ಗೆ ಕಾಳಜಿವಹಿಸುವಂತೆ ಮಾಡಬೇಕು ಎಂದು ಹೇಳಿದರು.

ಸಸಿ ನೆಡುವ ಕಾರ್ಯಕ್ರಮ:

ಸಾಮಾಜಿಕ ಅರಣ್ಯ ವಿಭಾಗ, ಜಿಲ್ಲಾ ಪಂಚಾಯತ ಇವರುಗಳ ಸಹಯೋಗದಲ್ಲಿ ತಾಲೂಕು ಪಂಚಾಯತ ಆವರಣದಲ್ಲಿ ನಡೆದ ಪರಿಸರ ದಿನಾಚರಣೆ ಕಾರ್ಯಕ್ರಮದ ನಿಮಿತ್ಯ ಸಸಿ ನೆಡುವ ಮೂಲಕ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾಗಳಾದ ರಾಜೇಂದ್ರ ಕೆ.ವಿ ಅವರು ಚಾಲನೆ ನೀಡಿದರು.

ನಂತರ ಅವರು ಮಾತನಾಡಿ ಸಸಿಗಳನ್ನು ನೆಟ್ಟರೆ ಸಾಲದು ಅವುಗಳನ್ನು ವ್ಯವಸ್ಥ್ತಿತ ರೂಪದಲ್ಲಿ ಬೆಳೆಸುವದು ಕೂಡ ನಮ್ಮ ನಿಮ್ಮೆಲ್ಲರ ಕರ್ತವ್ಯ ಎಂದರು.

ಪ್ರತಿಯೊಂದು ಸಸಿಗಳು ಉತ್ತಮ ರೀತಿಯಲ್ಲಿ ತಮ್ಮ ಬೆಳವಣಿಗೆಯನ್ನು ಕಂಡುಕೊಳ್ಳಬೇಕಾದರೆ ಪ್ರತಿ ವ್ಯಕ್ತಿ ಹಾಗೂ ವಿದ್ಯಾರ್ಥಿಗಳಿಗೆ ಒಂದೊಂದು ಸಸಿಯ ಜವಾಬ್ಧಾರಿಯನ್ನು ವಹಿಸಬೇಕು ಎಂದರು.///

Read Belgaum News & Updates for What’s Happening in Around You @ in News Belgaum Kannada News Portal.