ಸಹ್ಯಾದ್ರಿ ಮಾರ್ಗದ ನಗರ ಬಸ್ಸಿನ ಚಾಲಕನನ್ನು ಹನುಮಾನ ನಗರ ಸರ್ಕಲನಲ್ಲಿ ಕಿಡಿಕೇಡಿಗಳು ಥಳಿಸಿದ್ದಾರೆ.

news belagavi

ಬೆಳಗಾವಿ: ಬುಧವಾರ ಸಂಜೆ ಕಿಡಿಗೇಡಿಗಳು ಸರಕಾರಿ ಸಿಬಿಟಿ ಬಸ್ ಚಾಲಕನನ್ನು ಹಿಗ್ಗಾಮುಗ್ಗಾ ಥಳಿಸಿದ್ದು ಎಪಿಎಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿಬಿಟಿ – ಸಹ್ಯಾದ್ರಿ ಮಾರ್ಗದ ನಗರ ಬಸ್ಸಿನ ಚಾಲಕನನ್ನು ಹನುಮಾನ ನಗರ ಸರ್ಕಲನಲ್ಲಿ ಕಿಡಿಕೇಡಿಗಳು ಥಳಿಸಿದ್ದಾರೆ.

ವಿಜಯ ನಗರದ ಮೂವರು ಕಿಡಿಗೇಡಿಗಳ ಪೈಕಿ ಇಬ್ಬರನ್ನು ಬಂಧಿಸಲಾಗಿದೆ. ಆ್ಯಕ್ಟಿವ್ ಮೊಪೆಡ್ ಮೇಲೆ ಮೂವರು ಕಿಡಿಗೇಡಿಗಳು ರಾಂಗ್ ಸೈಡನಲ್ಲಿ ಚಲಿಸುತ್ತಿದ್ದರು. ಸಚಿನ ಖಾಂಡೆ ಎಂಬ ಸರಕಾರಿ ಚಾಲಕನೇ ಹಲ್ಲೆಗೊಳಗಾಗಿದ್ದು, ಕೈ ಮುರಿತ ಉಂಡಾಗಿದೆ. ಬಸ್ಸಿನ ನಿರ್ವಾಹಕ(Conductor)
ಶಂಕರ ಲಮಾಣಿ ಎಂಬುವವರು ದೂರು ನೀಡಿದ್ದಾರೆ. ಎಫ್ ಐ ಆರ್ ದಾಖಲಾಗಿದೆ.

ಕೆಎಸ್ ಆರ್ ಟಿಸಿ ಯೂನಿಯನ್ ಆಕ್ರೋಶ ವ್ಯಕ್ತಪಡಿಸಿದೆ. ಸಾರಿಗೆ ಸಂಘಟನೆಯ ಪದಾಧಿಕಾರಿಗಳಾದ ಐ. ಎಸ್. ಮದವಾಲ ಮತ್ತು ರಾಜು ಪನ್ಯಾಗೋಳ, ಹಲ್ಲೇಕೋರರಿಗೆ ತೀವ್ರ ಶಿಕ್ಷೆ ನೀಡುವಂತೆ ಒತ್ತಾಯಿಸಿದ್ದಾರೆ.

Read Latest Kannada News Alerts on Belgaum News (Belagavi News) Follow us on Twitter - Facebook - Instagram - Pinterest & YouTube