ಸಂತ ಶ್ರೀ ಸೇವಾಲಾಲ್ ಜಯಂತಿ ಸೇವಾಲಾಲ್ ಮಹಾರಾಜರು ಮಹಾಪುರುಷರು – ಶಾಸಕ ಸಂಜಯ ಪಾಟೀಲ Sevalal Maharaj are great men – legislator Sanjay Patil

Sevalal Maharaj are great men - legislator Sanjay Patil

0 129

ಬೆಳಗಾವಿ:(news belgaum) ಕಷ್ಟದಲ್ಲಿರುವವರಿಗೆ ಹೆಗಲು ನೀಡುವವರೇ ನಿಜವಾದ ಮಹಾಪುರುಷರು. ಅಂತಹ ಮಹಾಪುರುಷರಲ್ಲಿ ಸೇವಾಲಾಲ್ ಮಹಾರಾಜರು ಕೂಡ ಒಬ್ಬರು ಎಂದು ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಶಾಸಕರಾದ ಸಂಜಯ ಪಾಟೀಲ ಅವರು ಹೇಳಿದರು.
ನಗರದ ಕುಮಾರ ಗಂಧರ್ವ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಗುರುವಾರ (ಫೆ.15) ಹಮ್ಮಿಕೊಂಡಿದ್ದ ಸಂತ ಶ್ರೀ ಸೇವಾಲಾಲ್ ಮಹಾರಾಜರ ಜಯಂತಿ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಸವಣ್ಣ, ಕನಕದಾಸರಂತಹ ಮಹಾನ ಶರಣರ ಸಾಲಿನಲ್ಲಿ ಶ್ರೀ ಸೇವಾಲಾಲ್ ಅವರು ಕೂಡ ನಿಲ್ಲುತ್ತಾರೆ. ಸೇವಾಲಾಲ್ ಅವರು ಪ್ರತಿಯೊಬ್ಬರಿಗೂ ಒಳ್ಳೆಯದನ್ನೇ ಬಯಸಿದವರು. ಸಮಾಜದಲ್ಲಿ ಆದರ್ಶ ಜೀವನ ನಡೆಸಿ ಅವರು ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದು ಹೇಳಿದರು.
News Belgaum-ಸಂತ ಶ್ರೀ ಸೇವಾಲಾಲ್ ಜಯಂತಿ ಸೇವಾಲಾಲ್ ಮಹಾರಾಜರು ಮಹಾಪುರುಷರು - ಶಾಸಕ ಸಂಜಯ ಪಾಟೀಲ Sevalal Maharaj are great men - legislator Sanjay Patil News Belgaum-ಸಂತ ಶ್ರೀ ಸೇವಾಲಾಲ್ ಜಯಂತಿ ಸೇವಾಲಾಲ್ ಮಹಾರಾಜರು ಮಹಾಪುರುಷರು - ಶಾಸಕ ಸಂಜಯ ಪಾಟೀಲ Sevalal Maharaj are great men - legislator Sanjay Patil 1ಮುಂಬರುವ ದಿನಮಾನಗಳಲ್ಲಿ ನೀರಿನ ಅಭಾವ ಉಂಟಾಗಿ, ನೀರನ್ನು ಮಾರಾಟ ಮಾಡುವ ಪರಿಸ್ಥಿತಿ ಬರಲಿದೆ. ಆದ್ದರಿಂದ ನೀರನ್ನು ಹಿತಮಿತವಾಗಿ ಬಳಸಬೇಕು ಎಂದು ಸೇವಾಲಾಲ ಮಹಾರಾಜರು 300 ವರ್ಷಗಳ ಹಿಂದೆಯೇ ಅವರ ಭಕ್ತರು ಹಾಗೂ ಜನರಿಗೆ ಹೇಳುತ್ತಿದ್ದರು. ಆ ಮಾತು ಇಂದು ನಿಜವಾಗಿದೆ ಎಂದು ತಿಳಿಸಿದರು.
ಲಮಾಣಿ ಸಮಾಜ ನೀರು ಇದ್ದ ಹಾಗೆ. ಸಮಾಜದ ಜನರು ಎಂತಹ ಸ್ಥಳ ಹಾಗೂ ಪರಿಸ್ಥಿತಿ ಇದ್ದರೂ ಸಹಜವಾಗಿ ಹೊಂದಿಕೊಂಡು ಬಿಡುತ್ತಾರೆ ಎಂದು ಸಂಜಯ ಪಾಟೀಲ ಹೇಳಿದರು.
ಕರ್ನಾಟಕ ರಾಜ್ಯ ಹಣಕಾಸು ನಿಗಮದ (ಕೆಎಸ್‍ಎಫ್‍ಸಿ) ಉಪ ಪ್ರಧಾನ ವ್ಯವಸ್ಥಾಪಕರಾದ ಪಿ.ಆರ್. ಜಾಧವ ಅವರು ಉಪನ್ಯಾಸ ನೀಡಿ, ರಾಜ್ಯ ಸರ್ಕಾರದಿಂದ ಇದೇ ಮೊದಲ ಬಾರಿಗೆ ಶ್ರೀ ಸೇವಾಲಾಲ್ ಅವರ ಜಯಂತಿಯನ್ನು ಆಚರಿಸುತ್ತಿರುವುದು ಸಂತಸದ ಸಂಗತಿ ಎಂದರು.
ಸರ್ಕಾರದಿಂದ ಸಮಾಜಕ್ಕೆ ನೀಡುತ್ತಿರುವ ವಿವಿಧ ಸೌಲಭ್ಯಗಳನ್ನು ಸಮಾಜದ ಜನರು ಸದುಪಯೋಗಿಸಿಕೊಂಡು ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು. ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ತಿಳಿಸಿದರು.
ಪ್ರತಿಯೊಬ್ಬರೂ ಶಿಕ್ಷಣವಂತರಾದಾಗ ಮಾತ್ರ ಸಮಾಜ ಏಳ್ಗೆ ಹೊಂದಲು ಸಾಧ್ಯ. ಆದ್ದರಿಂದ ಸಮಾಜದ ಜನರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ಕೊಡಿಸಬೇಕು ಎಂದು ಸಲಹೆ ನೀಡಿದರು.
ಚಿತ್ರದುರ್ಗದ ಸರ್ಧಾರ್ ಸೇವಾಲಾಲ್ ಸ್ವಾಮೀಜಿ ಅವರು ಸಾನಿಧ್ಯ ವಹಿಸಿ ಮಾತನಾಡಿ, ಸೇವಾಲಾಲ್ ಅವರು ಇಡೀ ಸಮಾಜಕ್ಕೆ ಒಳಿತನ್ನು ಬಯಸಿದವರು ಹಾಗೂ ಶಾಂತಿಯ ಸಂದೇಶವನ್ನು ಸಾರಿದವರು. ಆದ್ದರಿಂದ ಅಂತಹ ಮಹಾನ ಪುರುಷರನ್ನು ಒಂದೇ ಸಮುದಾಯಕ್ಕೆ ಸೀಮಿತಗೊಳಿಸಬಾರದು ಎಂದು ಹೇಳಿದರು.
ಸೇವಾಲಾಲ್ ಅವರನ್ನು ಇಂದಿನ ಯುವಜನಾಂಗಕ್ಕೆ ಪರಿಚಯಿಸುವ ಅಗತ್ಯತ ಇದೆ. ಸೇವಾಲಾಲ್ ಅವರ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು ಎಂದರು.
ತಹಶೀಲ್ದಾರ ಮಂಜುಳಾ ನಾಯಕ ಅವರು ಅಧ್ಯಕ್ಷತೆ ವಹಿಸಿದ್ದರು. ನೆಹರು ಯುವ ಕೇಂದ್ರದ ನಿವೃತ್ತ ಅಧಿಕಾರಿ ಎಸ್.ಯು. ಜಮಾದಾರ, ನಿವೃತ್ತ ಬ್ಯಾಂಕ್ ಅಧಿಕಾರಿ ಐ.ಬಿ. ಚೌಗಲೆ, ಸಮಾಜದ ಮುಖಂಡರಾದ ಶಂಕರ ಪಾಂಡಪ್ಪಾ ರಾಠೋಡ ಎಂ.ಟಿ. ರಾಠೋಡ, ಶೈಲಜಾ ಚವ್ಹಾಣ, ಆರ್.ಟಿ. ರಾಠೋಡ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ನಗರದ ಶರ್ಮನ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿಯರು ನಾಡಗೀತೆ ಹಾಡಿದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಶ್ರೀಶೈಲ ಕರಿಶಂಕರಿ ಅವರು ಸ್ವಾಗತಿಸಿದರು. ಅಶೋಕ ಚವ್ಹಾಣ ಅವರು ನಿರೂಪಿಸಿದರು.
ಶ್ರೀ ಸೇವಾಲಾಲ್ ಭಾವಚಿತ್ರದ ಮೆರವಣಿಗೆ:
ಕಾರ್ಯಕ್ರಮಕ್ಕೂ ಮುಂಚೆ ನಗರದ ಅಶೋಕ ವೃತ್ತದಿಂದ ಶ್ರೀ ಸೇವಾಲಾಲ್ ಮಹಾರಾಜರ ಭಾವಚಿತ್ರದ ಮೆರವಣಿಗೆ ಜರುಗಿತು. ಸಂಸದ ಸುರೇಶ ಅಂಗಡಿ ಅವರು ಸೇವಾಲಾಲ್ ಮಹಾರಾಜರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಮೆರವಣಿಗೆಗೆ ಚಾಲನೆ ನೀಡಿದರು.
ಅಶೋಕ ವೃತ್ತದಿಂದ ಆರಂಭವಾದ ಮೆರವಣಿಗೆ ಆರ್.ಟಿ.ಒ ಸರ್ಕಲ್, ಸಂಗೊಳ್ಳಿ ರಾಯಣ್ಣ ವೃತ್ತ, ಜಿಲ್ಲಾಧಿಕಾರಿಗಳ ಕಾರ್ಯಾಲಯ, ಚನ್ಮಮ್ಮ ವೃತ್ತ, ಜಿಲ್ಲಾಸ್ಪತ್ರೆ, ಅಂಬೇಡ್ಕರ್ ರಸ್ತೆ ಹಾಗೂ ಕೊಲ್ಲಾಪುರ ಸರ್ಕಲ್ ಮಾರ್ಗವಾಗಿ ಕುಮಾರ ಗಂಧರ್ವ ರಂಗಮಂದಿರ ತಲುಪಿತು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಮಚಂದ್ರನ್.ಆರ್, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕಿ ಸೈಯ್ಯದಾ ಆಫ್ರೀನ್‍ಬಾನು, ತಹಶೀಲ್ದಾರ ಮಂಜುಳಾ ನಾಯಕ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಶ್ರೀಶೈಲ ಕರಿಶಂಕರಿ, ಮಹಾನಗರ ಪಾಲಿಕೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಚಿತ್ರದುರ್ಗದ ಸರ್ಧಾರ್ ಸೇವಾಲಾಲ್ ಸ್ವಾಮೀಜಿ, ಸಮಾಜದ ಮುಖಂಡರು, ವಿವಿಧ ಕಲಾತಂಡಗಳು ಸೇರಿದಂತೆ ನೂರಾರು ಜನರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.Sevalal Maharaj are great men – legislator Sanjay Patil ಸಂತ ಶ್ರೀ ಸೇವಾಲಾಲ್ ಜಯಂತಿ ಸೇವಾಲಾಲ್ ಮಹಾರಾಜರು ಮಹಾಪುರುಷರು – ಶಾಸಕ ಸಂಜಯ ಪಾಟೀಲ Sevalal Maharaj are great men – legislator Sanjay Patil

ನಿಮ್ಮ ಅನಿಸಿಕೆ ಅಭಿಪ್ರಾಯ , ಸುದ್ದಿಗಳನ್ನು newsbelagavi@gmail.com ಗೆ ಕಳುಹಿಸಿ.

>>> News Belgaum – No.1 Kannada News Portal in Belagavi

ಜಾಹೀರಾತು , ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ : Mobile : 82175 55800