ಆತ್ಮವಿಶ್ವಾಸವಿದ್ದರೆ ಏನನ್ನಾದರೂ ಸಾಧಿಸಬಹುದು: ವೆಂಕಟೇಶ ಧೋತ್ರೆ

news belagavi

ಬೆಳಗಾವಿ 13- ಮುಖ್ಯವಾಗಿ ಮಕ್ಕಳಲ್ಲಿ ಆತ್ಮವಿಶ್ವಾಸವಿರಬೇಕು. ಆತ್ಮವಿಶ್ವಾಸವಿದ್ದರೆ ಏನನ್ನಾದರೂ ಸಾಧಿಸಬಹುದು. ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ಮೂಡಿಸುವ ತಳಪಾಯವನ್ನು ಶಿಕ್ಷಕರು, ಪಾಲಕರು ಮಾಡಬೇಕೆಂದು ಮೂಲತಃ ಬೆಳಗಾವಿಯವರೇ ಆದ ಹೈದರಾಬಾದ ಉಪಜಿಲ್ಲಾಧಿಕಾರಿಗಳಾದ ವೆಂಕಟೇಶ ಧೋತ್ರೆಯವರು ಇಂದಿಲ್ಲಿ ಹೇಳಿದರು.

ನಗರದ ಖಾಸಬಾಗ ತಾಳುಕರ ಚಿತ್ರಕಲಾ ಹಾಗೂ ದೇವಾಂಗ ಸಮಾಜ ಸೇವಾ ಪ್ರತಿಷ್ಠಾನದ 9ನೇ ಪ್ರತಿಭಾ ಪುರಸ್ಕಾರ ಸಮಾರಂಭವು ಸ್ಥಳೀಯ ಶ್ರೀ. ಸಾಲೇಶ್ವರ ದೇವಸ್ಥಾನದ ಸಭಾಮಂಟಪದಲ್ಲಿ ಇದೇ ದಿ. 12 ರಂದು ಜರುಗಿತು. ಈ ಸಮಾರಂಭದ ಮುಖ್ಯಅತಿಥಿಗಳಾಗಿ ಆಗಮಿಸಿದ್ದ ವೆಂಕಟೇಶ ಧೋತ್ರೆಯವರು ಮೇಲಿನಂತೆ ಅಭಿಪ್ರಾಯ ಪಟ್ಟರು.

ಪೆÇಲೀಸ್ ವ್ರತ್ತ ನಿರೀಕ್ಷಕರಾದ ಶ್ರೀ ವಿಜಯ. ಶಿನ್ನೂರರವರು ಸನ್ಮಾನ ಸ್ವೀಕರಿಸಿ ಮಾತನಾಡಿ ಸಾಧನೆಯ ಛಲ ಹೊಂದಿದನಿಗೆ ಅವಕಾಶಗಳು ಹುಡುಕಿಕೊಂಡು ಬರುತ್ತವೆ ಎಂದರು. ಮತ್ತೋರ್ವ ಅತಿಥಿ ಅಜಯ ಹಜೇರಿ ವಸತಿನಿಲಯ ಮೇಲ್ವಿಚಾರಕರು ಮಾತನಾಡಿ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನಗಳ ಬಗ್ಗೆ ತಿಳಿಹೇಳಿದರು.

ಸಮಾರಂಭದಲ್ಲಿ ಮುಖ್ಯಮಂತ್ರಿಗಳ ಚಿನ್ನದ ಪದಕ ವಿಜೇತರಾದ ಶ್ರೀ ವೀರಭದ್ರ ಕಾಮಕರ. ಪೆÇಲೀಸ್ ಉಪ ನಿರೀಕ್ಷಕರು ಧಾರವಾಡ ಇವರಿಗೆ ’ದೇವಾಂಗ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಫಿಲ್ಟರ್ ಮ್ಯಾನ ಎಂದೇ ಖ್ಯಾತರಾದ ಶ್ರೀ.ನಿರಂಜನ ಕಾರಗಿ, ರಾಷ್ಟ್ರೀಯ ಇನ್ ಸ್ಪೈರ್ ಅವಾರ್ಡ ವಿಜೇತ ಬೆಳಗಾವಿ ಯು.ಕೆ.ಎಲ್.ಎಸ್ ಪ್ರೌಢ ಶಾಲಾ ವಿದ್ಯಾರ್ಥಿ ಪ್ರಸನ್ನ ಉಮೇಶ ಶಿರಹಟ್ಟಿಯವರನ್ನು ದೇವಾಂಗ ಸಮಾಜದ ಅಧ್ಯಕ್ಷರಾದ ರವಿ ಲೋಲಿ ಹಾಗೂ ಸಮಾಜದ ಹಿರಿಯರನ್ನು ಗೌರವಿಸಲಾಯಿತು. ‘ಮಾಂಗಲ್ಯಂ ತಂತು ತಾನೇನ’ ಟಿ.ವ್ಹಿ. ಧಾರಾವಾಹಿಯ ಮುಖ್ಯ ಪಾತ್ರಧಾರಿ ಶ್ರಾವಣಿ ವಾಗೂಕರ ಉಪಸ್ಥಿತರಿದ್ದರು.

ಮತ್ತೋರ್ವ ಅತಿಥಿ ಉಪನ್ಯಾಸಕ ಪ್ರವೀಣ್ ದೇವಾಂಗ ರವರು ಎಸ್.ಎಸ್.ಎಲ್.ಸಿ.ಹಾಗೂ ಪಿ.ಯು.ಸಿ. ನಂತರದ ಉಪಯುಕ್ತ ಕೋರ್ಸಗಳು ಹಾಗೂ ಉದ್ಯೋಗಾವಕಾಶಗಳ ಬಗ್ಗೆ ಮಾಹಿತಿ ನೀಡಿದರು. ಅಧ್ಯಕ್ಷ ಸ್ಥಾನದಿಂದ ಪುಲಕೇಶಿ ತಾಳೂಕರ ಮಾತನಾಡಿದರು. ತಾಳೂಕರ ಪ್ರತಿಷ್ಠಾನದ ಲಕ್ಷ್ಮಣ ತಾಳೂಕರ, ಪಾಂಡುರಂಗ ಕಾನಡೆ, ಚಂದ್ರಶೇಖರ ತಾಳೂಕg,À ರಾಘವೇಂದ್ರ ತಾಳೂಕರ, ಅಮೃತ ತಾಳೂಕರ.

ಶ್ರೀನಿವಾಸ ತಾಳೂಕರ, ಪ್ರವಿಣ ಕಾಮಕರ, ವಿಶ್ವನಾಥ ತಾಳೂಕರ, ಸಂಜು ಹಜೇರಿ, ಅಮರ ಢವಳೆ, ಮಂಜುನಾಥ ಮಕಾಟೆ, ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ. ಕೃಷ್ಣರಾಜೇಂದ್ರ ತಾಳೂಕರ ಸರ್ವರನ್ನು ಸ್ವಾಗತಿಸಿದರು. ದೇವಾಂಗ ಸಮಾಜದವರು ನಿಡುವ ವಿದ್ಯಾರ್ಥಿವೇತನಗಳ ಕುರಿತು ಮಾಹಿತಿ ತಿಳಿಸಿದರು. ಚಂದ್ರಗುಪ್ತ. ತಾಳೂಕರ. ನಿರೂಪಿಸಿದರು. ಪ್ರತಿಷ್ಠಾನದ ಕಾರ್ಯದರ್ಶಿಗಳಾದ ಶ್ರೀ ಸುಭಾಷ್ ತಾಳೂಕರ ವಂದಿಸಿದರು.

Read Latest Kannada News Alerts on Belgaum News (Belagavi News) Follow us on Twitter - Facebook - Instagram - Pinterest & YouTube