ಪತ್ನಿಯನ್ನು ಯಮನಾಪುರ ಬ್ರಿಡ್ಜ್ ಕೆಳಗೆ ಕೊಚ್ಚಿ ಕೊಲೆ ಮಾಡಿದ್ದ. ಆರೋಪಿತನಿಗೆ ಮರಣದಂಡನೆ ವಿಧಿಸಿ ನ್ಯಾಯಾಲಯ ಆದೇಶ

NEWS BELAGAVI

ಬೆಳಗಾವಿ: ಪತ್ನಿಯನ್ನು ಸಾರ್ವಜನಿಕವಾಗಿ ಕೊಚ್ಚಿ ಕೊಲೆ ಮಾಡಿದ್ದ ಆರೋಪಿತನಿಗೆ ಮರಣದಂಡನೆ ವಿಧಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ. ನಾಗರಾಜ ಯಲ್ಲಪ್ಪ ನಾಯಕ ದಂಡನೆಗೊಳಗಾದ ಆರೋಪಿ. ಈತ ಹುಕ್ಕೇರಿ ತಾಲೂಕಿನ ಅಲದಾಳದವನಾಗಿದ್ದು,

ಬೆಳಗಾವಿ ಹಿಂಡಾಲ್ಕೊ ಕ್ವಾಟರ್ಸನಲ್ಲಿ ವಾಸವಾಗಿದ್ದ. 2016ರ ಮಾರ್ಚಿನಲ್ಲಿ ಕುಡಿಯಲು ಹಣ ಕೊಡದ ಪತ್ನಿಯನ್ನು ಯಮನಾಪುರ ಬ್ರಿಡ್ಜ್ ಕೆಳಗೆ ಕೊಚ್ಚಿ ಕೊಲೆ ಮಾಡಿದ್ದ. ಗೀತಾ ನಾಗರಾಜ ನಾಯಕ ಅಸುನೀಗಿದ್ದಳು. ಬೆಳಗಾವಿ 5ನೇ ಜಿಲ್ಲಾ ಅಧಿಕ ನ್ಯಾಯಾಲಯದ ನ್ಯಾಯಾಧೀಶೆ ಜಿ. ಪ್ರಭಾವತಿ ಗಲ್ಲು ಶಿಕ್ಷೆ ವಿಧಿಸಿದ್ದು, ಸರಕಾರಿ ಅಭಿಯೋಜಕ ಎಂ. ಎಲ್. ಕುಲಕರ್ಣಿ ವಾದ ಮಂಡಿಸಿದ್ದರು.

Read Latest Kannada News Alerts on Belgaum News (Belagavi News) Follow us on Twitter - Facebook - Instagram - Pinterest & YouTube