ಅಂಕಲಗಿ ಗ್ರಾಮದಲ್ಲಿ 109 ಜವಾನರಿಗೆ ಸತ್ಕರಿಸಿ ಗೌರವಿಸುವುದರ ಮೂಲಕ ಗಣರಾಜ್ಯೋತ್ಸವದನ್ನು ವಿನೂತವಾಗಿ ಆಚರಿಸಲಾಯಿತು.

The Republic Day was celebrated indefinitely by honoring the 109 Jawans in Anglagiri village.

ಬೆಳಗಾವಿ: (belgaum news)ಲಕ್ಷ್ಮೀ ತಾಯಿ ಪೌಂಡೇಶನ್ ವತಿಯಿಂದ ಬಡಾಲ ಅಂಕಲಗಿ ಗ್ರಾಮದಲ್ಲಿ 109 ಜವಾನರಿಗೆ ಸತ್ಕರಿಸಿ ಗೌರವಿಸುವುದರ ಮೂಲಕ ಗಣರಾಜ್ಯೋತ್ಸವದನ್ನು ವಿನೂತವಾಗಿ ಆಚರಿಸಲಾಯಿತು.
ಬಡಾಲಅಂಕಲಗಿ ಗ್ರಾಮದಲ್ಲಿ ವೀರಯೋಧ ಗಂಗಪ್ಪ ಭೀಮಪ್ಪ ಮರಕಟ್ಟಿ ಇವರ

ಪ್ರತಿಮೆಗೆ ಮಾಲಾರ್ಪಣೆ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಲಕ್ಷ್ಮೀ ತಾಯಿ ಪೌಂಡೇಶನ್ ವತಿಯಿಂದ 109 ಜನ ಜವಾನರಿಗೆ ಮತ್ತು ಅವರ ಕುಟುಂಬದ ಸದಸ್ಯರಿಗೆ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು. ಕರ್ನಲ್ ಅವರ ಶ್ರೀಮತಿ ಸವೀತಾ ಶಿವಾನಂದ ಸುತಗಟ್ಟಿ ಎಲ್ಲ ಜವಾನರಿಗೆ ಸತ್ಕರಿಸಿ ಮಾತನಾಡುತ್ತ, ಜವಾನರು ದೇಶದ ಗಡಿಯಲ್ಲಿ ಚಳಿ, ಬಿಸಿಲು ಎನ್ನದೆ ಅನೇಕ ಗಂಡಾಂತರಗಳನ್ನು ಎದುರಿಸಿ ದೇಶವನ್ನು ರಕ್ಷಣೆ ಮಾಡುತ್ತಾರೆ. ಗಡಿಯಲ್ಲಿ ಸೈನಿಕರು ಯಾವ ರೀತಿ ಇರುತ್ತಾರೆ ಸಮಸ್ಯೆಗಳನ್ನು ಎದುರಿಸುತ್ತಾರೆ ಎಂಬುದನ್ನು ಖುದ್ದಾಗಿ ನಾನು ನೋಡಿದ್ದು, ಜವಾನ ಸೇವೆಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ದೇಶದ ರಕ್ಷಣೆ ಮಾಡಿದ ಜವಾನರಿಗೆ ಗೌರವಿಸುವುದು, ಸತ್ಕರಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಇಂಥ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು ಎಂದು ಲಕ್ಷ್ಮೀ ತಾಯಿ ಪೌಂಡೇಶನ ಕಾರ್ಯವನ್ನು ಶ್ಲಾಘೀಸಿದರು.
ಬೆಳಗಾವಿ ತಾಲೂಕಾ ಪಂಚಾಯತಿ ಅಧ್ಯಕ್ಷ ಶಂಕರಗೌಡ ಪಾಟೀಲ, ಸುಬೇದಾರ ಪುಂಡಲೀಕ, ಸುಬೇದಾರ ಗಡಿಗೇಪ್ಪಗೋಳ, ಸುಬೇದಾರ ಅರ್ಜುನ ಸೇರಿದಂತೆ ಗ್ರಾಮದ ಹಿರಿಯರು ಉಪಸ್ಥಿತರಿದ್ದರು.

Read Belgaum News & Updates for What’s Happening in Around You @ in News Belgaum Kannada News Portal.