Ultimate magazine theme for WordPress.

ಫೆ.10ರಿಂದ ಎರಡು ದಿನ 5ನೇ ಸತೀಶ ಶುಗರ್ಸ್ ಅವಾರ್ಡ್ಸ್

5th Satish Shugers Awards from 10th to 11th

0 96

ಬೆಳಗಾವಿ:(news belgaum) ಸತೀಶ ಜಾರಕಿಹೊಳಿ ಫೌಂಡೇಶನ್ ಆಶ್ರಯದಲ್ಲಿ ಫೆ.10 ಮತ್ತು 11ರಂದು ಸರ್ದಾರ್ ಹೈಸ್ಕೂಲ್ ಮೈದಾನದಲ್ಲಿ ನಡೆಯಲಿರುವ  5ನೇ ಸತೀಶ ಶುಗರ್ಸ್ ಅವಾರ್ಡ್ಸ್ ಪ್ರತಿಭಾ ಪುರಸ್ಕಾರ ಸಾಂಸ್ಕೃತಿಕ ಹಬ್ಬದ ತಯಾರಿಯನ್ನು ಎಐಸಿಸಿ ಕಾರ್ಯದರ್ಶಿ, ಶಾಸಕ ಸತೀಶ ಜಾರಕಿಹೊಳಿ ಶುಕ್ರವಾರ ಸಂಜೆ ವೀಕ್ಷಿಸಿದರು.

News Belgaum-ಫೆ.10ರಿಂದ ಎರಡು ದಿನ 5ನೇ ಸತೀಶ ಶುಗರ್ಸ್ ಅವಾರ್ಡ್ಸ್ ಸಾಂಸ್ಕೃತಿಕ ಹಬ್ಬ ಸತೀಶ ಶುಗರ್ಸ್ ಅವಾರ್ಡ್ಸ್ ಪ್ರತಿಭಾ ಪುರಸ್ಕಾರ ಸಾಂಸ್ಕೃತಿಕ ಹಬ್ಬಕ್ಕಾಗಿ ಸರ್ದಾರ್ ಹೈಸ್ಕೂಲ್  ಮೈದಾನದಲ್ಲಿ ಮೈಸೂರು ಅರಮನೆ ಮಾದರಿಯಲ್ಲಿ ಭವ್ಯ ವೇದಿಕೆ ನಿರ್ಮಿಸಲಾಗಿದ್ದು,  ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಧ್ವನಿ ಮತ್ತು ಬೆಳಕಿಗೆ ವ್ಯವಸ್ಥೆ ಮಾಡಲಾಗಿದೆ. ಲೇಸರ್ ತಂತ್ರಜ್ಞಾನ ಮೂಲದ ಬೆಳಕಿನ ವ್ಯವಸ್ಥೆ ಕಲ್ಪಿಸಲಾಗಿದೆ. ಕಾರ್ಯಕ್ರಮ ತಯಾರಿಗೆ  ತೃಪ್ತಿ ವ್ಯಕ್ತಪಡಿಸಿದ ಶಾಸಕ ಸತೀಶ ಜಾರಕಿಹೊಳಿ ಅವರು, ಸಂಘಟಕರಿಗೆ ಅಗತ್ಯ ಸಲಹೆ, ಸೂಚನೆ ನೀಡಿದರು.

ನಿಗದಿತ ವೇಳಾ ಪಟ್ಟಿಯಂತೆ ಕಾರ್ಯಕ್ರಮ ನಡೆಯಬೇಕು. ಸಮಯ ಅಮೂಲ್ಯವಾದುದು. ಸಮಯದ ಜೊತೆಗೆ ಸಮಯಪ್ರಜ್ಞೆಯನ್ನೂ  ರೂಢಿಸಿಕೊಳ್ಳಬೇಕು. ಭದ್ರತೆ, ಬಂದೋಬಸ್ತ್ ಗಾಗಿ ಅಗತ್ಯ ಬಿದ್ದರೆ ಪೊಲೀಸರ ನೆರವು ಪಡೆಯಬೇಕು. ಕಾರ್ಯಕ್ರಮದ ವೇದಿಕೆ ಮತ್ತು ಮೈದಾನದಲ್ಲಿ ಸ್ವಚ್ಛತೆ ಕಾಯ್ದುಕೊಳ್ಳಲು ಆದ್ಯತೆ ನೀಡಬೇಕು. ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಯಲು ಏನು ಅಗತ್ಯವೋ ಅದರ ಬಗ್ಗೆ ಪೂರ್ವ ತಯಾರಿ ಇರಬೇಕು. ಮಹಿಳೆಯರು, ಮಕ್ಕಳು, ವಯಸ್ಸಾದವರು ಸೇರಿ ಎಲ್ಲರಿಗೂ ಅನುಕೂಲವಾಗುವಂತೆ ವ್ಯವಸ್ಥೆ ಇರಬೇಕು ಎಂದು ಶಾಸಕ ಸತೀಶ ಜಾರಕಿಹೊಳಿ ಸಂಘಟಕರಿಗೆ ಮಾರ್ಗದರ್ಶನ ನೀಡಿದರು.

 ಒಟ್ಟಾರೆ ಈಗ  ಫೆ.10ರಿಂದ ಎರಡು ದಿನಗಳ ಕಾಲ ನಡೆಯಲಿರುವ 5ನೇ ಸತೀಶ ಶುಗರ್ಸ ಸಾಂಸ್ಕೃತಿಕ ಹಬ್ಬಕ್ಕೆ ವೇದಿಕೆ ಸಿದ್ಧಗೊಂಡಿದೆ. “ಕ್ಯಾಚ್ ದೆಮ್ ಯಂಗ್”ಎಂಬ ಘೋಷ ವಾಕ್ಯದಡಿ ಸಾಂಸ್ಕೃತಿಕ ಲೋಕದ ಅನಾವರಣಕ್ಕೆ ಕ್ಷಣ ಗಣನೆ ಆರಂಭವಾಗಿದೆ.

 ಸತೀಶ ಜಾರಕಿಹೊಳಿ ಫೌಂಡೇಶನ್ ಪ್ರಧಾನ ಕಾರ್ಯದರ್ಶಿ ಮತ್ತು ಸಂಘಟಕ ರಿಯಾಜ್ ಚೌಗಲಾ,  ಮುಖಂಡರಾದ ಶಿವನಗೌಡ ಪಾಟೀಲ, ಮಹಾಂತೇಶ್ ಕೌಜಲಗಿ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಅರುಣ ಕಟಾಂಬಳೆ, ಮುನ್ನಾ ಬಾಗವಾನ್ ಮತ್ತಿತರರು ಇದ್ದರು.5th Satish Shugers Awards from 10th to 11th

|  (  Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

 

Leave A Reply

Your email address will not be published.