ಅಸಿಸ್ಟಂಟ್ ಕಮಿಷ್ನರಗಳ ಉದಾಸೀನ ಕಾರ್ಯವೈಖರಿ: AC Office ಮುಚ್ಚಬೇಕ್ರಿ ಎಂದು ಡಿಸಿ ಖೇದ

Assistant Operations of Assistant Commissioners: DC Office to Stop AC Office

ಬೆಳಗಾವಿ: (news belgaum)ಜಿಲ್ಲೆಯ ಉಪವಿಭಾಗದ ಅಸಿಸ್ಟಂಟ್ ಕಮಿಷ್ನರಗಳಿಂದ ತಮ್ಮ ಕೆಲಸ ಮತ್ತು ಜವಾಬ್ದಾರಿಗಳ ಮೇಲೆ ಗಮನವಿಲ್ಲ ಎಂದು ಜಿಲ್ಲಾಧಿಕಾರಿ ಎಸ್. ಜಿಯಾವುಲ್ಲಾ ಹರಿಹಾಯ್ದರು. ತಮ್ಮ ಮಾತೃ ಇಲಾಖೆ ಕಂದಾಯ ಕೆಲಸಗಳನ್ನು ಒಳಗೊಂಡು ಇತರ ಇಲಾಖೆಗಳ ಯಾವ ಜನಪರ ಕಲ್ಯಾಣ ಕೆಲಸಗಳ ಬಗ್ಗೆ ಉಪವಿಭಾಗಾಧಿಕಾರಿಗಳಿಗೆ ಕಾಳಜಿ ಇಲ್ಲದ ಬಗ್ಗೆ ಡಿಸಿ ಖೇದ ವ್ಯಕ್ತಪಡಿಸಿದರು. ಪ್ರತಿ ಪ್ರಶ್ನೆಗೂ ತಮ್ಮ ಕೈಕೆಳಗಿನ ತಾಲೂಕಾ ತಹಶೀಲ್ದಾರ ಅವರನ್ನು ಕೇಳುವಂತೆ ಚಿಕ್ಕೋಡಿ ಮತ್ತು ಬೈಲಹೊಂಗಲ ಅಸಿಸ್ಟೆಂಟ್ ಕಮಿಷ್ನರ್ ಗಳು ಸಭೆಯಲ್ಲಿ ಹೇಳಿ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದರಿಂದ ಡಿಸಿ ಎಸ್. ಜಿಯಾವುಲ್ಲಾ & ಎಡಿಸಿ ಡಾ. ಸುರೇಶ ಇಟ್ನಾಳ ಕೆಂಡಾಮಂಡಲರಾದರು.
ಅಸಿಸ್ಟೆಂಟ್ ಕಮಿಷ್ನರ್ ಗಳು ತಮ್ಮ ಉಪವಿಭಾಗ ಮತ್ತು ತಹಶೀಲ ಮೇಲೆ ನಿಯಂತ್ರಣ ಇಲ್ಲದಿದ್ದರೆ ಅಸಿಸ್ಟೆಂಟ್ ಕಮಿಷ್ನರ್ ಕಚೇರಿಗಳು ಯಾಕೆ ಇರಬೇಕು ಎಂದು ಡಿಸಿ ಎಸ್. ಜಿಯಾವುಲ್ಲಾ ಅಸಮಧಾನದಿಂದ ಪ್ರಶ್ನಿಸಿದರು. ರಾಜ್ಯದಲ್ಲಿ ಎಸಿ ಕಚೇರಿಗಳನ್ನು ಮುಚ್ಚಬೇಕು ಎಂದು ಅಂದು ಎದ್ದಿದ್ದ ಕೂಗು ಸಮಯೋಚಿತ ಎಂದು ಎಸಿಗಳ ಉದಾಸೀನ ಕಾರ್ಯವೈಖರಿ ಉಲ್ಲೇಖಿಸಿ ಡಿಸಿ ಜಿಯಾವುಲ್ಲಾ ಕಳವಳ ವ್ಯಕ್ತಪಡಿಸಿದರು.
ಅಸಿಸ್ಟೆಂಟ್ ಕಮಿಷ್ನರ್ ಗಳಾದ ವಿಜಯಕುಮಾರ ಹೊಣಕೇರಿ, ಗೀತಾ ಕೌಲಗಿ ಮತ್ತು ತಹಶೀಲ್ದಾರಗಳು ಸಭೆಯಲ್ಲಿ ಭಾಗವಹಿಸಿದ್ದರು.

ಜನಪರ ಅಕ್ರಮ ಸಕ್ರಮ ಸಭೆಗೆ ಬಾರದ ಶಾಸಕ ಸಂಜಯ ಪಾಟೀಲ

ಬೆಳಗಾವಿ: ಶಾಸಕರು ಅಧ್ಯಕ್ಷರಾಗಿರುವ ಅಕ್ರಮ ಸಕ್ರಮ ಯೋಜನೆ ಸಭೆಗೆ ಗ್ರಾಮೀಣ ಶಾಸಕ ಸಂಜಯ ಪಾಟೀಲ ಆಗಮಿಸದಿರುವುದು ಇಂದಿನ ಕಂದಾಯ ಮತ್ತು ಇತರ ಇಲಾಖೆಗಳ ಪ್ರಗತಿ ಪರಿಶೀಲನಾ ಡಿಸಿ ಸಭೆಯಲ್ಲಿ ಗಮನ ಸೆಳೆಯಿತು. ಬೆಳಗಾವಿ ತಹಶೀಲ್ದಾರ ಸದಸ್ಯ ಕಾರ್ಯದರ್ಶಿಯಾಗಿದ್ದು, ತಾವು ತಹಶೀಲ್ದಾರ ಆಗಿ ಬಂದಾಗಿಂದ ಈ ಸಭೆಯೇ ನಡೆದಿಲ್ಲ ಎಂದು ಬೆಳಗಾವಿ ತಹಶೀಲ್ದಾರ ಡಿಸಿಗೆ ಉತ್ತರಿಸಿದರು. ತಾವು ಶಾಸಕ ಸಂಜಯ ಪಾಟೀಲ ಅವರಿಗೆ ಸಭೆಗೆ ಆಗಮಿಸುವಂತೆ ಇಲ್ಲವೇ ದಿನಾಂಕ ಗೊತ್ತುಪಡಿಸುವಂತೆ ಎರಡು ಲಿಖಿತ ಪತ್ರ ಬರೆದಿರುವುದಾಗಿ ತಹಶೀಲ್ದಾರ ತಿಳಿಸಿದರು.
ಶಾಸಕರಿಂದ ಆಡಳಿತ ನಿಲ್ಲಬಾರದು, Officially ಪತ್ರ ಬರೆದು ಅವರ ಗಮನ ಸೆಳೆಯಿರಿ. ಶಾಸಕರು ಗಮನ ಹರಿಸದಿದ್ದರೆ ಆಡಳಿತ ತನ್ನಷ್ಟಕ್ಕೆ ಮುಂದೆ ಸಾಗುತ್ತದೆ ಎಂದು ಡಿಸಿ ಎಚ್ಚರಿಸಿದರು. ಶಾಸಕರು ಅಧ್ಯಕ್ಷರಾಗಿದ್ದು, ಜವಾಬ್ದಾರಿಯಿಂದ ಜನರ ಕೆಲಸ ನಿಲ್ಲದಂತೆ ಮೀಟಿಂಗ್ ಮಾಡಿ ಇತ್ಯರ್ಥಪಡಿಸಬೇಕೆಂದು ಡಿಸಿ ಎಸ್. ಜಿಯಾವುಲ್ಲಾ ತಿಳಿಸಿದರು.

| Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

Read Belgaum News & Updates for What’s Happening in Around You @ in News Belgaum Kannada News Portal.