ಭಂಟರ ಸಂಘದ ವತಿಯಿಂದ ಮಹಿಳೆಯರಿಗಾಗಿ ಪಾಕ ಸ್ಪರ್ಧೆ

Cuisine Competition for Women by Bhantar Sangha

ಬೆಳಗಾವಿ- (news belgaum)ಭಾನುವಾರ 04-02-2018 ರಂದು ಹೊಟೇಲ್ ಕೀರ್ತಿ ಸಭಾಂಗಣದಲ್ಲಿ ಸಂಘದ 34 ನೇ ವಾರ್ಷಿಕೋತ್ಸವದ ಅಂಗವಾಗಿ ಮಹಿಳೆಯರಿಂದ ಪಾಕ್ ಸ್ಪರ್ಧೆ ಏರ್ಪಡಿಸಲಾಗಿತ್ತು. ಸುಮಾರು 100 ಕ್ಕೆ ಹೆಚ್ಚು ಸ್ಪರ್ಧಾಳುಗಳು ಸಸ್ಯಹಾರಿ ಮತ್ತು ಮಾಂಸಹಾರಿ ಖಾದ್ಯ ಪದಾರ್ಥಗಳನ್ನು ಬಹು ಆಕರ್ಷಕವಾಗಿ ಸಾದರಪಡಿಸಿದರು.
ಸಮಾರಂಭದ ಉದ್ಘಾಟನೆಯನ್ನು ಹಿರಿಯ ದಿವಾಣಿ ನ್ಯಾಯಾಧೀಶರು ಹಾಗೂ ಬೆಳಗಾವಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಕಿರಣ ಕಿಣಿ ನೆರವೇರಿಸಿ ಮಾತನಾಡುತ್ತ ಭಂಟರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರಾಗಿದ್ದು, ಅವರು ದಕ್ಷಿಣ ಕನ್ನಡದ ಸಮುದಾಯದವರು ಯಾವ ಜಿಲ್ಲೆಗೆ ಹೋದರು ಕೂಡ ತಮ್ಮ ಛಾಪನ್ನು ಮೂಡಿಸುತ್ತಾರೆ. ಅವರ ಪರಿವಾರದಲ್ಲಿ ಬೆಳಗಾವಿ ಅಷ್ಟೇ ಅಲ್ಲ ಮುಂಬೈಯಿ, ದುಬೈ, ರಾಜ್ಯ, ರಾಷ್ಟ್ರ ಹಾಗೂ ಹೊರ ರಾಷ್ಟ್ರಗಳಲ್ಲಿ ಭಂಟರು ತಮ್ಮ ಹೊಟೇಲ್ ಉದ್ಯಮದಲ್ಲಿ ಸಾಕಷ್ಟು ಹೆಸರು ವಾಸಿಯಾಗಿದ್ದಾರೆ. ಅವರ ಮೂಲ ಸಂಸ್ಕøತಿ ಕೋಲ, ಕಂಬಳ, ಭೂತಾರಾಧ್ಯ, ಕಟ್ಟುಕಟ್ಟಳೆ ದೇವಸ್ಥಾನಗಳ ಪುನರುಜ್ಜೀವನ ಇವುಗಳನ್ನು ಮಾಡುತ್ತಾ ಬಂದಿದ್ದಾರೆ. ಅವರು ಯಾವ ಊರಿನಲ್ಲಿ ಇದ್ದರೂ ತಮ್ಮ ಒಂದು ಹೊಟೇಲ್ ಉಧ್ಯಮದಲ್ಲಿ ಮುಂಚೂಣಿಯಲ್ಲಿರುತ್ತಾರೆ. ಈ ಸಂದರ್ಭದಲ್ಲಿ ಪಾಕ ಸ್ಪರ್ಧೆ ತೀರ್ಪುಗಾರರಾಗಿ ಡಾ|| ರಾಜು ನಾಯ್ಕ ಉಪನ್ಯಾಸಕರು ಯು.ಎಸ್.ಎಂ. ವೈಧ್ಯಕೀಯ ಮಹಾವಿದ್ಯಾಲಯ ಬೆಳಗಾವಿ, ರವೀಂದ್ರ ತೋಟಿಗೇರ ನ್ಯಾಯವಾದಿ ಹಾಗೂ ಅಲಾಯನ್ಸ್ ಕ್ಲಬ್ ಅಧ್ಯಕ್ಷರು ಹಾಗೂ ಗಡಿ ಚಿಂತಕರು, ಪ್ರೊ.ಎಂ.ಎ.ಕದಮ ಜೆ.ಎಸ್.ಎಸ್.ಕಾಲೇಜಿನ ನಿವೃತ್ತ ಉಪನ್ಯಾಸಕರು ತೀರ್ಪುಗಾರರಾಗಿ ಹಾಜರಿದ್ದರು.
ಈ ಸಂದರ್ಭದಲ್ಲಿ ನೂರಕ್ಕೂ ಹೆಚ್ಚು ಪಾಕ್ ಸ್ಪರ್ಧಾರ್ಥಿಗಳು ತಮ್ಮ ತಮ್ಮ ಖಾದ್ಯ ಪದಾರ್ಥಗಳನ್ನು ಪ್ರದರ್ಶಿಸಿದರು.
ಪ್ರಾರಂಭದಲ್ಲಿ ಕರ್ನಾಟಕ ಸರ್ಕಾರದಡಿಯಲ್ಲಿ ಬರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರು ಹಾಗೂ ಬೆಳಗಾವಿ ಭಂಟರ ಸಂಘದ ಅಧ್ಯಕ್ಷರಾದ ಕೆ.ರತ್ನಾಕರ ಶೆಟ್ಟಿ ಅವರು ಪ್ರಮುಖ ಅತಿಥಿಗಳನ್ನು ಪುಷ್ಪ ಗುಚ್ಚ ನೀಡಿ ಸ್ವಾಗತಿಸಿದರು ಹಾಗೂ ಸಂಘದ 34 ವರ್ಷಗಳ ಈ ಪರಂಪರೆಯನ್ನು ಉಳಿಸಿಕೊಂಡು ಬಂದಿದೆ ಎಂದು ಹೇಳಿದರು. ಸ್ವಾಗತ ಸಮಿತಿ ಅಧ್ಯಕ್ಷ ಹಾಗೂ ನ್ಯಾಯವಾದಿ ದಿನಕರ ಶೆಟ್ಟಿಯವರು ಅತಿಥಿಗಳ ಪರಿಚಯ ಮತ್ತು ವಂದನಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ಕಾರ್ಯದರ್ಶಿ ವೀರೇಂದ್ರ ಶೆಟ್ಟಿ ಪಾಕ ಸ್ಪರ್ಧೆ ಅಧ್ಯಕ್ಷ ಸಂತೋಷ ಶೆಟ್ಟಿ ಹಾಗೂ ಶರತ್ ಶೆಟ್ಟಿ, ಉಪಾಧ್ಯಕ್ಷರುಗಳಾದ ಹರ್ಷಾ ಶೆಟ್ಟಿ ಮತ್ತು ರಾಜು ಶೆಟ್ಟಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಪ್ರಥಮ, ದ್ವಿತೀಯ, ತೃತೀಯ ಬಹುಮಾನಗಳನ್ನು ಬಹಳಷ್ಟು ಮಹಿಳೆಯರು ಪಡೆದರು. ನಂತರ 6 ರಿಂದ 10 ನೇ ತರಗತಿವರೆಗೆ “ನನ್ನ ಜೀವನದ ಗುರಿ,” 10 ರಿಂದ ಪಿ.ಯು.ಸಿ. “ಪರಿಸರ ಸಂರಕ್ಷಣೆ”, ಪದವಿಧರರಿಗೆ, ಸರಕು ಹಾಗೂ ಸಾಗಾಟ ತೆರಿಗೆ ಪರಿಣಾಮಗಳು ಅನಾಣ್ಯೀಕರಣದ ಪರಿಣಾಮಗಳ ಎಂಬ ವಿಷಯದಲ್ಲಿ ಭಾಷಣ ಸ್ಪರ್ಧೆ ಏರ್ಪಡಿಸಲಾಯಿತು.
ಕಿರಣ ಕಿಣಿ, ಶ್ರೀಮತಿ ಕಿಣಿ, ಡಾ|| ರಾಜು ನಾಯ್ಕ, ರಕ್ಷಾ ನಾಯ್ಕ, ರವೀಂದ್ರ ತೋಟಿಗೇರ ಪುನಂ ತೋಟಿಗೇರ, ಪ್ರೊ.ಎಂ.ಎ.ಕದಮ, ವೀರೇಂದ್ರ ಶೆಟ್ಟಿ ಸಂತೋಷ ಶೆಟ್ಟಿ ಹಾಗೂ ಶರತ್ ಶೆಟ್ಟಿ ರವರನ್ನು ಕಾಣಬಹುದು.

| Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

Read Belgaum News & Updates for What’s Happening in Around You @ in News Belgaum Kannada News Portal.