ಸಂಕೇಶ್ವರ-ಗೋಕಾಕ-ಕುಡಚಿ ಹಾಗೂ ತೆಲಸಂಗದಲ್ಲಿ ಕಡಲೆ ಖರೀದಿ ಕೇಂದ್ರ ಸ್ಥಾಪನೆ

Establishment of Chickpeas Purchase Center at Sankeshwar-Gokak-Kudachi and

ಬೆಳಗಾವಿ:(news belgaum) ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಫೆಬ್ರವರಿ 7 ರಂದು ನಡೆದ ಜಿಲ್ಲಾ ಮಟ್ಟದ ಟಾಸ್ಕಪೋರ್ಸ ಸಮಿತಿ (ಬೆಂಬಲ ಬೆಲೆ) ಸಭೆಯಲ್ಲಿ ತಿರ್ಮಾನದಂತೆ ಸರ್ಕಾರದ ವತಿಯಿಂದ ಜಿಲ್ಲೆಯ ಸಂಕೇಶ್ವರ, ಗೋಕಾಕ, ಕುಡಚಿ ಹಾಗೂ ತೆಲಸಂಗಳಗಗಳಲ್ಲಿ ಕಡಲೆ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ.
ಈ ಖರೀದಿ ಕೇಂದ್ರಗಳಲ್ಲಿ ಎಫ.ಎ.ಕ್ಯೂ ಗುಣಮಟ್ಟದ ಕಡಲೆಯನ್ನು ಕ್ವಿಂಟಾಲ್‍ಗೆ 4,400 ರೂ ದರದಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಮಹಾಮಂಡಳಿಯವರು ಖರೀದಿಸುವರು. ಪ್ರತಿ ರೈತರಿಂದ ಗರಿಷ್ಠ ಪ್ರಮಾಣ 10 ಕ್ವಿಂಟಾಲ್ ಕಡಲೆ ಉತ್ಪನ್ನ ಖರೀದಿಯನ್ನು ನಿಗದಿಪಡಿಸಿದೆ.
ಈ ಖರೀದಿ ಕೇಂದ್ರಗಳಲ್ಲಿ ಕಡಲೆಯನ್ನು ಮಾರಾಟ ಮಾಡಲು ಇಚ್ಛಿಸುವ ರೈತರು ತಮ್ಮ ಗುರುತಿನ ಚೀಟಿ, ಪಹಣೆ ಪ್ರತಿ, ಗ್ರಾಮ ಲೆಕ್ಕಾಧಿಕಾರಿಗಳಿಂದ ಕಡಲೆ ಬೆಳೆದ ಬಗ್ಗೆ ಪ್ರಮಾಣ ಪತ್ರ ಮತ್ತು ಐ.ಎಫ್. ಎಸ್.ಸಿ. ಕೋಡ್ ಇರುವ ಮತ್ತು ಆಧಾರ ಕಾರ್ಡ್ ಸಂಖ್ಯೆ ಜೋಡಣೆಕೊಂಡ ಬ್ಯಾಂಕ್ ಖಾತೆ ಸಂಖ್ಯೆಯನ್ನು ತಂದು ಖರೀದಿ ಕೇಂದ್ರಗಳಲ್ಲಿ ನೋಂದಣಿ ಮಾಡಿಕೊಳ್ಳಬೇಕು.
ರೈತರು ಕಡಲೆಯನ್ನು 50 ಕೆ.ಜಿ. ಚೀಲಗಳಲ್ಲಿ ಭರ್ತಿ ಮಾಡಿ ಖರೀದಿ ಕೇಂದ್ರಗಳಿಗೆ ತರಬೇಕು. ಕಡಲೆ ಖರೀದಿಸಿದ ಮೊತ್ತವನ್ನು ಆರ್.ಟಿ.ಜಿ.ಎಸ್. ಮುಖಾಂತರ ರೈತರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾವುದು. ರೈತರನ್ನು ಹೊರತುಪಡಿಸಿ ಮಧ್ಯವರ್ತಿಗಳು ಮತ್ತು ವರ್ತಕರು ಖರೀದಿ ಕೇಂದ್ರದಲ್ಲಿ ಕಡಲೆ ಮಾರಾಡಕ್ಕೆ ತಂದದ್ದು ಕಂಡುಬಂದಲ್ಲಿ ಅಂಥವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ : ಅಥಣಿ 9449864471 ಹಾಗೂ ಗೋಕಾಕ ಮತ್ತು ಬೆಳಗಾವಿ 9449864445 ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿಯ ಶಾಖಾ ವ್ಯವಸ್ಥಾಪಕರ ಮೊಬೈಲ್ ಸಂಖ್ಯೆಗೆ ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. Establishment of Chickpeas Purchase Center at Sankeshwar-Gokak-Kudachi and

|  (  Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

 

Read Belgaum News & Updates for What’s Happening in Around You @ in News Belgaum Kannada News Portal.