ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಸೀತವ್ವ ಜೋಡಟ್ಟಿಗೆ ಸನ್ಮಾನ

Featuring the Padma Shri award for the Padma Shri award

“ನಾನು ದೇವದಾಸಿ; ದೇವದಾಸಿ ಪದ್ಧತಿ ನಿರ್ಮೂಲನೆ ನನ್ನ ಗುರಿ”


ಬೆಳಗಾವಿ:(news belgaum) “ನಾನು ದೇವದಾಸಿ. ಆದರೆ ಇನ್ನೊಂದು ಹೆಣ್ಣಿಗೆ ಅಂತಹ ಕಪ್ಪುಚುಕ್ಕೆ ಅಂಟಬಾರದು”-
2017-18ನೇ ಸಾಲಿನ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿರುವ ಸೀತವ್ವ ಜೋಡಟ್ಟಿ ಗದ್ಗದಿತ ಧ್ವನಿಯಲ್ಲಿ ಹೇಳಿದಾಗ ಚಪ್ಪಾಳೆಗಳ ಕರತಾಡನ.
ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಬುಧವಾರ(ಜ.31) ನಡೆದ ಮಾತೃಪೂರ್ಣ ಯೋಜನೆ ಕುರಿತ ಸಮಾಲೋಚನಾ ಕಾರ್ಯಾಗಾರ ಹಾಗೂ ಮಾಧ್ಯಮದವರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಸೀತವ್ವ ಜೋಡಟ್ಟಿ ತಮ್ಮ ಅನುಭವ ಹಂಚಿಕೊಂಡರು.
ಬೆಳಗಾವಿ ಜಿಲ್ಲೆಯ ಘಟಪ್ರಭಾದಲ್ಲಿರುವ ಮಹಿಳಾ ಅಭಿವೃದ್ಧಿ ಮತ್ತು ಸಂರಕ್ಷಣಾ ಸಂಸ್ಥೆ(ಮಾಸ್)ಯ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಕೆಲಸ ಮಾಡುತ್ತಿರುವ ಸೀತವ್ವ ಜೋಡಟ್ಟಿ ಅವರನ್ನು ಭಾರತ ಸರ್ಕಾರವು 2017-18ನೇ ಸಾಲಿನ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಿರುವ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಮಚಂದ್ರನ್ ಆರ್. ಅವರು, ನಮ್ಮ-ನಿಮ್ಮಂತೆ ಸಾಮಾನ್ಯವಾಗಿ ಕಾಣುವ ಸೀತವ್ವ ಜೋಡಟ್ಟಿ ಅವರ ಸಮಾಜಮುಖಿ ಕೆಲಸವನ್ನು ಗುರುತಿಸಿ ಭಾರತ ಸರ್ಕಾರವು ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲಿ ಒಂದಾಗಿರುವ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಿದೆ ಎಂದರು.
ಇದು ಇಡೀ ಬೆಳಗಾವಿ ಜಿಲ್ಲೆಗೆ ಅದರಲ್ಲೂ ಮಹಿಳೆಯರಿಗೆ ಸಂದ ಗೌರವ ಎಂದು ಬಣ್ಣಿಸಿದರು.

“ನಾನು ದೇವದಾಸಿ. ಆದರೆ ಇನ್ನೊಂದು ಹೆಣ್ಣಿಗೆ ಅಂತಹ ಕಪ್ಪುಚುಕ್ಕೆ ಅಂಟಬಾರದು”-

ಜವಾಬ್ದಾರಿ ಹೆಚ್ಚಿಸಿದೆ:
ದೇವದಾಸಿ ಪದ್ಧತಿ ನಿರ್ಮೂಲನೆ; ದೇವದಾಸಿಯರ ಪುನರ್ವಸತಿ; ದೇವದಾಸಿಯರ ಮಕ್ಕಳಿಗೆ ಆರೋಗ್ಯ ಮತ್ತು ಶಿಕ್ಷಣ ಒದಗಿಸುವುದು; ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ; ಮಾನವ ಸಾಗಾಣಿಕೆ ತಡೆಗಟ್ಟುವ ನಿಟ್ಟಿನಲ್ಲಿ 1997ರಿಂದಲೂ ಮಾಸ್ ಸಂಸ್ಥೆ ಕೆಲಸ ಮಾಡುತ್ತಿದೆ.
ಈ ಕೆಲಸವನ್ನು ಗುರುತಿಸಿ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಿರುವುದರಿಂದ ಸಂಸ್ಥೆಯ ಹಾಗೂ ನನ್ನ ಜವಾಬ್ದಾರಿ ಹೆಚ್ಚಾಗಿದೆ ಎಂದು ಸೀತವ್ವ ಜೋಡಟ್ಟಿ ಹೇಳಿದರು.
ಸಂಸ್ಥೆಯಲ್ಲಿ 4800 ದೇವದಾಸಿ ಮಹಿಳೆಯರು ಸದಸ್ಯರಾಗಿದ್ದು, ಸಂಸ್ಥೆಯ ಸಿಬ್ಬಂದಿ ಕೂಡ ದೇವದಾಸಿ ಮಹಿಳೆಯರೇ ಆಗಿದ್ದಾರೆ. ನಾವೆಲ್ಲರೂ ಸೇರಿಕೊಂಡು ಈ ಅನಿಷ್ಠ ಪದ್ಧತಿ ವಿರುದ್ಧ ಧ್ವನಿ ಎತ್ತಿದ್ದೇವೆ.
ಸಾರ್ವಜನಿಕರು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸಾಕಷ್ಟು ಸಹಕಾರ ನೀಡಿದ್ದಾರೆ ಎಂದು ಸೀತವ್ವ ಸ್ಮರಿಸಿದರು.

3.75 ಲಕ್ಷ ಅನುದಾನ:

ಇದೇ ಸಂದರ್ಭದಲ್ಲಿ ಜಿಪಂ ಸಿಇಓ ರಾಮಚಂದ್ರನ್ ಆರ್. ಅವರು, ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿರುವ ಸೀತವ್ವ ಜೋಡಟ್ಟಿ ಅವರನ್ನು ಜಿಲ್ಲಾ ಪಂಚಾಯ್ತಿ ಪರವಾಗಿ ಸನ್ಮಾನಿಸಿ, ಅಭಿನಂದನೆ ಸಲ್ಲಿಸಿದರು.
ಮಾನವ ಸಾಗಾಣಿಕೆ ತಡೆಗಟ್ಟುವ ಕಾರ್ಯಕ್ರಮದಡಿಯಲ್ಲಿ ಬೆಳಗಾವಿ ಜಿಲ್ಲೆಯ ಘಟಪ್ರಭಾದಲ್ಲಿರುವ ಮಹಿಳಾ ಅಭಿವೃದ್ಧಿ ಮತ್ತು ಸಂರಕ್ಷಣಾ ಸಂಸ್ಥೆ(ಮಾಸ್)ಗೆ ಜಿಲ್ಲಾ ಪಂಚಾಯ್ತಿ ವತಿಯಿಂದ 3.75 ಲಕ್ಷ ರೂಪಾಯಿ ಅನುದಾನದ ಚೆಕ್ ಅನ್ನು ರಾಮಚಂದ್ರನ್ ನೀಡಿದರು.
ಲೈಂಗಿಕ ವೃತ್ತಿನಿರತ ಮಹಿಳೆಯರು, ದೇವದಾಸಿಯರು ಸಂಘಟನೆಗೊಂಡು ರೂಪಿಸಿಗೊಂಡಿರುವ ಒಕ್ಕೂಟಗಳ ಮೂಲಕ ಫಲಾನುಭವಿಗಳಿಗೆ ಸೂಕ್ತ ತರಬೇತಿ ನೀಡಲು ಹಾಗೂ ಸದರಿ ಸಮುದಾಯದ ಅಭಿವೃದ್ಧಿಗೆ ಪೂಕರವಾದ ಕಾರ್ಯಕ್ರಮ ಅನುಷ್ಠಾನಕ್ಕಾಗಿ ಈ ಅನುದಾನ ನೀಡಲಾಗಿದೆ ಎಂದು ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಎಂ.ಮುನಿರಾಜು, ಜಿಲ್ಲಾ ಆರ್‍ಸಿಎಚ್ ಅಧಿಕಾರಿ ಡಾ.ಐ.ಪಿ.ಗಡಾದ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಗುರುನಾಥ ಕಡಬೂರ, ಮಾಸ್ ಸಂಸ್ಥೆಯ ಅಧ್ಯಕ್ಷೆ ರೇಖಾ ಭಂಡಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಜಿಲ್ಲೆಯ ಅಂಗನವಾಡಿ ಮೇಲ್ವಿಚಾರಕಿಯರು, ಆಶಾ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.

ಸೀತವ್ವ ಜೋಡಟ್ಟಿ ಅವರ ಪರಿಚಯ:

ಹೆಸರು : ಶ್ರೀಮತಿ ಸೀತವ್ವ ಜೋಡಟ್ಟಿ
ಜನ್ಮ ದಿನಾಂಕ : ಮಾರ್ಚ 27-1973
ಜನ್ಮ ಸ್ಥಳ : ಕಬ್ಬೂರು, ತಾ|| ಚಿಕ್ಕೋಡಿ ಜಿ|| ಬೆಳಗಾವಿ
ವಿದ್ಯಾರ್ಹತೆ : 7ನೇ ತರಗತಿ
ಸದ್ಯ ಕಾರ್ಯನಿರ್ವಹಿಸುತ್ತಿರುವ ಹುದ್ದೆ: (ಒಂSS) ಮಹಿಳಾ ಅಭಿವೃದ್ಧಿ ಮತ್ತು ಸಂರಕ್ಷಣಾ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರು

ಸೇವಾನುಭವ:

1991-96ರ ಕಬ್ಬೂರ ಗ್ರಾಮದಲ್ಲಿ ಸ್ವ-ಸಹಾಯಕ ಸಂಘದ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಾ ಸಂಘದ ಮುಖಾಂತರ ತಮ್ಮ ಗ್ರಾಮದ ದಲಿತ ಕಿಶೋರಿಯರು, ದೇವದಾಸಿ ಪದ್ದತಿಗೆ ಬಲಿಯಾದಂತೆ ಸಮುದಾಯದಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುತ್ತಾರೆ.
ಇತರೆ ಸ್ವ-ಸಹಾಯ ಸಂಘದ ಸದಸ್ಯರಿಗೆ ತರಬೇತಿ ನೀಡಲು ಸಂಪನ್ಮೂಲ ವ್ಯಕ್ತಿಗಳಾಗಿ ಕಾರ್ಯನಿರ್ವಹಿಸಿರುತ್ತಾರೆ.
1996-2000 ಕರ್ನಾಟಕ ರಾಜ್ಯದ ಮಹಿಳಾ ಅಭಿವೃದ್ಧಿ ನಿಗಮದ ಸ್ವಯಂ ಸೇವಕಿಯಾಗಿ ಕಾರ್ಯನಿರ್ವಹಿಸಿರುತ್ತಾರೆ. ಈ ಅವಧಿಯಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಜಾಗೃತಿ ಶಿಬಿರಗಳ ಮುಖಾಂತರ ದೇವದಾಸಿ ಪದ್ಧತಿ ನಿರ್ಮೂಲನೆಗೆ ಶ್ರಮಿಸಿರುತ್ತಾರೆ. ದೇವದಾಸಿ ಮತ್ತು ದಲಿತ ಹೆಣ್ಣು ಮಕ್ಕಳಿಗಾಗಿ ಸ್ವ-ಸಹಾಯ ಸಂಘದ ಸದಸ್ಯರಿಗೆ ಲೈಗಿಂಕ ಕಾಯಿಲೆ ಹರಡುವುದನ್ನು ತಡೆಗಟ್ಟುವ ಕುರಿತು ಜಾಗೃತಿ ಶಿಬಿರ ಏರ್ಪಡಿಸಿರುತ್ತಾರೆ.
2000-2001ರಲ್ಲಿ ಮಹಿಳಾ ಅಭಿವೃದ್ಧಿ ಮತ್ತು ಸಂರಕ್ಷಣೆ ಸಂಸ್ಥೆಯ (ಒಂSS) ಸದಸ್ಯ ಕಾರ್ಯದರ್ಶಿಗಳಾಗಿ ಸೇವೆ ಸಲ್ಲಿಸಿರುತ್ತಾರೆ.
2001-2004 ಹುಕ್ಕೇರಿ ಕ್ಷೇತ್ರಕ್ಕೆ ಪ್ರೇರಕರಾಗಿ ಕೆಲಸ. ಈ ಅವಧಿಯಲ್ಲಿ ದೇವದಾಸಿ ಪದ್ದತಿ ನಿರ್ಮೂಲನೆ ಹಾಗೂ ಬಾಲ್ಯವಿವಾಹ ತಡೆಗಟ್ಟಲು ಶ್ರಮಿಸಿರುತ್ತಾರೆ.
2004-2008 ರಲ್ಲಿ ಚಿಕ್ಕೋಡಿ ಕ್ಷೇತ್ರಕ್ಕೆ ಪ್ರೇರಕರಾಗಿ ಕೆಲಸ (ಊIಗಿ ಂiಜs) ತಡೆಗಟ್ಟುವ ಕುರಿತು ಜಾಗೃತಿ ಶಿಬಿರಗಳನ್ನು ಹಮ್ಮಿಕೊಂಡಿರುತ್ತಾರೆ.

ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ, ಬೆಂಗಳೂರು ಇಲ್ಲಿ ದೇವದಾಸಿ ಪದ್ದತಿ ನಿರ್ಮೂಲನೆ ಕುರಿತು ರಾಜ್ಯ ಮಟ್ಟದ ಸಂಪನ್ಮೂಲ ವ್ಯಕ್ತಿಗಳಿಗಾಗಿ ಏರ್ಪಡಿಸಿದ ತರಬೇತಿ ಪಡೆದ್ದು, ಬಾಗಲಕೋಟೆ, ವಿಜಯಪುರ, ರಾಯಚೂರ, ಕೊಪ್ಪಳ ಜಿಲ್ಲೆಗಳಲ್ಲಿ ದೇವದಾಸಿ ಮಹಿಳೆಯರಿಗೆ ಜಾಗೃತಿ ಶಿಬಿರಗಳನ್ನು ಏರ್ಪಡಿಸಿ, ದೇವದಾಸಿ ಪದ್ದತಿ ನಿರ್ಮೂಲನೆಗೆ ಶ್ರಮಿಸಿರುತ್ತಾರೆ.
2006-2009ರ ರಾಯಬಾಗ ಕ್ಷೇತ್ರದಲ್ಲಿ ಸಮುದಾಯ ಸಂಘಟಕರಾಗಿ ದಲಿತ ಮಕ್ಕಳ ಶೈಕ್ಷಣಿಕ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿರುತ್ತಾರೆ. ಈ ಅವಧಿಯಲ್ಲಿ ಬಾಲ್ಯವಿವಾಹ, ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಶ್ರಮಿಸಿರುತ್ತಾರೆ.
2010-2011 ರಾಯಬಾಗ ಕ್ಷೇತ್ರದಲ್ಲಿ ಮಾಡಿದ ಕೆಲಸವನ್ನು ಗುರುತಿಸಿ ಅಂತರ್‍ರಾಷ್ಟ್ರೀಯ ಸಂಸ್ಥೆಯ ನೆರವಿನೊಂದಿಗೆ ಬಾಗಲಕೋಟೆ ಜಿಲ್ಲೆಯಲ್ಲಿ ಕಿಶೋರಿಯರು ಮತ್ತು ಶಾಲೆ ಬಿಟ್ಟ ಮಕ್ಕಳ ಶೈಕ್ಷಣಿಕ ಪುನರ್ವಸತಿಗಾಗಿ ಶ್ರಮಿಸಿರುತ್ತಾರೆ.
2012ರ ನಂತರ ಮಾಸ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರಾಗಿ ನೇಮಕಗೊಂಡು ಮಹಿಳಾ ಸಬಲೀಕರಣ, ದೇವದಾಸಿ ಪದ್ದತಿ ನಿರ್ಮೂಲನೆ, ಪುನರ್ವಸತಿ, ಆರ್ಥಿಕ ಅಭಿವೃದ್ದಿ ಇತ್ಯಾದಿ ಕಾರ್ಯಕ್ರಮಗಳನ್ನು ಮುಂದುವರಿಸಿರುತ್ತಾರೆ. ಇವರ ವಿಶಿಷ್ಟ ಸೇವೆಯನ್ನು ಗುರುತಿಸಿ ಭಾರತ ಸರ್ಕಾರವು 2017-18ನೇ ಸಾಲಿನ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿರುತ್ತದೆ. ನಮ್ಮ ಜಿಲ್ಲೆಯ ಮಹಿಳೆ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿರುವುದು ನಮ್ಮಲ್ಲೇರಿಗೂ ಹೆಮ್ಮಯ ವಿಷಯದ ಸಂಗತಿ.Featuring the Padma Shri award for the Padma Shri award

| Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

 

Read Belgaum News & Updates for What’s Happening in Around You @ in News Belgaum Kannada News Portal.