ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

In the publication.

ಪಿಂಚಣಿದಾರರ ಗಮನಕ್ಕೆ

ಬೆಳಗಾವಿ:(news belgaum) ಮಹಾನಗರ ಪಾಲಿಕೆಯಿಂದ ಪಿಂಚಣಿ ಪಡೆಯುತ್ತಿರುವ ಎಲ್ಲ ಪಿಂಚಣಿ ಮತ್ತು ಕುಟುಂಬ ಪಿಂಚಣಿದಾರರಿಗೆ ರಾಜ್ಯ ಸರ್ಕಾರದ ಸಂಚಿತ ನಿಧಿಯಿಂದ ಪಾವತಿಸಲು ಪಿಂಚಣಿ, ಸಣ್ಣ ಉಳಿತಾಯ ಮತ್ತು ಆಸ್ತಿ-ಋಣಿ ನಿರ್ವಹಣೆ ಇಲಾಖೆಯ ಸಹಾಯಕ ನಿರ್ದೇಶಕರು ಇವರಿಗೆ ಆದೇಶಿಸಲಾಗಿರುತ್ತದೆ.
ಈ ಹಿನ್ನೆಲೆಯಲ್ಲಿ ಪಾಲಿಕೆಯ ಎಲ್ಲ ಪಿಂಚಣಿದಾರರು ತಮ್ಮ ಬ್ಯಾಂಕ್ ಪಾಸ್‍ಬುಕ್ ನಕಲು ಪ್ರತಿ, ಎರಡು ಜಂಟಿ ಫೋಟೋ ಪ್ರತಿಗಳನ್ನು ಫೆಬ್ರವರಿ 14 ರಿಂದ ಪಾಲಿಕೆ ಮುಖ್ಯ ಕಚೇರಿಯ ಲೆಕ್ಕ ಶಾಖೆಗೆ ನೀಡಬೇಕೆಂದು ಮಹಾನಗರ ಪಾಲಿಕೆಯ ಮುಖ್ಯ ಲೆಕ್ಕಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದಿ. ಜಿ. ಎಸ್ ಹಿಟ್ಟಣಗಿ ಅವರ ನಾಮಕರಣ: ಆಕ್ಷೇಪಣೆ ಆಹ್ವಾನ

ಬೆಳಗಾವಿ: ಸ್ಥಳೀಯ ಮಹಾಂತೇಶ ನಗರದ ಪಿ ಮತ್ತು ಟಿ ಕ್ವಾಟರ್ಸ ಹತ್ತಿರ ಇರುವ ವೃತ್ತಕ್ಕೆ ಪೊಲೀಸ್ ಇನ್‍ಸ್ಪೆಕ್ಟರ್ ದಿ. ಜಿ. ಎಸ್ ಹಿಟ್ಟಣಗಿ ಅವರ ನಾಮಕರಣ ಮಾಡಬೇಕೆಂದು ದಿ. ಜಿ. ಎಸ್ ಹಿಟ್ಟಣಗಿ ಅವರ ಅಭಿಮಾನಿ ಬಳಗದ ಸಂಚಾಲಕರು ಒತ್ತಾಯಿಸಿ ಅರ್ಜಿ ಸಲ್ಲಿಸದ್ದು, ಜೂನ್ 30, 2017 ರಂದು ಮಹಾನಗರ ಮಹಾಪೌರರು ಅಧ್ಯಕ್ಷತೆಯಲ್ಲಿ ಜರುಗಿದ ಪರಿಷತ್ ಸಭೆಯಲ್ಲಿ ನಿಯಮಾನುಸಾರ ಕ್ರಮ ಜರುಗಿಸಲು ಠರಾವು ಪಾಸ್ ಆಗಿರುತ್ತದೆ.
ಈ ಕರಿತು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ವಾಸಿಸುವ ಸಾರ್ವಜನಿಕರು ಯಾವುದೇ ಆಕ್ಷಪಣೆ ಇದ್ದರೆ 30 ದಿನಗಳೊಳಗಾಗಿ ಸಲ್ಲಿಸಬೇಕೆಂದು ಮಹಾನಗರ ಪಾಲಿಕೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

In the publication.

|  (  Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

 

Read Belgaum News & Updates for What’s Happening in Around You @ in News Belgaum Kannada News Portal.