“ಭಾರತ ಪ್ರಪಂಚದ ಅಪ್ರತಿಮ ಗಣತಂತ್ರ”

ಬೆಳಗಾವಿ:(belgaum news)( news belgaum)  ಸ್ವಾತಂತ್ರ್ಯ ನಂತರ ಹತ್ತು ಹಲವಾರು ಪ್ರಾಂತ್ಯಗಳಲ್ಲಿ ಹಂಚಿಹೋದ ಭಾರತದ ಜನತೆಯನ್ನು ಒಂದುಗೂಡಿಸಲು ನಡೆದ ಏಕೀಕರಣದ ರೂವಾರಿ ಸರದಾರ ವಲ್ಲಭಾಯಿ ಪಾಟೇಲ ಹಾಗೂ ನಾಯಕರ ದಿಟ್ಟ ಹೋರಾಟವು ಸುವರ್ಣಾಕ್ಷರಗಳಿಂದ ಬರೆದಿಟ್ಟ ಯಶೊಗಾಥೆಯಾಗಿದೆ. ದೇಶದ ಐಕ್ಯತೆಯನ್ನು ಸಾರುವ ಭಾರತ ಸಂವಿಧಾನವನ್ನು ಅಂಗೀಕರಿಸುವಲ್ಲಿ, ದೇಶದ ನಾಗರಿಕರ ಕರ್ತವ್ಯ ಪ್ರಜ್ಞೆ, ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವದಲ್ಲಿ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ ಅಂಬೇಡ್ಕರ ಹಾಗೂ ಸಂವಿಧಾನ ರಚನಾ ಸಮಿತಿಯ ಸರ್ದಸದಸ್ಯರ ಪಾತ್ರ ಪ್ರಮುಖವಾಗಿದೆ. ಸಂವಿಧಾನದ ಮೂಲ ಆಶಯ ಸಮಾನತೆ ಹಾಗೂ ಏಕತೆಯಾಗಿದ್ದರಿಂದ, ಇಂದು ಪ್ರಪಂಚದ ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ಭಾರತದ ಗಣತಂತ್ರವು ಅಪ್ರತಿಮವಾಗಿದೆ. ಅದರ ಪ್ರಾವಿತ್ರತೆಯನ್ನು ಕಾಪಾಡಿಕೊಂಡು ಹೋಗುವ ಜವಾಬ್ದಾರಿ ನಮ್ಮಮೇಲಿದೆ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಶಿವಾನಂದ ಬಿ. ಹೊಸಮನಿ ಯವರು ಕರೆ ನೀಡಿದರು. ಅವರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಜರುಗಿದ ದ್ವಜಾರೋಹಣ ನೆರವೇರಿಸಿ ಮಾತನಾಡಿದರು. ಈ ವರ್ಷ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಮಹಾವಿದ್ಯಾಲಯಗಳಿಂದ ಐದು ಎನ್.ಎಸ್.ಎಸ್. ಸ್ವಯಂಸೇವಕರು ಗಣರಾಜೋತ್ಸವದ ಪೇರೆಡನಲ್ಲಿ ಭಾಗವಹಿಸಿ ವಿಶ್ವವಿದ್ಯಾಲಕ್ಕೆ ಕೀರ್ತಿಯನ್ನು ತಂದಿದ್ದಾರೆ ಎಂದು ಅಭಿನಂದಿಸಿದರು. ಭಾರತ ಸರ್ಕಾರದ ಅತ್ಯುನ್ನತ ಪದ್ಮ ಪ್ರಶಸ್ತಿಗಳು ಕರ್ನಾಟಕದ ಮಹನೀಯರಿಗೆ ನೀಡಿದ್ದನ್ನು ಶ್ಲಾಘಿಸಿದರು. ವಿಶ್ವವಿದ್ಯಾಲಯದ ಎಲ್ಲ ಕ್ಷೇತ್ರಗಳಲ್ಲಿ ಅಹರ್ನಿಶಿ ಸೇವೆಸಲಿಸುತ್ತಿರುವ ಎಲ್ಲ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಕುಲಸಚಿವರಾದ ಪ್ರೊ. ಸಿದ್ದು ಪಿ. ಆಲಗೂರ, ಮೌಲ್ಯಮಾಪನ ಕುಲಸಚಿವರಾದ ಪ್ರೊ. ರಂಗರಾಜ ವನದುರ್ಗ, ಹಣಕಾಸು ಅಧಿಕಾರಿಗಳಾದ ಪರಶುರಾಮ ದುಡಗುಂಟಿ, ಪ್ರೊ. ಸಾಬಣ್ಣಾ ತಳವಾರ, ಪ್ರೊ. ಡಿ.ಎನ್.ಪಾಟೀಲ, ಮಂಜುನಾಥ, ಪ್ರೊ. ಜಗದೀಶ. ಗಸ್ತಿ ಹಾಗೂ ವಿಶ್ವವಿದ್ಯಾಲಯದ ಬೊಧಕ, ಬೋಧಕೇತರ ಹಾಗೂ ವಿದ್ಯಾರ್ಥಿಗಳು ಭಾಗವಹಿಸ ಕಾರ್ಯಕ್ರಮಕ್ಕೆ ಮೆರಗು ತಂದರು. ಎನ್.ಎಸ್.ಎಸ್. ಸಂಯೋಜಕರಾದ ಡಾ.ಎಸ್.ಓ.ಹಲಸಗಿ ನಿರೂಪಿಸಿದರು. ಎನ್.ಎಸ್.ಎಸ್. ಸ್ವಯಂಸೇವಕರು ರಾಷ್ಟ್ರಗೀತೆ ಹಾಡಿದರು ಹಾಗೂ ಪ್ರೊ. ಪ್ರಕಾಶ ಕಟ್ಟಿಮನಿ ವಂದಿಸಿದರು. “India is an iconic republic of the world” (belgaum news )

Read Belgaum News & Updates for What’s Happening in Around You @ in News Belgaum Kannada News Portal.