ಪ್ರಕಟಣೆ| ವಾಹನ ವ್ಯವಸ್ಥೆ |ಅರ್ಜಿ ಆಹ್ವಾನ|ಲೋಕ ಅದಾಲತ್ |ಹೆಚ್ಚುವರಿ ಬಸ್|ಹೆಚ್ಚುವರಿ ಭದ್ರತಾ|ಸಮಿತಿ ಸಭೆ|ನಿಷೇಧಾಜ್ಞೆ |ಸಹಾಯಧನ

Publication | Vehicle System | Application Invitation | Lok Adalat | Additional Bus | Additional Security | Committee Meeting | Prohibition | Subsidy

ಶ್ರವಣಬೆಳಗೋಳ; ಮಸ್ತಾಭಿಷೇಕ ವಿಶೇಷ ವಾಹನ ವ್ಯವಸ್ಥೆ
ಬೆಳಗಾವಿ:(newsbelgaum) ಫೆಬ್ರವರಿ 7 ರಿಂದ 26ರ ಅವಧಿಯಲ್ಲಿ ಶ್ರೀ ಕ್ಷೇತ್ರ ಶ್ರವಣಬೆಳಗೋಳದಲ್ಲಿ ಪಂಚಕಲ್ಯಾಣ ಪ್ರತಿಷ್ಠಾಪಣಾ ಮಹೋತ್ಸವ ಹಾಗೂ ಮಹಾಮಸ್ತಕಾಭಿಷೇಕ ಜರುಗಲಿದ್ದು, ಈ ಪ್ರಯುಕ್ತ ಸಾರ್ವಜನಿಕ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಬೆಳಗಾವಿ ವಿಭಾಗದ ಬೆಳಗಾವಿ, ಬೈಲಹೊಂಗಲ, ರಾಮದುರ್ಗ ಮತ್ತು ಖಾನಾಪೂರ ಬಸ್ ನಿಲ್ದಾಣಗಳಿಂದ ಸಾರ್ವಜನಿಕ ಪ್ರಯಾಣಿಕರ ಜನದಟ್ಟಣೆ ಅನುಸರಿಸಿ ಶ್ರೀ ಕ್ಷೇತ್ರ ಶ್ರವಣಬೆಳಗೋಳಕ್ಕೆ ಸಾಂಧರ್ಬಿಕ ಒಪ್ಪಂದ/ಹೆಚ್ಚುವರಿ ವಾಹನ ಕಾರ್ಯಾಚರಣೆ ಮಾಡಲಾಗಿದೆ ಎಂದು ಬೆಳಗಾವಿ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶ್ರೀ ಕ್ಷೇತ್ರ ಶ್ರವಣಬೆಳಗೋಳಕ್ಕೆ ಹೋಗುವ ಸಾರ್ವಜನಿಕ ಪ್ರಯಾಣಿಕರು ತಂಡದ ರೂಪದಲ್ಲಿ ಹೆಚ್ಚುವರಿ ವಾಹನಗಳು ಮತ್ತು ಸಾಂಧರ್ಬಿಕ ಒಪ್ಪಂದದ ಮೇಲೆ ವಾಹನಗಳನ್ನು ಮುಂಚಿತವಾಗಿ ಕಾಯ್ದಿರಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಘಟಕ ವ್ಯವಸ್ಥಾಪಕರು ಬೆಳಗಾವಿ-1 7760991625, ಘಟಕ ವ್ಯವಸ್ಥಾಪಕರು ಬೆಳಗಾವಿ-3 7760991627, ಘಟಕ ವ್ಯವಸ್ಥಾಪಕರು ಬೈಲಹೊಂಗಲ-7760991628, ಘಟಕ ವ್ಯವಸ್ಥಾಪಕರು ರಾಮದುರ್ಗ-7760991630, ಘಟಕ ವ್ಯವಸ್ಥಾಪಕರು ಖಾನಾಪೂರ-7760991631 ಈ ವ್ಯವಸ್ಥಾಪಕರುಗಳನ್ನು ಸಂಪರ್ಕಿಸಲು ಕೋರಲಾಗಿದೆ.

ಲಘು ವಾಹನ ಚಾಲನಾ ತರಬೇತಿಗೆ ಅರ್ಜಿ ಆಹ್ವಾನ
ಬೆಳಗಾವಿ:  ಬೆಳಗಾವಿ ತಾಲ್ಲೂಕಿನ ವ್ಯಾಪ್ತಿಗೊಳಪಡುವ ಪರಿಶಿಷ್ಟ ವರ್ಗ, ಪಂಗಡದ ಅಲೆಮಾರಿ, ಅರೆ ಅಲೆಮಾರಿ, ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಸಮುದಾಯಗಳ ಅಭಿವೃದ್ಧಿಗಾಗಿ ಅಧಿಕೃತ ವಾಹನ ಚಾಲನ ತರಬೇತಿ ಸಂಸ್ಥೆಗಳ ಮೂಲಕ ಲಘು ವಾಹನಚಾಲನಾ ತರಬೇತಿ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಪ್ರವೇಶ ಪಡೆಯಲು ಇಚ್ಛಿಸಲಿರುವ ಅರ್ಹ ಅಭ್ಯರ್ಥಿಗಳು 10ನೇ ತರಗತಿ ಉತ್ತೀರ್ಣಗೊಂಡ, 18 ವರ್ಷ ವಯೋಮಿತಿ ಹೊಂದಿದ ಬುರುಡ, ಮೇದ, ಮೇದಾರಿ, ಕಾತ್ಕರಿ, ರಾವಲ ಬಿಲ್ಲ, ಹಾಗೂ ಇತರೆ ಅಲೆಮಾರಿ/ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಜಾತಿಗೆ ಸೇರಿದವರಾಗಿರಬೇಕು. ನಿಗದಿತ ನಮೂನೆಯ ಅರ್ಜಿಯನ್ನು ತಾಲ್ಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿಗಳು ನೆಹರು ನಗರ ಬೆಳಗಾವಿ ಪಡೆದು ಎಲ್ಲ ವಿವರಗಳನ್ನು ಪೂರ್ತಿ ಭರ್ತಿ ಮಾಡಿ ಅವಶ್ಯವಿರುವ ದಾಖಲೆಗಳನ್ನು ಲಗತ್ತಿಸಿ ಈ ಕಾರ್ಯಾಲಯಕ್ಕೆ ಫೆಬ್ರವರಿ 20ರ ಒಳಗಾಗಿ ಅರ್ಜಿ ಸಲ್ಲಿಸಬೇಕೆಂದು ಬೆಳಗಾವಿ ತಾಲೂಕಾ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಫೆ.10 ರಂದು ಲೋಕ ಅದಾಲತ್
ಬೆಳಗಾವಿ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಆರ್.ಜಿ ಸತೀಶ ಸಿಂಗ್ ಇವರ ಮಾರ್ಗದರ್ಶನದಲ್ಲಿ ಬೆಳಗಾವಿಯ ಹೊಸ ನ್ಯಾಯಾಲಗಳ ಸಂಕೀರ್ಣ ಆವರಣದ ಎ.ಡಿ.ಆರ್. ಕಟ್ಟಡದಲ್ಲಿ ಎಲ್ಲ ನ್ಯಾಯಾಧೀಶ ಹಾಗೂ ಎಲ್ಲ ತಾಲೂಕುಗಳ ನ್ಯಾಯಾಲಯಗಳಲ್ಲಿ ಫೆಬ್ರವರಿ 10 ರಂದು ಬೆಳೆಗ್ಗೆ 11 ಗಂಟೆಯಿಂದ ಜಿಲ್ಲೆಯ ಎಲ್ಲ ನ್ಯಾಯಾಧೀಶ ಹಾಗೂ ವಕೀಲರ ಸಹಯೋಗದಲ್ಲಿ ಲೋಕ ಅದಾಲತ್ತನ್ನು ಹಮ್ಮಿಕೊಳ್ಳಲಾಗಿದೆ.

ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಆದೇಶದ ಮೇರೆಗೆ ವೈವಾಹಿಕ, ಕೌಟುಂಬಿಕ ಮತ್ತು ಪಾಲು ವಿಭಾಗ, ಬ್ಯಾಂಕುಗಳಿಗೆ ಸಂಬಂಧಪಟ್ಟ ಪ್ರಕರಣಗಳು ಹಾಗೂ ಚೆಕ್ ಬೌನ್ಸಗಳು ಸೇರಿದಂತೆ ಇತರ ಎಲ್ಲ ರಾಜಿಯಾಗಬಹುದಾದಂತಹ ಪ್ರಕರಣಗಳ ಕುರಿತು, ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳ ಕುರುತು ಲೋಕ ಅದಾಲತ್ತ ಜರಗುವುದು.
ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಕಾನೂನು ಸೇವಾ ಸಮಿತಿಯನ್ನು ಕೂಡಲೇ ಸಪರ್ಕಿಸಬೇಕೆಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶ್ರೀ ಮಾಯಕ್ಕಾದೇವಿ ದೇವಿ ಜಾತ್ರೆ : ಹೆಚ್ಚುವರಿ ಬಸ್
ಬೆಳಗಾವಿ: ಶ್ರೀ ಮಾಯಕ್ಕಾದೇವಿ ದೇವಿ ಜಾತ್ರೆಯ ನಿಮಿತ್ಯವಾಗಿ ಜನವರಿ 31 ರಿಂದ ಫೆಬ್ರವರಿ 13 ರವರೆಗೆ ವಿಶೇಷ ಬಸ್‍ಗಳನ್ನು ಬಿಡಲಾಗಿದೆ.
ಚಿಕ್ಕೋಡಿ, ಸಂಕೇಶ್ವರ, ಗೋಕಾಕ, ರಾಯಬಾಗ, ಕುಡಚಿ, ಅಥಣಿ, ಮಿರಜ, ಸೇರಿದಂತೆ ಇತರ ಸ್ಥಳಗಳಿಂದ ಚಿಂಚಲಿಯ ವರೆಗೆ ಹೆಚ್ಚುವರಿ ಬಸ್‍ಗಳನ್ನು ಕಲ್ಪಿಸಲಾಗಿದ್ದು, ಪ್ರಯಾಣಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಚಿಕ್ಕೋಡಿ ವಿಭಾಗೀಯ ನಿಯಂತ್ರಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶ್ರೀ ಯಲ್ಲಮ್ಮಾದೇವಿ-ಶ್ರೀ ಉಳವಿ ಚನ್ನಬಸವೇಶ್ವ-ಭಾವೇಶ್ವರಿ ಜಾತ್ರೆ : ಹೆಚ್ಚುವರಿ ಭದ್ರತಾ ಸಿಬ್ಬಂಧಿ
ಬೆಳಗಾವಿ:  ಶ್ರೀ ಸವದತ್ತಿ ಯಲ್ಲಮ್ಮಾ, ಶ್ರೀ ಉಳವಿ ಚನ್ನಬಸವೇಶ್ವ ಹಾಗೂ ಭಾವೇಶ್ವರಿ ಜಾತ್ರೆಯ ನಿಮಿತ್ಯವಾಗಿ ಬೆಳಗಾವಿ, ಯಲ್ಲಮ್ಮನ ಗುಡ್ಡ, ಬೈಲಹೊಂದಲ, ಕಿತ್ತೂರು ಮತ್ತು ಉಳವಿ ಜಾತ್ರೆಗಳಲ್ಲಿ ಜಾತ್ರಾ ಬಿಂದು ಸ್ಥಾಪಿಸಿ ಭದ್ರತಾ ಸಿಬ್ಬಂಧಿಯನ್ನು ನಿಯೋಜಿಸಲಾಗಿದೆ ಎಂದು ವಾ.ಕ.ರ.ಸಾ ಸಂಸ್ಥೆಯ ಬೆಳಗಾವಿ ವಿಭಾಗೀಯ ನಿಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಫೆ.10-12 ಬಳ್ಳಾರಿಯಲ್ಲಿ ಸರ್ಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾ ಕೂಟ
ಬೆಳಗಾವಿ:ಸರ್ಕಾರಿ ನೌಕರರ 2017-18ನೇ ಸಾಲಿನ ರಾಜ್ಯ ಮಟ್ಟದ ಕ್ರೀಡಾ ಕೂಟವನ್ನು ಬಳ್ಳಾರಿ ಜಿಲ್ಲೆಯಲ್ಲಿ ಫೆಬ್ರವರಿ 10 ರಿಂದ 12 ರವರೆಗೆ ಆಯೋಜಿಸಲಾಗಿದೆ.
ಈ ಕ್ರೀಡಾ ಕೂಟದಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ನಡೆದ 2017-18ನೇ ಸಾಲಿನ ಜಿಲ್ಲಾ ಮಟ್ಟದ ವೈಯಕ್ತಿಕ ಕ್ರೀಡಾ ಕೂಟದಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದ ಕ್ರೀಡಾ ಪಟುಗಳು ಫೆಬ್ರವರಿ 9 ರಂದು ಮಧ್ಯಾನ್ಹ 3 ಗಂಟೆಯೊಳಗಾಗಿ ತಮ್ಮ ಜಿಲ್ಲೆಯ ಗುರುತಿನ ಚೀಟಿಯೊಂದಿಗೆ ವರಿದಿ ಮಾಡಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ- 08392-200441 ಅಥವಾ- 0831-2470757 ಬಳ್ಳಾರಿ ದೂರವಾಣಿ ಸಂಖ್ಯೆಯನ್ನು ಸಪರ್ಕಿಸಬೇಕೆಂದು ಬೆಳಗಾವಿಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಫೆ. 6 ರಂದು ಪಟ್ಟಣ ವ್ಯಾಪಾರಸ್ಥರ ಸಮಿತಿ ಸಭೆ
ಬೆಳಗಾವಿ:  ರಾಷ್ಟ್ರೀಯ ನಗರ ಬೀದಿ ವ್ಯಾಪಾರಿಗಳ (ಸಂರಕ್ಷಣೆ, ಜೀವನೋಪಾಯ ಮತ್ತು ನಿಯಂತ್ರಣ) ಕಾಯ್ದೆ-2014ನ್ನು ಅನುಷ್ಠಾನಗೊಳಿಸುವ ಸಂಬಂಧವಾಗಿ ಬೀದಿ ವ್ಯಾಪಾರಿಗಳ ನಿಯಂತ್ರಣ ಕಾಯ್ದೆಯ ನಿಯಮಗಳ ಕಾರ್ಯಕ್ರಮಗಳನ್ನು ಕೈಗೊಳ್ಳಲು ಆಯುಕ್ತರು ಪಟ್ಟಣ ವ್ಯಾಪಾರಸ್ಥರ ಸಮಿತಿ ಸಭೆಯನ್ನು ಫೆಬ್ರವರಿ 6 ರಂದು ಬೆಳಿಗ್ಗೆ 11 ಗಂಟೆಗೆ ನಗರದ ಮಹಾನಗರ ಪಾಲಿಕೆಯ ಸ್ಟ್ಯಾಂಡಿಂಗ್ ಕಮಿಟಿ ಹಾಲ್‍ನಲ್ಲಿ ಆಯೋಜಿಸಲಾಗಿದೆ ಎಂದು ಮಹಾನಗರ ಪಾಲಿಕೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪರಿಶಿಷ್ಟ ವರ್ಗದವರ ಹನಿ ನೀರಾವರಿ ಅಳವಡಿಕೆಗೆ ಸಹಾಯಧನ
ಬೆಳಗಾವಿ: : 2016-17ನೇ ಸಾಲಿನಲ್ಲಿ ಭಾರತ ಸಂವಿಧಾನ ಅನುಚ್ಛೇದ 275(1)ರಡಿ ಪರಿಶಿಷ್ಟ ವರ್ಗದವರ ಅಭಿವೃದ್ಧಿಗಾಗಿ ತೋಟಗಾರಿಕೆ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ವಿಶೇಷವಾಗಿ ಪರಿಶಿಷ್ಟ ಪಂಗಡ ರೈತರಿಗೆ ಹನಿ ನೀರಾವರಿ ಅಳವಡಿಕೆಗೆ ಸಹಾಯಧನ ನೀಡಲಾಗುವುದು. ಆಸಕ್ತ ರೈತರು ತಾಲ್ಲೂಕು/ಹೋಬಳಿಮಟ್ಟದ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಅಥವಾ ಜಿಲ್ಲಾ/ತಾಲ್ಲೂಕುಮಟ್ಟದ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿಳನ್ನು ಸಂಪರ್ಕಿಸಿ ಸೂಕ್ತ ದಾಖಲಾತಿಗಳನ್ನು ಸಲ್ಲಿಸಿ ಸೌಲಭ್ಯ ಪಡೆಯಲು ತೋಟಗಾರಿಕೆ ಉಪನಿರ್ದೇಶಕರು (ಜಿ.ಪಂ) ಬೆಳಗಾವಿ ರವರು ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾಮಟ್ಟದ ಅಧಿಕಾರಿಗಳು, ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿಗಳು-0831-2407246, ತಾಲ್ಲೂಕುಮಟ್ಟದ ಅಧಿಕಾರಿಗಳು, ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿಗಳು-08333-266419
ತೋಟಗಾರಿಕೆ ಇಲಾಖೆಯ ತಾಲ್ಲೂಕು ಕಚೇರಿಗಳ ಅಥಣಿ 08289-285099, ಹುಕ್ಕೇರಿ 08333-265915, ಬೈಲಹೊಂಗಲ 08288-233758,ಗೋಕಾಕ: 08332-229382, ಬೆಳಗಾವಿ : 0831-2431559, ಖಾನಾಪೂರ : 08336-223387, ಚಿಕ್ಕೋಡಿ 08338-274943 ಸವದತ್ತಿ 08330-222082, ರಾಮದುರ್ಗ 08335-241512, ರಾಯಬಾಗ 08331-225049 ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ.

ಪರೀಕ್ಷಾ ಕೇಂದ್ರದ ಸುತ್ತ ಮುತ್ತ ನಿಷೇಧಾಜ್ಞೆ
ಬೆಳಗಾವಿ:  ಕರ್ನಾಟಕ ಲೋಕಸೇವಾ ಆಯೋಗದ ವತಿಯಿಂದ ಬೆಳಗಾವಿ ಜಲ್ಲೆಯಲ್ಲಿ ಪ್ರಥಮ ದರ್ಜೆ ಸಹಾಯಕರ ನೇಮಕಾತಿಗೆ ಸಂಬಂಧಿಸಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳು ಫೆಬ್ರುವರಿ 4 ರಂದು ಮುಂಜಾನೆ 10 ಗಂಟೆಯಿಂದ 11-30 ಗಂಟೆಯವರೆಗೆ ಹಾಗೂ ಮಧ್ಯಾಹ್ನ 2 ಗಂಟೆಯಿಂದ 3-30 ಗಂಟೆಗೆಯವರೆಗೆ ಬೆಳಗಾವಿ ನಗರದ 49 ಉಪ ಪರೀಕ್ಷಾ ಕೇಂದ್ರಗಳಲ್ಲಿ , ಗೋಕಾಕ ತಾಲೂಕಿ 12 ಉಪ ಪರೀಕ್ಷಾ ಕೇಂದ್ರಗಳಲ್ಲಿ, ಬೈಲಹೊಂಗಲ ತಾಲೂಕಿನ 5 ಉಪ ಪರೀಕ್ಷಾ ಕೇಂದ್ರಗಳಲ್ಲಿ ಹಾಗೂ ಖಾನಾಪೂರ ತಾಲೂಕಿನ 5 ಉಪ ಪರೀಕ್ಷಾ ಕೇಂದ್ರಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳು ಜರುಗಲಿವೆ.
ಸದರಿ ಪರೀಕ್ಷಾ ಕೇಂದ್ರಗಳ ಸುತ್ತ ಮುತ್ತ 200 ಮೀಟರ್ ವ್ಯಾಪ್ತಿಯಲ್ಲಿ ಮುಂಜಾಗ್ರತಾ ಕ್ರಮವಾಗಿ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಹಿದೃಷ್ಟಿಯಿಂದ ಸಿ.ಆರ್.ಪಿ.ಸಿ 1973ರ ಕಲಂ 144 ರಡಿಯಲ್ಲಿ ನಿಷೇಧಾಜ್ಞೆಯನ್ನು ಜಿಲ್ಲಾ ದಂಡಾಧಿಕಾರಿಗಳಾದ ಎಸ್.ಜಿಯಾವುಲ್ಲಾ ಅವರು ಹೊರಡಿಸಿರುತ್ತಾರೆ.

Publication | Vehicle System | Application Invitation | Lok Adalat | Additional Bus | Additional Security | Committee Meeting | Prohibition | Subsidy

| Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

 

Read Belgaum News & Updates for What’s Happening in Around You @ in News Belgaum Kannada News Portal.