ಗಣರಾಜ್ಯೋತ್ಸವ ಆಚರಣೆ

Republic Day Celebration

ಬೆಳಗಾವಿ:/ಖಾನಾಪುರ: (news belgaum) ಭಾರತೀಯ ಪ್ರಜೆಗಳಾದ ನಾವೆಲ್ಲರೂ ನಮ್ಮ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಸರಕಾರಿ ಶಾಲೆಗಳಲ್ಲಿ ಕೊಡಿಸಲು ಮುಂದಾಗಬೇಕಂದು ಶಿಕ್ಷಣಪ್ರೇಮಿ ರಾಜು ರಪಾಟಿ ಹೇಳಿದರು. ತಾಲೂಕಿನ ಲಿಂಗನಮಠ ಗ್ರಾಮದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರದಂದು ಹಮ್ಮಿಕೊಂಡಂತಹ 69ನೇಯ ಗಣರಾಜ್ಯೋತ್ಸವ ನಿಮಿತ್ತ ಸಾಂಸ್ಕ್ರತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಮುಖ್ಯಅತಿಥಿಯಾಗಿ ಮಾತನಾಡಿದರು.

ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಸ್.ಡಿ.ಎಮ್.ಸಿ ಅಧ್ಯಕ್ಷ ಪಾಂಡುರಂಗ ಮಿಟಗಾರ ಧ್ವಜಾರೋಹಣವನ್ನು ನೇರೆವೆರಿಸಿ ಮಾತನಾಡಿದ ಇವರು ಸರಕಾರಿ ಶಾಲೆಯಲ್ಲಿ ಒಳ್ಳೆಯ ಗುಣಮಟ್ಟದ ಶಿಕ್ಷಣದ ಜೋತೆಗೆ ಗುರುವೃಂದವು ಸಹ ಗುಣಮಟ್ಟದ ಕೌಶಲ್ಯವನ್ನು ಹೊಂದಿದ್ದಾರೆ. ಆದ್ದರಿಂದ ಮಕ್ಕಳಿಗಾಗಿ ನಲಿ-ಕಲಿ, ಮಧ್ಯಾಹ್ನದ ಬಿಸಿಯೂಟ, ಕ್ಷೀರಬಾಗ್ಯ, ಶೂಭಾಗ್ಯ, ಪಠ್ಯಪುಸ್ತಕ, ಸಮವಸ್ತ್ರ ಹೀಗೆ ಹಲವಾರು ಜನಪರ ಯೋಜನೆಗಳನ್ನು ಉಚಿತವಾಗಿ ನೀಡುತ್ತಿದೆ. ಆದ್ದರಿಂದ ಪಾಲಕರು ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ದಾಖಲಿಸದೆ ಸರಕಾರಿ ಶಾಲೆಗಳನ್ನು ಉಳಿಸಿ-ಬೆಳಿಸಿರಿ ಎಂದು ವಿನಂತಿಸಿಕೊಂಡರು.

ತದನಂತರ ಕನ್ನಡ ಮತ್ತು ಉರ್ದು ಶಾಲೆಯ ಮಕ್ಕಳಿಂದ ಸಾಂಸ್ಕ್ರತಿಕ ಕಾರ್ಯಕ್ರಮ ಜರುಗಿತು. ಈ ಸಂಧರ್ಭದಲ್ಲಿ ಉರ್ದು ಶಾಲೆಯ ಎಸ್.ಡಿ.ಎಮ್.ಸಿ ಅಧ್ಯಕ್ಷ ಟಿಪ್ಪು ತೇರಗಾಂವ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಎಪಿಎಮಸಿ ಸದಸ್ಯ ಬಸವರಾಜ ಮುಗಳಿಹಾಳ, ಹಿರಿಯರಾದ ಬಾಳಪ್ಪಜ್ಜ ಮಾಟೋಳ್ಲಿ, ಎಸ್.ಡಿ.ಎಮ್.ಸಿ ಸದಸ್ಯರು, ಗ್ರಾಪಂ ಸದಸ್ಯರು, ಸಂಘ-ಸಂಸ್ಥೆಗಳ ಪಧಾಧಿಕಾರಿಗಳು ಹಾಗೂ ಶಾಲೆಯ ಮುದ್ದು ಮಕ್ಕಳು ಹಾಜರಿದ್ದರು.

ಸರಕಾರಿ ಪ್ರೌಢಶಾಲೆಯಲ್ಲಿ ಮುಖ್ಯೋಧ್ಯಾಪಕಿ ಜೆ.ಎಲ್.ಭಂಡಾರಿ ಧ್ವಜಾರೋಹಣ ನೆರೆವೆರೆಸಿದರು. ಈ ಸಂಧರ್ಭದಲ್ಲಿ ಶಾಲೆಯ ಶಿಕ್ಷಕ ವೃಂದ ಹಾಗೂ ಮಕ್ಕಳು ಹಾಜರಿದ್ದರು.

ಗ್ರಾಮ ಪಂಚಾಯತನಲ್ಲಿ ಅಧ್ಯಕ್ಷ ಡಾ.ಕೆ.ಬಿ.ಹಿರೇಮಠ ಧ್ವಜಾರೋಹಣ ನೆರೆವೆರೆಸಿದರು. ಈ ಸಂಧರ್ಭದಲ್ಲಿ ಗ್ರಾಪಂ ಸದಸ್ಯರಾದ ಮುಸ್ತಫಾ ದಾಸ್ತಿಕೊಪ್ಪ, ಇಕಬಾಲ ದಾದೂನವರ. ಗದಿಗೆಮ್ಮಾ ನಾಯಿಕ, ಮಾರುತಿ ಸತ್ತೆನ್ನವರ, ಶಿವಾನಂದ ಗೊಶೆನಟ್ಟಿ, ರೇಖಾ ಪಾರಿಶ್ವಾಡ, ಪಾರ್ವತಿ ಮಾಟೋಳ್ಳಿ, ಶೋಭಾ ಕಮ್ಮಾರ, ಪಿಡಿಓ ಬಿ.ಪಿ.ಚಂದ್ರ ಮತ್ತು ಗ್ರಾಪಂ ಸಿಬ್ಬಂಧಿ ವರ್ಗ, ಗ್ರಾಮಸ್ಥರು ಹಾಜರಿದ್ದರು.

ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕನಲ್ಲಿ ಆರ್.ಪಿ.ತೆಂಗಿನಮಠ ಧ್ವಜಾರೋಹಣ ನೆರೆವೆರೆಸಿದರು.
ಈ ಸಂಧರ್ಭದಲ್ಲಿ ಬ್ಯಾಂಕಿನ ಸಿಬ್ಬಂಧಿ ವರ್ಗ ಹಾಗೂ ಗ್ರಾಮಸ್ಥರು ಹಾಜರಿದ್ದರು.Republic Day Celebration

| Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

Read Belgaum News & Updates for What’s Happening in Around You @ in News Belgaum Kannada News Portal.