before post

news belgaum:ಶಿವಾಜಿ ಸಕಲ ಸದ್ಗುಣಗಳನ್ನು ಹೊಂದಿದ ಶ್ರೇಷ್ಠ ಮಹಾರಾಜ : ಯ.ರು. ಪಾಟೀಲ್

Shivaji is the greatest Maharaja of all virtues: Y.R. Patil

0

ಛತ್ರಪತಿ ಶಿವಾಜಿ ಮಹಾರಾಜ ಜಯಂತಿ

News Belgaum-ಶಿವಾಜಿ ಸಕಲ ಸದ್ಗುಣಗಳನ್ನು ಹೊಂದಿದ ಶ್ರೇಷ್ಠ ಮಹಾರಾಜ : ಯ.ರು. ಪಾಟೀಲ್ News Belgaum-ಶಿವಾಜಿ ಸಕಲ ಸದ್ಗುಣಗಳನ್ನು ಹೊಂದಿದ ಶ್ರೇಷ್ಠ ಮಹಾರಾಜ : ಯ.ರು. ಪಾಟೀಲ್ 2
ಬೆಳಗಾವಿ:( news belgaum)ದೇಶಕಂಡ ಅಪರೂಪದ ನಾಯಕತ್ವ ಗುಣ ಹೊಂದಿದ ಶ್ರೇಷ್ಠ ಮಹಾರಾಜ ಛತ್ರಪತಿ ಶಿವಾಜಿ ಅವರಾಗಿದ್ದಾರೆ ಎಂದು ನಿವೃತ್ತ ತಹಶೀಲ್ದಾರ ಹಾಗೂ ಸಾಹಿತಿ ಯ.ರು. ಪಾಟೀಲ ಅವರು ಹೇಳಿದರು.
ನಗರದ ಛತ್ರಪತಿ ಶಿವಾಜಿ ಮಹಾರಾಜ ಉದ್ಯಾನದಲ್ಲಿ ಸೋಮವಾರ (ಫೆ.19) ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಇವರುಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಛತ್ರಪತಿ ಶಿವಾಜಿ ಮಹಾರಾಜ್ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ತಮ್ಮ ಸುತ್ತಮುತ್ತಲಿನ ಜನರಲ್ಲಿರುವ ಪ್ರತಿಭೆಗಳನ್ನು ಗುರುತಿಸಿ, ಅವರನ್ನು ಬಳಸಿಕೊಂಡು ಸಂಘಟನೆಯನ್ನು ಮಾಡಿದ್ದ ಶಿವಾಜಿ ಮಹಾರಾಜರು ನಮಗೆಲ್ಲ ಮಾದರಿಯಾಗಿದ್ದಾರೆ ಎಂದು ಹೇಳಿದರು.
ಛತ್ರಪತಿ ಶಿವಾಜಿ ಅವರು ಯುದ್ಧ ಚತುರ, ಮಹಾ ಪರಾಕ್ರಮಿ ಹಾಗೂ ಸಕಲ ಸದ್ಗುಣಗಳನ್ನು ಹೊಂದಿದ್ದರು. ಮಹಿಳೆಯರಿಗೆ ಅಪಾರ ಗೌರವವನ್ನು ನೀಡುತ್ತಿದ್ದರು ಎಂದರು.
ಶಿವಾಜಿ ಮಹಾರಾಜರು ಕನ್ನಡಿಗರೊಂದಿಗೆ ಅನ್ಯೋನ್ಯ ಸಂಬಂಧ ಹೊಂದಿದ್ದರು. ಅವರು ತಂಜಾವೂರನ್ನು ಗೆದ್ದು ಮರಳಿ ಹಂಪಿಯ ಮೂಲಕ ಮಹಾರಾಷ್ಟ್ರಕ್ಕೆ ಹೋಗುವಾಗ, ಹಂಪಿಯಲ್ಲಿ ಹಾಳಾಗಿರುವ ದೇವಾಲಯಗಳನ್ನು ಕಂಡು ಮರುಕ ಪಟ್ಟಿದ್ದರು ಎಂದು ತಿಳಿಸಿದರು.
ಶಿವಾಜಿ ಮಹಾರಾಜರು ಹಂಪಿಗೆ ಬಂದಿರುವ ವಿಷಯ ತಿಳಿದು ಅಲ್ಲಿನ ಜನರು ಅಪಾರ ಸಂಖ್ಯೆಯಲ್ಲಿ ಅಲ್ಲಿ ಸೇರಿ ಶಿವಾಜಿ ಮಹಾರಾಜರನ್ನು ಕಂಡು, ತಾವು ನಮ್ಮ ಮಹಾರಾಜರಾಗಿ ಇಲ್ಲಿಯೇ ಆಳ್ವಿಕೆ ನಡೆಸಬೇಕೆಂದು ವಿನಂತಿಸಿಕೊಂಡಿದ್ದರು. ಇದಕ್ಕೆ ಶಿವಾಜಿ ಮಹಾರಾಜರು ಕೂಡ ಒಪ್ಪಿ, ಮರಳಿ ಮತ್ತೆ ಹಂಪಿಗೆ ಬರುವುದಾಗಿ ತಿಳಿಸಿದ್ದರು ಎಂಬುದು ಇತಿಹಾಸದಿಂದ ತಿಳಿದು ಬರುತ್ತದೆ ಎಂದು ಹೇಳಿದರು.
ಸದ್ಯ ಧಾರವಾಡ ತಾಲೂಕಿನಲ್ಲಿರುವ ಯಾದವಾಡ ಗ್ರಾಮದ ಹನುಮಪ್ಪನ ದೇವಸ್ಥಾನದಲ್ಲಿ ಶಿವಾಜಿ ಮಹಾರಾಜರ ಶಿಲ್ಪಚಿತ್ರವಿದೆ. ಆ ಶಿಲ್ಪಚಿತ್ರದಲ್ಲಿ ಶಿವಾಜಿ ಮಹಾರಾಜರು ಬೆಳವಡಿ ಮಲ್ಲಮ್ಮಳ ಮಗ ನಾಗಭೂಷನನಿಗೆ ಹಾಲು ಕುಡಿಸುವ ಚಿತ್ರವಿದೆ. ಬೆಳವಡಿ ಮಲ್ಲಮ್ಮ ಹಾಗೂ ಶಿವಾಜಿ ಮಹಾರಾಜರ ಸೇನೆಯ ನಡುವೆ ಯುದ್ಧದ ಸಂದರ್ಭ ಎದುರಾದಾಗ ಶಿವಾಜಿ ಬೆಳವಡಿ ಮಲ್ಲಮ್ಮಳಿಗೆ ನೀನು ನನ್ನ ಸಹೋದರಿ, ನಿನ್ನ ಸೇನೆ ಹಾಗೂ ಸಾಮ್ರಾಜ್ಯದ ರಕ್ಷಣೆ ನನ್ನ ಹೊಣೆ ಎಂದು ಮಾತು ನೀಡಿದ್ದರ ಸಂಕೇತವಾಗಿದೆ ಎಂಬುದು ಇತಿಹಾಸದಲ್ಲಿ ದಾಖಲಾಗಿದೆ ಎಂದು ತಿಳಿಸಿದರು.
ಶಿವಾಜಿಯ ಸಹೋದರ ಸಂಭಾಜಿ ಅವರ ಸಮಾಧಿ ಕೊಪ್ಪಳದ ಕನಕಗಿರಿಯಲ್ಲಿದೆ. ಶಿವಾಜಿ ಅವರ ತಂದೆಯ ಸಮಾಧಿ ದಾವಣಗೆರೆ ಜಿಲ್ಲೆಯ ಚನ್ನಗೇರಿ ತಾಲೂಕಿನ ಹೊದ್ದಗೇರಿಯಲ್ಲಿದೆ ಎಂದು ಹೇಳಿದರು.
ಎಲ್ಲ ವಿಷಯಗಳಿಂದ ಕನ್ನಡಿಗರೂ ಹಾಗೂ ಮರಾಠಿಗರ ನಡುವೆ ಇತಿಹಾಸ ಕಾಲದೊಂದಲೂ ಅನ್ಯೋನ್ಯ ಸಂಬಂಧವಿದೆ ಎಂಬುದು ನಮಗೆ ತಿಳಿದು ಬರುತ್ತದೆ. ಆ ಅನ್ಯೋನ್ಯತೆಯನ್ನು ನಾವು ಕಾಪಾಡಿಕೊಂಡು, ಮುಂದುವರೆಸಿಕೊಂಡು ಸಾಗಬೇಕಿದೆ ಎಂದು ಯ.ರು. ಪಾಟೀಲ ಅವರು ಹೇಳಿದರು.
ಮರಾಠಾ ಸಮಾಜದ ಮುಖಂಡ ರಾಜೇಶ ಜಾಧವ ಅವರು ಅಧ್ಯಕ್ಷತೆ ವಹಿಸಿ, ಮಾತನಾಡಿದರು. ಮಹಾನಗರ ಪಾಲಿಕೆಯ ಸದಸ್ಯರಾದ ರಮೇಶ ಸೊಂಟಕ್ಕಿ ಹಾಗೂ ದೀಪಕ ಜಾಧವ ಕಾರ್ಯಕ್ರಮ ಉದ್ಘಾಟಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀಶೈಲ್ ಕರಿಶಂಕರಿ ಅವರು ಸ್ವಾಗತಿಸಿ, ನಿರೂಪಿಸಿದರು.
ಮಲ್ಲೇಶ ಚೌಗಲೆ, ಯಲ್ಲಪ್ಪ ಹುದಲಿ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಅದ್ಧೂರಿ ಮೆವಣಿಗೆ :
ಶಿವಾಜಿ ಉದ್ಯಾನದಿಂದ ಶಿವಾಜಿ ಮಹಾರಾಜರ ಭಾವಚಿತ್ರದ ಭವ್ಯ ಮೆರವಣಿಗೆಗೆ ಜರುಗಿತು. ಮಹಾನಗರ ಪಾಲಿಕೆಯ ಮಹಾಪೌರರಾದ ಸಂಜೋತಾ ಬಾಂದೇಕರ ಅವರು ಶಿವಾಜಿ ಮಹಾರಾಜರ ಪುತ್ಥಳಿ ಹಾಗೂ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ,ಮೆರವಣಿಗೆಗೆ ಚಾಲನೆ ನೀಡಿದರು.
ಶಿವಾಜಿ ಉದ್ಯಾನದಿಂದ ಆರಂಭವಾದ ಮೆರವಣಿಗೆ ಫುಲ್‍ಬಾಗ ಗಲ್ಲಿ ಮಾರ್ಗವಾಗಿ ನಾಥಪೈ ವೃತ್ತ ತಲುಪಿತು.
ಅಪರ ಜಿಲ್ಲಾಧಿಕಾರಿ ಸುರೇಶ ಇಟ್ನಾಳ, ಡಿಸಿಪಿ ಸೀಮಾ ಲಾಟ್ಕರ್ ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.
ಸಮಾಜದ ಮುಖಂಡರು, ವಿವಿಧ ಕಲಾತಂಡಗಳು ಸೇರಿದಂತ ನೂರಾರು ಜನರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

|  (  Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news