ಸಿತಾರ ವಾದನ

Sitar argument

ಬೆಳಗಾವಿ:(news belgaum )ಪ್ರೇಕ್ಷ್ಕರನ್ನು ರಂಜಿಸಿದ ಸಿತಾರವಾದನ ಕಾರ್ಯಕ್ರಮ ವಿಕ ಸುದ್ದಿಲೋಕ ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಇಲ್ಲಿಯ ರಾಣಿ ಚನ್ನಮ್ಮ ನಗರದಲ್ಲಿ ಸಂಘಟಿಸಲಾಗಿದ್ದ ಸಿತಾರ ಹಾಗೂ ವಿವಿಧ ತಂತಿವಾದ್ಯಗಳ ವಾದನ ಕಾರ್ಯಕ್ರಮ ಪ್ರೇಕ್ಷ್ಕರನ್ನು ರಂಜಿಸಿತು.
ಚನ್ನಮ್ಮ ನಗರದ ಆರ್ಕಿಡ್ಸ್ ಅಪಾರ್ಟ್‍ಮೆಂಟ್ ಸಭಾಂಗಣದಲ್ಲಿ ಅರುಂದತಿ ಮ್ಯೂಸಿಕ್ ಅಕಾಡೆಮಿ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತುಘಿ. ಅಕಾಡೆಮಿಯ ಶಿP್ಷÀಕಿ ಅರುಂದತಿ ಸುಖ್ಟಣಕರ್ ಮತ್ತು ಶಿಷ್ಯರು ಸುಮಾರು ಒಂದೂವರೆ ಗಂಟೆಗಳ ಕಾಲ ಸಂಗೀತ ಮತ್ತು ತಂತಿ ವಾದ್ಯಗಳನ್ನು ನುಡಿಸಿದರು.
ಗಣೇಶ ಮಣಿಮಾಲಾ ಸ್ತ್ರೋತ್ರದೊಂದಿಗೆ ಕಾಯಕ್ರಮ ಆರಂಭವಾಯಿತು. ಸಿತಾರದಲ್ಲಿ ಜಯೋಸ್ತುತೆ ಹಾಡು, ವಯೋಲಿನ್‍ನಲ್ಲಿ ಭಾಗ್ಯದ ಲಕ್ಷ್ಮಿ ಬಾರಮ್ಮ ಭಾರೀ ಕರತಾಡನ ಗಿಟ್ಟಿಸಿದವು. ಸೋಹನಿ, ತಿಲಕ ಕಾಮೋದ, ಹಂಸಧ್ವನಿ ಮೊದಲಾದ ರಾಗಗಳಲ್ಲಿ ವಿವಿಧ ತಂತಿವಾದ್ಯಗಳನ್ನು ನುಡಿಸಲಾಯಿತು. ಶುಭಾ ಹೆಗಡೆ, ಸುಜಾತಾ ಕುಲಕರ್ಣಿ, ಸ್ಮಿತಾ ನಾಡಕರ್ಣಿ, ಲಲಿತಾ ಹೆಗಡೆ, ಸುವರ್ಣಾ ಪಟ್ಟಣಶೆಟ್ಟಿಘಿ, ರಾಜೇಶ್ವರಿ ಕಾಮತ್, ಇಶಿತಾ ಸಜಿತ್, ಪಲ್ಲವಿ ಬೆಳಗಾಂವ್ಕರ್, ಧನದಾ ಸಜಿತ್, ವ್ದಿು£Å ತೋಶಿಖಾನೆ, ಸಂಗೀತಾ ತೋಶಿಖಾನೆ ಮೊದಲಾದವರು ಭಾಗವಹಿಸಿದ್ದರು. ಅವಧೂತ ಸುಖ್ಟಣಕರ್ ತಬಲಾ ಸಾಥ್ ನೀಡಿದರು.
ಇದೇ ವೇಳೆ ಶಿಷ್ಯವೃಂದದ ಪರವಾಗಿ ಶಿP್ಷÀಕಿ ಅರುಂದತಿ ಅವರನ್ನು ಸತ್ಕರಿಸಲಾಯಿತು. ಚಿನ್ಮಯ ಮಿಶನ್‍ನ ಸ್ವಾಮಿನಿ ಆರಾಧನಾ ಕಾರ್ಯಕ್ರಮ ಉದ್ಘಾಟಿಸಿದರು. ಸಮಿತಿ ಸಮೂಹ ಸಂಸ್ಥೆಗಳ ಚೇರಮನ್ ಜಗದೀಶ್ ಸವದತ್ತಿ, ಉಮಾ ಶಶಿಧರನ್, ಭಾರತಿ ಸುಖ್ಟಣಕರ್ ಮೊದಲಾದವರಿದ್ದರು. ಸ್ನೇಹಲ್ ಸುಖ್ಟಣಕರ್ ಮತ್ತು ಶುಭಾ ಹೆಗಡೆ ಕಾರ್ಯಕ್ರಮ ನಿರೂಪಿಸಿದರು. Sitar argument

| Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

 

 

Read Belgaum News & Updates for What’s Happening in Around You @ in News Belgaum Kannada News Portal.