ಬೆಳಗಾವಿಯಲ್ಲಿ 5ನೇ ಸತೀಶ ಶುಗರ್ಸ್ ಅವಾರ್ಡ್ಸ್ ಸಾಂಸ್ಕೃತಿಕ ಹಬ್ಬಕ್ಕೆ ಅದ್ಧೂರಿ ಚಾಲನೆThe 5th Satish Shugers Awards in Belgaum are a grand celebration for the cultural festival

The 5th Satish Shugers Awards in Belgaum are a grand celebration for the cultural festival

0 100


ಬೆಳಗಾವಿ:(newsbelgaum) ಸತೀಶ ಜಾರಕಿಹೊಳಿ ಫೌಂಡೇಶನ್ ಆಶ್ರಯದಲ್ಲಿ 2 ದಿನಗಳ 5ನೇ ಸತೀಶ ಶುಗರ್ಸ್ ಅವಾರ್ಡ್ಸ್ ಪ್ರತಿಭಾ ಪುರಸ್ಕಾರ ಸಾಂಸ್ಕೃತಿಕ ಹಬ್ಬಕ್ಕೆ ಸರ್ದಾರ್ ಹೈಸ್ಕೂಲ್ ಮೈದಾನದಲ್ಲಿ ಶನಿವಾರ ಅದ್ಧೂರಿ ಚಾಲನೆ ದೊರೆಯಿತು.

ಸರ್ದಾರ್ ಮೈದಾನದಲ್ಲಿ ನಿರ್ಮಿಸಿದ ಮೈಸೂರು ಅರಮನೆ ಮಾದರಿಯ ಭವ್ಯ ವೇದಿಕೆಯಲ್ಲಿ ಕಾರ್ಯಕ್ರಮ ಉದ್ಘಾಟಿಸಿದ 4ನೇ ಸತೀಶ ಶುಗರ್ಸ ಅವಾರ್ಡ್ಸ್ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಪಡೆದ ಎಂಎಚ್ ಪಿಎಸ್ ಪ್ರಾಥಮಿಕ ಶಾಲೆಯ ವೈಷ್ಣವಿ ಕಡೋಲ್ಕರ್ ಮಾತನಾಡಿ,  ಸತೀಶ ಶುಗರ್ಸ್ ಅವಾರ್ಡ್ಸ್ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ವೇದಿಕೆ ಗ್ರಾಮೀಣ ಪ್ರತಿಭೆಗಳಿಗೆ ಅತ್ಯುತ್ತಮ ವೇದಿಕೆಯಾಗಿದ್ದು, ಈ ವೇದಿಕೆಯ ಮೂಲಕ ಸುಪ್ತ ಪ್ರತಿಭೆಗಳು ಬೆಳಕು ಕಾಣುವಂತಾಗಿದೆ. ಇಂಥದೊಂದು ವೇದಿಕೆ ಕಲ್ಪಿಸುವ ಮೂಲಕ ಸತೀಶಣ್ಣಾ ಜಾರಕಿಹೊಳಿ ಅವರು ಪ್ರತಿಭಾವಂತ ಮಕ್ಕಳು ರಾಜ್ಯ, ರಾಷ್ಟ್ರಮಟ್ಟಕ್ಕೆ ಬೆಳೆಯಲು ಅನುಕೂಲ ಕಲ್ಪಿಸಿದ್ದಾರೆ. ಸಮಾಜ ಕೃತಜ್ಞತೆ ಸಲ್ಲಿಸುವ ಕೆಲಸ ಮಾಡಿದ್ದಾರೆ ಎಂದರು.The 5th Satish Shugers Awards in Belgaum are a grand celebration for the cultural festival

ಮಕ್ಕಳು ದೊಡ್ಡ ಕನಸು ಕಾಣುವುದನ್ನು ಮೊದಲು ಕಲಿಯಬೇಕು. ಗುರಿಯ ಕಡೆಗೆ ಲಕ್ಷ್ಯ ವಿಟ್ಟು ಸಾಧನೆ ಮಾಡಿದರೆ ವೈಯಕ್ತಿಕ ಸಾಧನೆಯ ಜೊತೆಗೆ ಸಮಾಜಕ್ಕೆ ಏನಾದರೂ ಕೊಡುಗೆ ನೀಡಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.

 ಹಿರಿಯ ಮುಖಂಡ ಅವಿನಾಶ್ ಪೋತ್ದಾರ್ ಮಾತನಾಡಿ, ಮಕ್ಕಳ ಪ್ರತಿಭೆಯನ್ನು ಬೆಳಕಿಗೆ ತರಲು ಸತೀಶ ಜಾರಕಿಹೊಳಿ ಅವರು ನಿರ್ಮಿಸಿರುವ ಈ ಕಾರ್ಯಕ್ರಮ  ಮಾದರಿಯಾಗಿದೆ. ಮಕ್ಕಳ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಕಾರ್ಯಕ್ರಮದ ರೂವಾರಿ ಸತೀಶ ಜಾರಕಿಹೊಳಿ ಅವರ ತಂಡ ಈ ನಿಟ್ಟಿನಲ್ಲಿ ಅತ್ಯುತ್ತಮ ಕೆಲಸ ಮಾಡುತ್ತಿದೆ ಎಂದು ಪ್ರಶಂಸಿಸಿ, ಪ್ರತಿಭಾವಂತ ಮಕ್ಕಳಿಗೆ ಪ್ರೋತ್ಸಾಹ ನೀಡಿ ಬೆಳೆಸುವುದು ಸಮಾಜದ ಜವಾಬ್ದಾರಿಯಾಗಿದೆ ಎಂದು ನೆನಪಿಸಿದರು.

  2 ದಿನಗಳ ಸಾಂಸ್ಕೃತಿಕ ಹಬ್ಬದಲ್ಲಿ  ಪ್ರಾಥಮಿಕ, ಪ್ರೌಢ, ಕಾಲೇಜು ಹೀಗೆ ಮೂರು ವಿಭಾಗಗಳಲ್ಲಿ ಸಾಂಸ್ಕೃತಿಕ ಸ್ಪರ್ಧೆಗಳು ನಡೆಯಲಿವೆ. ಸಂಗೀತ, ನಾಟ್ಯ, ಭಾಷಣ ಸೇರಿ ಹಲವು ಪ್ರಕಾರದಲ್ಲಿ ಸ್ಪರ್ಧೆಗಳು ನಡೆಯಲಿವೆ. ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಯುವ ಪ್ರತಿಭೆಗಳ ಗಾಯನಕ್ಕೆ ಗೋಕಾಕ್‍ನ ಮಾಡರ್ನ ಮೆಲೋಡಿ ಆರ್ಕೆಸ್ಟ್ರಾ ತಂಡ ಹಿನ್ನೆಲೆ ಸಂಗೀತ ಒದಗಿಸಿದೆ.

ಶನಿವಾರ ನಡೆದ ಪ್ರಾಥಮಿಕ, ಪ್ರೌ ಶಾಲೆ ವಿಭಾಗದ  ಸೋಲೋ ನೃತ್ಯ, ಸಮೂಹ ನೃತ್ಯ ಸ್ಪರ್ಧೆಯಲ್ಲಿ ಮಕ್ಕಳು ತಮ್ಮ ಕಲಾ ಪ್ರತಿಭೆಯನ್ನು ಪ್ರದರ್ಶಿಸಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು.

2 ದಿನ ನಡೆಯುವ ಅಂತಿಮ ಹಂತದ ಸ್ಪರ್ಧೆಯಲ್ಲಿ ಒಟ್ಟು  514 ಸ್ಪರ್ಧಾಳುಗಳು ಪಾಲ್ಗೊಳ್ಳಲಿದ್ದಾರೆ. ಸ್ಪರ್ಧೆಯಲ್ಲಿ ವಿಜೇತರಿಗೆ ಬೃಹತ್ ಮೊತ್ತದ ನಗದು ಬಹುಮಾನ, ಆಕರ್ಷಕ ಟ್ರೋಫಿ, ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುತ್ತಿದೆ.  ಒಟ್ಟು ಬಹುಮಾನದ ಮೊತ್ತ 15 ಲಕ್ಷ ರೂ.ಗೂ ಹೆಚ್ಚಿದ್ದು, 45 ಟ್ರೋಫಿಗಳನ್ನು ನೀಡಲಾಗುತ್ತದೆ.

ರಾಹುಲ್ ಸತೀಶಣ್ಣಾ ಜಾರಕಿಹೊಳಿ,  ಮತ್ತು ಪ್ರಿಯಾಂಕಾ  ಸತೀಶಣ್ಣಾ ಜಾರಕಿಹೊಳಿ,  ಅಬಕಾರಿ ಆಯುಕ್ತ ಡಾ.ಮಂಜುನಾಥ, ಎಸ್.ಎ.ರಾಮಗಾನಟ್ಟಿ, ಅಜಿತ್ ಸಿದ್ದಣ್ಣವರ, ಪಾಟೀಲ್  ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.The 5th Satish Shugers Awards in Belgaum are a grand celebration for the cultural festival

|  (  Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನಿಮ್ಮ ಅನಿಸಿಕೆ ಅಭಿಪ್ರಾಯ , ಸುದ್ದಿಗಳನ್ನು newsbelagavi@gmail.com ಗೆ ಕಳುಹಿಸಿ.

>>> News Belgaum – No.1 Kannada News Portal in Belagavi

ಜಾಹೀರಾತು , ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ : Mobile : 82175 55800