before post

ಮಾರ್ಚ್‍ನೊಳಗೆ 250 ಪಾಸ್‍ಪೋರ್ಟ್ ಸೇವಾಕೇಂದ್ರಗಳನ್ನು ಪ್ರಾರಂಭಿಸಲು ಕೇಂದ್ರ ಸರ್ಕಾರ ಉದ್ದೇಶಿಸಿದೆ : – ಜ್ಞಾನೇಶ್ವರ ಮುಲಾಯ service centers in March: –

The Central Government intends to launch 250 passport service centers in March: - Gyaneshwar Mulaya

0

News Belgaum-ಮಾರ್ಚ್‍ನೊಳಗೆ 250 ಪಾಸ್‍ಪೋರ್ಟ್ ಸೇವಾಕೇಂದ್ರಗಳನ್ನು ಪ್ರಾರಂಭಿಸಲು ಕೇಂದ್ರ ಸರ್ಕಾರ ಉದ್ದೇಶಿಸಿದೆ : - ಜ್ಞಾನೇಶ್ವರ ಮುಲಾಯಬೆಳಗಾವಿ: (news belgaum)ರಾಜ್ಯದ 30 ಜಿಲ್ಲೆಗಳಲ್ಲಿ 70 ಪಾಸ್‍ಪೋರ್ಟ್ ಸೇವಾ ಕೇಂದ್ರಗಳನ್ನು ಈಗಾಗಲೇ ಪ್ರಾರಂಭಿಸಲಾಗುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿಗಳಾದ ಜ್ಞಾನೇಶ್ವರ ಮುಲಾಯ ಅವರು ಹೇಳಿದರು.
ನಗರದ ಮುಖ್ಯ ಅಂಚೆ ಕಚೇರಿಯಲ್ಲಿ ಅಂಚೆ ಕಚೇರಿ ವತಿಯಿಂದ ಬುಧವಾರ (ಫೆ.14) ಹಮ್ಮಿಕೊಂಡಿದ್ದ ಅಂಚೆ ಕಚೇರಿ ಪಾಸ್‍ಪೋರ್ಟ್ ಸೇವಾ ಕೇಂದ್ರದ ಉದ್ಘಾಟನೆ ಕಾರ್ಯಕ್ರಮವನ್ನು ನೆರವೇರಿಸಿ ಅವರು ಮಾತನಾಡಿದರು.
ಈಗಾಲೇ ರಾಜ್ಯದಲ್ಲಿ 70 ಪಾಸ್‍ಪೋರ್ಟ್ ಸೇವಾಕೇಂದ್ರಗಳನ್ನು ಪ್ರಾಂಭಿಸಲಾಗುತ್ತಿದೆ. ಮಾರ್ಚ್‍ನೊಳಗೆ ದೇಶಾದ್ಯಂತ 250 ಪಾಸ್‍ಪೋರ್ಟ್ ಸೇವಾಕೇಂದ್ರಗಳನ್ನು ಪ್ರಾರಂಭಿಸಲು ಕೇಂದ್ರ ಸರ್ಕಾರ ಉದ್ದೇಶಿಸಿದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳು ದೇಶದಿಂದ ವಿದೇಶಕ್ಕೆ ತೆರಳಿ ಹೆಚ್ಚಿನ ವಿದ್ಯಾಭ್ಯಾಸ ಮಾಡಿ ಉತ್ತಮ ಸಾಧನೆ ಮಾಡಬೇಕು ಮತ್ತು ಜನಸಾಮಾನ್ಯರು ವಿದೇಶಕ್ಕೆ ಹೋಗಿ ಒಳ್ಳೆಯ ಉದ್ಯೋಗ ಪಡೆದುಕೊಳ್ಳಬೇಕೆನ್ನುವ ಉದ್ದೇಶದಿಂದ ಕೇಂದ್ರ ಸರ್ಕಾರವು ಬೆಂಗಳೂರು, ಬೆಳಗಾವಿ, ಹಾಸನ, ಧಾರವಾಡ ಹುಬ್ಬಳ್ಳಿ, ವಿಜಯಪುರ, ರಾಯಚೂರು, ಉಡಪಿ ಹಾಗೂ ಬಿದರ್ ಜಿಲ್ಲೆಗಳು ಸೇರಿದಂತೆ ಇತರ ಒಟ್ಟು 30 ಜಿಲ್ಲೆಗಳಲ್ಲಿ ಪಾಸ್‍ಪೋರ್ಟ್ ಸೇವಾ ಕೇಂದ್ರಗಳನ್ನು ಪ್ರಾರಂಭಿಸಲಾಗುತ್ತಿದೆ ಎಂದು ಹೇಳಿದರು.
ಬಹುಜನರ ಬೇಡಿಕೆಯಂತೆ, ಬಹುದಿನ ನಂತರ ಬೆಳಗಾವಿಯಲ್ಲಿ ಪಾಸ್‍ಪೋರ್ಟ್ ಸೇವಾಕೇಂದ್ರವು ಇಂದು ಲೋಕಾರ್ಪಣೆಗೊಳ್ಳುತ್ತಿದೆ. ದೇಶದಲ್ಲಿ ಒಟ್ಟು 8 ಕೋಟಿ ಜನರು ಪಾಸ್‍ಪೋರ್ಟ್‍ನ್ನು ಹೊಂದಿದ್ದಾರೆ. ಪಾಸ್‍ಪೋರ್ಟ್ ಸೇವಾ ಕೇಂದ್ರ ಸೇವೆಯಿಂದ ಮುಂಬರುವ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪಾಸ್‍ಪೋರ್ಟ್‍ನ್ನು ಪಡೆದುಕೊಳ್ಳಲಿದ್ದಾರೆ ಎಂದು ಹೇಳಿದರು.
ಸಂಸದರಾದ ಸುರೇಶ ಅಂಗಡಿ ಅವರು ಮಾತನಾಡಿ, ಫೆಬ್ರವರಿ 25 ರಿಂದ ಬೆಳಗಾವಿ-ಹೈದ್ರಾಬಾದ್ ಮಾರ್ಗವಾಗಿ ಹೊಸ ವಿಮಾನ ಸೇವೆ ಆರಂಭವಾಗಲಿದೆ ಎಂದು ತಿಳಿಸಿದರು.
ಸರಿಯಾದ ಗುರುತಿನ ಚೀಟಿ ನೀಡಿದರೆ ಕೇವಲ ಒಂದು ವಾರದಲ್ಲೇ ನಿಮ್ಮ ಕೈಗೆ ಪಾಸ್‍ಪೋರ್ಟ್ ಸಿಗಲಿದೆ. ಸಾರ್ವಜನಿಕರು ಈ ಪಾಸ್‍ಪೋರ್ಟ್ ಸೇವಾ ಕೇಂದ್ರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಸ್ಥಳೀಯ ಅಂಚೆ ಕಚೇರಿಯ ಮುಂದಿನ ವೃತ್ತಕ್ಕೆ ಪೋಸ್ಟಮನ್ ಸರ್ಕಲ್ ಮತ್ತು ರಸ್ತೆಗೆ ಅಂಚೆ ಕಚೇರಿ ಹೆಸರು ಇಡಬೇಕೆಂದು ಅಂಚೆ ಕಚೇರಿಯ ಅಧಿಕಾರಿಗಳ ಒತ್ತಾಯವಾಗಿದ್ದು, ಶೀಘ್ರದಲ್ಲಿ ಈ ಬೇಡಿಕೆಯನ್ನು ಇಡೇರಿಸುವುದಾಗಿ ಅಂಚೆ ಕಚೇರಿ ಸಿಬ್ಬಂದಿಗಳಿಗೆ ಭರವಸೆ ನೀಡಿದರು.
ಸಂಸದರಾದ ಪ್ರಕಾಶ ಹುಕ್ಕೇರಿ ಅವರು ಮಾತನಾಡಿ, ಪಾಸ್‍ಪೋರ್ಟ್ ಸೇವಾ ಕೆಂದ್ರವನ್ನು ಪ್ರತ್ಯೇಕ ಮತ್ತು ಸ್ವಂತ ಕಟ್ಟಡದಲ್ಲಿ ಪ್ರಾರಂಭಿಸಬೇಕು ಇದರಿಂದ ಪಾಸ್‍ಪೋರ್ಟ್‍ನ್ನು ಸಾರ್ವಜನಿಕರಿಗೆ ವೇಗವಾಗಿ ನೀಡಲು ಸಾಧ್ಯವಾಗುತ್ತದೆ. ಜಿಲ್ಲೆಯ ಹಲವು ಗ್ರಾಮಗಳಲ್ಲಿ ಅಂಚೆ ಕಚೇರಿಗಳು ಖಾಸಗಿ ಕಟ್ಟಡದಲ್ಲಿ ಇವೆ. ಕೂಡಲೇ ಸರ್ಕಾರಿ ಜಾಗದಲ್ಲಿ ಸ್ವಂತ ಕಟ್ಟಡ ಅಂಚೆ ಕಚೇರಿಗಳನ್ನು ಪ್ರಾರಂಭಿಸಬೇಕೆಂದು ಒತ್ತಾಯಿಸಿದರು.
ರಾಜ್ಯಸಭಾ ಸದಸ್ಯರಾದ ಡಾ. ಪ್ರಭಾಕರ ಕೋರೆ ಅವರು ಮಾತನಾಡಿ, ಕೇಂದ್ರದಲ್ಲಿ ನರೇದ್ರ ಮೋದಿ ಅವರು ಅಧಿಕಾರ ವಹಿಸಿಕೊಂಡಮೇಲೆ ದೇಶದಲ್ಲಿ ಜನರ ಭಾವನೆಗಳಲ್ಲಿ ಬೆಳವಣೆಗೆಯಾಗಿದೆ. ಶೇ. 23 ರಷ್ಟು ವಿದೇಶಿ ಪ್ರವಾಸಿಗರು ಸರಳ ಮತ್ತು ವೇಗವಾಗಿ ಪಾಸ್‍ಪೋರ್ಟ್ ಪಡೆದುಕೊಳ್ಳುತಿದ್ದಾರೆ ಎಂದು ಹೇಳಿದರು.
ಬೆಂಗಳೂರಿನ ಪಾಸ್‍ಪೋರ್ಟ್ ಇಲಾಖೆಯ ಪ್ರಾದೇಶಿಕ ಆಯುಕ್ತರಾದ ಭರತಕುಮಾರ ಕುಥಟಿ, ಜಿಲ್ಲಾಧಿಕಾರಿಗಳಾದ ಎಸ್. ಜಿಯಾವುಲ್ಲಾ, ಜಿಲ್ಲಾ ಪೊಲೀಸ್ ಆಯುಕ್ತರಾದ ಡಿ.ಸಿ. ರಾಜಪ್ಪ, ಅಂಚೆ ಕಚೇರಿಯ ಅಧೀಕ್ಷಿಕರಾದ ಎಸ್.ಪಿ ಕುಲಕರ್ಣಿ, ಧಾರವಾಡ ವಿಭಾಗದ ಅಂಚೆ ಕಚೇರಿ ಅಧಿಕಾರಿಗಳಾದ ಶ್ರೀಮತಿ ವೀಣಾ ಆರ್. ಶ್ರೀನಿವಾಸ, ಮಹಾನಗರ ಪಾಲಿಕೆಯ ಅಧ್ಯಕ್ಷೆಯಾದ ಶ್ರೀಮತಿ ಸಂಜೋತಾ ಬಾಂದೇಕರ್ ಸೇರಿದಂತೆ ಇನ್ನಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಮಹೇಶ್ವರಿ ಅಂದ ಮಕ್ಕಳ ಶಾಲೆಯ ವಿದ್ಯಾರ್ಥಿಗಳು ರಾಷ್ಟ್ರಗೀತೆ ಹಾಡಿದರು. The Central Government intends to launch 250 passport service centers in March: – Gyaneshwar Mulaya

|  (  Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.