ಯೋಜನಾ ಬದ್ಧವಾದ ವಿದ್ಯಾರ್ಥಿಯ ಜೀವನ ಸಾಧನೆಗೆ ಮಾರ್ಗ :ಸಿ.ಇ.ಓ ರಾಮಚಂದ್ರನ.ಆರ್

The path to the life of the planned student: CIO Ramachandra R.R.

ಬೆಳಗಾವಿ: (news belgaum)ಭಾರತೀಯ ನಾಗರಿಕ ಸೇವಾ ಪರೀಕ್ಷೆಯನ್ನು ಎದುರಿಸುವ ಬಗ್ಗೆ ಸವಿಸ್ತಾರವಾಗಿ ಮಾರ್ಗದರ್ಶನ ನೀಡಿದರು. ಯೋಜನಾ ಬದ್ಧವಾದ ವಿದ್ಯಾರ್ಥಿಯ ಜೀವನ ಸಾಧನೆಗೆ ಮಾರ್ಗ ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಮಚಂದ್ರನ ಆರ್ ಅವರು ಹೇಳಿದರು.
ಜನವರಿ 28 ರಂದು ಬೆಳಿಗ್ಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ, ಬೆಳಗಾವಿ ನಗರದ ಬಾಲಕರ ವಸತಿ ನಿಲಯಗಳ ಸಮುಚ್ಛಯ ಕಣಬರ್ಗಿ ಇಲ್ಲಿ ವಿದ್ಯಾರ್ಥಿಗಳಿಗಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರ್ವ ತಯಾರಿ ಮಾಹಿತಿ ಕಾರ್ಯಗಾರದಲ್ಲಿ ಅವರು ಮಾತನಾಡಿ ಪರೀಕ್ಷಾ ತಯ್ಯಾರಿಗಾಗಿ ಮಾನಸಿಕ ಸಿದ್ದತೆ ಹಾಗೂ ಬಹು ವಿಷಯಗಳ ಬಗ್ಗೆ ಆಸಕ್ತಿಯನ್ನು ಹೇಗೆ ಬೆಳೆಸಿಕೊಳ್ಳಬೇಕು ಎಂಬುದರ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು.


ಕಾರ್ಯಾಗಾರದಲ್ಲಿ ಉಪನ್ಯಾಸಕರಾದ ಶಂಕರಾನಂದ ಬನಶಂಕರಿ ಅವರು ಮಾತನಾಡಿ ಮಾನಸಿಕ ಸಾಮಥ್ರ್ಯ ವಿಷಯದ ಬಗ್ಗೆ ವಿವರಿಸಿದರು.

2014ರ ಕರ್ನಾಟಕ ಲೋಕಸೇವಾ ಆಯೋಗದ ಯಶಸ್ವಿ ಅಭ್ಯರ್ಥಿಗಳಾದ ಶ್ರೀ ಯಲ್ಲರಾಜ ಸಿಂಗನ್ನವರ ಹಾಗೂ ಶ್ರೀ ಅಶೋಕ ಮಿರ್ಜಿ ಇವರು ವಿವಿಧ ವಿಷಯಗಳ ಬಗ್ಗೆ ಉಪನ್ಯಾನ ನೀಡಿದರು.
ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಅಧಿಕಾರಿಗಳಾದ ಶ್ರೀ. ಪುಂಡಲೀಕ ಅನವಾಲ ಇವರು ಸಾಮಾನ್ಯ ಅಧ್ಯಯನದ ಬಗ್ಗೆ ಉಪನ್ಯಾಸ ನೀಡಿದರು.
ಕಾರ್ಯಾಗಾರದಲ್ಲಿ ಶ್ರೀ ರಾಮನಗೌಡ ಕನ್ನೊಳ್ಳಿ ಜಿಲ್ಲಾ ಅಧಿಕಾರಿಗಳು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಬೆಳಗಾವಿ, ಶ್ರೀ. ಸಿ. ಎಂ. ಢವಳೇಶ್ವರ ತಾಲೂಕಾ ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳು ಬೆಳಗಾವಿ ಹಾಗೂ ಸಂಬಂಧಿಸಿದ ನಿಲಯದ ನಿಲಯಪಾಲಕರು ಉಪಸ್ಥಿತರಿದ್ದರು.

| Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

 

Read Belgaum News & Updates for What’s Happening in Around You @ in News Belgaum Kannada News Portal.